ನಾಗಾಲ್ಯಾಂಡ್‌ನ ಮೊದಲ ಮಹಿಳಾ ಶಾಸಕಿ, ಇತಿಹಾಸ ರಚಿಸಿದ ಬಿಜೆಪಿ ಮೈತ್ರಿಕೂಟದ ಹೆಕಾನಿ!
ನಾಗಾಲ್ಯಾಂಡ್ ಚುನಾವಣೆ ಫಳಿತಾಂಶ ಬಹುತೇಕ ಹೊರಬಿದ್ದಿದೆ. ಬಿಜೆಪಿ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದಿದೆ. ಇದರ ಜೊತೆಗೆ ಹೊಸ ಇತಿಹಾಸವೂ ಸೃಷ್ಟಿಯಾಗಿದೆ. ಬಿಜೆಪಿ ಮೈತ್ರಿಕೂಟದ ಹೆಕಾನಿ ಜಕ್ಲೌ ನಾಗಾಲ್ಯಾಂಡ್‌ನ ಮೊದಲ ಮಹಿಳಾ ಶಾಸಕಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದುವರೆಗೆ ನಾಗಾಲ್ಯಾಂಡ್ ವಿಧಾನಸಭೆಗೆ ಒಬ್ಬರೇ ಒಬ್ಬರು ಮಹಿಳಾ ಶಾಸಕಿ ಆಯ್ಕೆಯಾಗಿರಲಿಲ್ಲ.
ನಾಗಾಲ್ಯಾಂಡ್(ಮಾ.02): ತ್ರಿಪುರಾ, ನಾಗಾಲ್ಯಾಂಡ್ ಹಾಗೂ ಮೆಘಾಲಯ ವಿಧಾಸಭಾ ಚುನಾವಣೆಗಳ ಫಲಿತಾಂಶ ಬಹುತೇಕ ಹೊರಬಿದ್ದಿದೆ.ಮೆಘಾಲಯದಲ್ಲಿ ಬಿಜೆಪಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, ನಾಗಾಲ್ಯಾಂಡ್ ಹಾಗೂ ತ್ರಿಪುರಾದಲ್ಲಿ ಬಿಜೆಪಿ ಮೈತ್ರಿಕೂಟ ಸ್ಪಷ್ಟಬಹುತ ಪಡೆದಿದೆ. ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎನ್‌ಡಿಪಿಪಿ ಮೈತ್ರಿ ಕೂಟ 36ಕ್ಕೂ ಹೆಚ್ಚು ಸ್ಥಾನ ಗೆದ್ದುಕೊಂಡಿದೆ. ಸ್ಪಷ್ಟಬಹುಮತ ಪಡೆದಿರುವ ಬಿಜೆಪಿ ಮೈತ್ರಿಕೂಟ ಸರ್ಕಾರ ರಚನೆ ಕಸರತ್ತಿನ ಚಿತ್ತ ಹರಿಸಿದೆ. ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಂದು ಇತಿಹಾಸ ರಚನೆಯಾಗಿದೆ. ಇದೇ ಮೊದಲ ಬಾರಿಗೆ ನಾಗಾಲ್ಯಾಂಡ್ ವಿಧಾನಸಭೆಗೆ ಮಹಿಳಾ ಶಾಸಕಿ ಆಯ್ಕೆಯಾಗಿದ್ದಾರೆ. ಬಿಜೆಪಿ ಮೈತ್ರಿಕೂಟದ ಹೆಕಾನಿ ಜಕ್ಲೌ ಈ ಸಾಧನೆ ಮಾಡಿದ್ದಾರೆ.
ಬಿಜೆಪಿ ಮೈತ್ರಿ ಪಕ್ಷವಾಗಿರುವ ಎನ್‌ಡಿಪಿಪಿ ಅಭ್ಯರ್ಥಿ ಹೆಕಾನಿ ಜಕ್ಲೌ ನಾಗಾಲ್ಯಾಂಡ್‌ನ ದಿಮಾಪುರ್ 3ನೇ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ರಾಮ್ ವಿಲಾಸ್ ಅವರ ಲೋಕ್ ಜನಶಕ್ತಿ ಪಾರ್ಟಿಯ ಎಝೆಟೋ ಝಿಮೊಮಿ ವಿರುದ್ಧ 1,536 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ. ಹೆಕಾನಿ ಜಕ್ಲೌ 14,395 ಮತಗಳನ್ನು ಪಡೆದಿದ್ದಾರೆ. ಎದುರಾಳಿ ಅಭ್ಯರ್ಥಿ ಝಿಮೋಮಿ 12,859 ಮತಗಳನ್ನು ಪಡೆದಿದ್ದಾರೆ. ವೃತ್ತಿಯಲ್ಲಿ ವಕೀಲೆಯಾಗಿರುವ ಹೆಕಾನಿ ಇದೀಗ ಹೊಸ ಅಧ್ಯಾಯ ಬರೆದಿದ್ದಾರೆ.
ತ್ರಿಪುರ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ, ಲೆಕ್ಕಕ್ಕಿಲ್ಲದಂತಾದ ಕಾಂಗ್ರೆಸ್!
ನಾಗಾಲ್ಯಾಂಡ್‌ನಿಂದ ಮಹಿಳಾ ನಾಯಕಿರು ಮುನ್ನಲೆಗೆ ಬಂದಿರುವುದು ತೀರಾವಿರಳ. ಈ ಬಾರಿಯ ವಿಧಾನಸಭಾ ಚುನಾವಣೆಗೆ ಹೆಕಾನಿ ಸೇರಿದಂತೆ ಸಾಲ್ಹೌಟು ಕ್ರುಸೆ, ಹುಕಾಲಿ ಸೆಮಾ, ರೊಸಿ ಥಾಮ್ಸನ್ ನಾಲ್ವರು ಮಹಿಳೆಯರು ಚುನಾವಣಾ ಅಖಾಡಕ್ಕೆ ಇಳಿದಿದ್ದರು. ಇದರಲ್ಲಿ ಹೆಕಾನಿ ಗೆಲುವು ದಾಖಲಿಸಿ ಮೊದಲ ಬಾರಿಗೆ ನಾಗಾಲ್ಯಾಂಡ್ ವಿಧಾನಸಭೆ ಪ್ರವೇಶಿಸುತ್ತಿರುವ ಮಹಿಳಾ ನಾಯಕಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನಾಗಾಲ್ಯಾಂಡ್‌ನಿಂದ ವಿಧಾನಸೌಧ ಹಾಗೂ ಲೋಕಸಭೆಗೆ ಆಯ್ಕೆಯಾದ ನಾಯಕಿರು ಹುಡಿಕಿದರೂ ಸಿಗುವುದು ಕಷ್ಟ. ಕಾರಣ 1977ರಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ ಮೂಲಕ ಸ್ಪರ್ಧಿಸಿದ ರಾನೊ ಮೆಸೆ ಶಾಜಿಯಾ ಲೋಕಸಭೆ ಪ್ರತಿನಿಧಿಸಿದ್ದರು. ರಾನೊ ನಾಗಾಲ್ಯಾಂಡ್‌ನ ಮೊದಲ ಸಂಸದೆ ಮಾತ್ರವಲ್ಲ, ಮೊದಲ ಯಶಸ್ವಿ ಮಹಿಳಾ ರಾಜಕೀಯ ನಾಯಕಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇವರ ಬಳಿಕ ಕಳೆದ ವರ್ಷ ಬಿಜೆಪಿ ಪಕ್ಷ ಎಸ್ ಪಂಗ್ಯೊಂಗ್ ಕೊನ್ಯಾಕ್ ಅವರನ್ನು ರಾಜ್ಯಸಭೆಗೆ ಕಳುಹಿಸಿತ್ತು. ಕೊನ್ಯಾಕ್ ನಾಗಾಲ್ಯಾಂಡ್‌ನಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.
ಇದೀಗ ಹೆಕಾನಿ ನಾಗಾಲ್ಯಾಂಡ್ ವಿಧಾನಸಭೆಗೆ ಪ್ರವೇಶ ಪಡೆಡಿದ್ದಾರೆ. ಇದೀಗ ರಾಜ್ಯಸಭೆ ಹಾಗೂ ವಿಧಾನಸಭೆಯಲ್ಲಿ ತಲಾ ಒಬ್ಬೊಬ್ಬರು ನಾಗಾಲ್ಯಾಂಡ್ ಮಹಿಳೆಯರು ಅವಕಾಶ ಪಡೆದಿದ್ದಾರೆ. ಇನ್ನು ಎನ್‌ಡಿಪಿಪಿ ಪಕ್ಷದ ಸಾಲ್ಹೌಟು ಕ್ರುಸೆ ಫಲಿತಾಂಶ ಹೊರಬಿದ್ದಿಲ್ಲ. ಸದ್ಯದ ಮಟ್ಟಿಗೆ ಕ್ರುಸೆ ಮುನ್ನಡೆ ಕಾಯ್ದುಕೊಂಡಿದ್ದಾರೆ.
ನನ್ ಹೆಂಡ್ತಿನೂ ಹೀಗೆ ಕೈ ಹಿಡಿದಿಲ್ಲ ಎಂದ ಗಾಯಕ: ಬನ್ನಿ ಕೈ ಹಿಡಿದು ಕಮಲ ಮುಡಿಸುವೆ ಎಂದ ಸಚಿವ
ಫೆಬ್ರವರಿ 27 ರಂದು ನಾಗಾಲ್ಯಾಂಡ್ ಚುನಾವಣೆ ನಡೆದಿತ್ತು. ನಾಗಾಲ್ಯಾಂಡ್‌ನಲ್ಲಿ ಶೇಕಡಾ 74ರಷ್ಟು ಮತದಾನವಾಗಿತ್ತು. ನಾಗಾಲ್ಯಾಂಡ್‌ನಲ್ಲಿ 60 ವಿಧಾಸಭಾ ಕ್ಷೇತ್ರಗಳಿವೆ. ಇದರಲ್ಲಿ ಒಂದು ಕ್ಷೇತ್ರದಿಂದ ಅವಿರೋಧ ಆಯ್ಕೆ ನಡೆದಿತ್ತು. ಹೀಗಾಗಿ 59 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ನಾಗಾಲ್ಯಾಂಡ್‌ನಲ್ಲಿ ಹಾಲಿ ಅಧಿಕಾರದಲ್ಲಿರುವ ಎನ್‌ಡಿಪಿಪಿ ಹಾಗೂ ಬಿಜೆಪಿ ಮೈತ್ರಿಕೂಟ ಈ ಬಾರಿಯೂ ಸ್ಪಷ್ಟ ಬಹುಮತ ಪಡೆದಿದೆ.