Asianet Suvarna News Asianet Suvarna News

ಸಚಿವರ ವಿದೇಶ ಪ್ರವಾಸಕ್ಕೆ ನರೇಂದ್ರ ಮೋದಿ ಬ್ರೇಕ್!

ಸಚಿ​ವರ ವಿದೇಶ ಪ್ರವಾ​ಸ​ಕ್ಕೆ ಮೋದಿ ಬ್ರೇಕ್‌ | ಸಭೆ ಸಮಾ​ರಂಭ, ಪ್ರವಾ​ಸದಿಂದ ದೂರ ಇರುವಂತೆ ಜನ​ರಲ್ಲಿ ಮನ​ವಿ | ಪ್ರವಾಸೋದ್ಯಮಕ್ಕೆ 8,500 ಕೋಟಿ ನಷ್ಟ!

No Union minister to travel abroad tweets PM Modi
Author
Bengaluru, First Published Mar 13, 2020, 10:11 AM IST

ನವ​ದೆ​ಹ​ಲಿ (ಮಾ. 13): ಕೊರೋನಾ ವೈರಸ್‌ ವ್ಯಾಪ​ಕ​ವಾಗಿ ಹರ​ಡು​ತ್ತಿ​ರುವ ಹಿನ್ನೆ​ಲೆ​ಯಲ್ಲಿ ಸಚಿ​ವರ ವಿದೇ​ಶ ಪ್ರವಾ​ಸಕ್ಕೆ ಪ್ರಧಾನಿ ನರೇಂದ್ರ ಮೋದಿ ಬ್ರೇಕ್‌ ಹಾಕಿ​ದ್ದಾ​ರೆ. ಅಲ್ಲದೇ ಅನ​ಗತ್ಯ ಪ್ರಯಾಣ ಮತ್ತು ಸಭೆ- ಸಮಾ​ರಂಭ​ಗಳಿಂದ ದೂರ ಉಳಿ​ಯಿರಿ ಎಂದು ಜನ​ರಲ್ಲಿ ಮನವಿ ಮಾಡಿ​ದ್ದಾ​ರೆ.

ಸರಣಿ ಟ್ವೀಟ್‌​ಗ​ಳನ್ನು ಮಾಡಿ​ರುವ ಮೋದಿ, ಕೊರೋನಾ ವೈರ​ಸ್‌ ಬಗ್ಗೆ ಜನರು ಆತಂಕ​ಗೊ​ಳ್ಳುವ ಅಗ​ತ್ಯ​ವಿ​ಲ್ಲ. ಆದರೆ, ಮುಂಜಾಗ್ರತಾ ಕ್ರಮ​ಗ​ಳನ್ನು ಕೈಗೊ​ಳ್ಳುವ ಅಗ​ತ್ಯ​ವಿದೆ. ಮುಂಬ​ರು​ವ ದಿನ​ಗ​ಳಲ್ಲಿ ಕೇಂದ್ರದ ಯಾವುದೇ ಸಚಿ​ವರು ವಿದೇಶ ಪ್ರವಾಸ ಕೈಗೊ​ಳ್ಳು​ತ್ತಿಲ್ಲ. ಎಲ್ಲರ ಸುರ​ಕ್ಷ​ತೆಯ ದೃಷ್ಟಿ​ಯಿಂದ ರಾಜ್ಯ ಮತ್ತು ಸಚಿ​ವಾ​ಲ​ಯ​ಗಳು ಹಲ​ವಾರು ಕ್ರಮ​ಗ​ಳನ್ನು ಕೈಗೊಂಡಿವೆ ಎಂದು ತಿಳಿಸಿದ್ದಾರೆ.

ಅನ​ಗತ್ಯ ಪ್ರವಾ​ಣ​ವನ್ನು ರದ್ದು ಮಾಡು​ವಂತೆ ನಾನು ಜನ​ರಲ್ಲಿ ಮನವಿ ಮಾಡು​ತ್ತೇನೆ. ನಾವು ಸೋಂಕು ಒಬ್ಬ​ರಿಂದ ಒಬ್ಬ​ರಿಗೆ ಹರ​ಡು​ವು​ದನ್ನು ತಡೆ​ಯ​ಬ​ಹು​ದಾ​ಗಿದೆ. ಸಭೆ ಸಮಾ​ರಂಭ​ಗ​ಳಿಂದ ದೂರ ಉಳಿ​ಯು​ವ​ ಮೂಲಕ ಎಲ್ಲರ ಸುರ​ಕ್ಷ​ತೆ​ಯ​ನ್ನು ಖಾತ​ರಿ​ಪ​ಡಿ​ಸಿ​ಕೊ​ಳ್ಳ​ಬ​ಹು​ದಾ​ಗಿದೆ ಎಂದು ಹೇಳಿ​ದ್ದಾರೆ.

ವಿದೇಶದಲ್ಲಿರುವ ಕನ್ನಡಿಗರು ಸುರಕ್ಷಿತ ವಾಪಸ್‌: ರಾಮುಲು

ಇಳಿದ ಸೋಂಕು ಕೇಸ್‌!

ಬೀಜಿಂಗ್‌: ಕರ್ನಾಟಕ ಸೇರಿದಂತೆ ದೇಶಾದ್ಯಂತ ಮಾರಕ ಕೊರೋನಾ ವೈರಸ್‌ ವ್ಯಾಪಕವಾಗಿ ಹಬ್ಬುತ್ತಿರುವಾಗಲೇ, ಸುಮಾರು 3200 ಮಂದಿ ಬಲಿಪಡೆದಿರುವ ಚೀನಾದಲ್ಲಿ ಈ ವೈರಸ್‌ಗೆ ಬಲಿಯಾಗುತ್ತಿರುವ ಮತ್ತು ತುತ್ತಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖದತ್ತ ಸಾಗಿದೆ. ಸೋಂಕಿತರ ಸಂಖ್ಯೆ ಇದೇ ಮೊದಲ ಬಾರಿಗೆ ಒಂದಂಕಿಗೆ ಕುಸಿದಿದೆ. ವುಹಾನ್‌ನಲ್ಲಿ ಕೇವಲ 8 ಮಂದಿಯಲ್ಲಿ ಸೋಂಕು ಕಂಡುಬಂದಿದೆ. ಇದೇ ವೇಳೆ ಮೃತರ ಸಂಖ್ಯೆ 11ಕ್ಕೆ ಕುಸಿದಿದೆ.

ಅಲ್ಲದೆ, ಈ ವೈರಸ್‌ ಜನನ ಸ್ಥಳವಾಗಿರುವ ವುಹಾನ್‌ನಲ್ಲಿ ಇದೇ ಮೊದಲ ಬಾರಿಗೆ ಕೊರೋನಾಕ್ಕೆ ಸಿಲುಕಿದವರ ಸಂಖ್ಯೆ 8ಕ್ಕೆ ಇಳಿದಿದೆ. ಚೀನಾದ ಮುಖ್ಯ ಭೂಮಿಕೆಯಲ್ಲಿ ಹೊಸದಾಗಿ 15 ಮಂದಿ ಕೊರೋನಾಕ್ಕೆ ತುತ್ತಾಗಿದ್ದು, 11 ಮಂದಿ ಬಲಿಯಾಗಿದ್ದಾರೆ. ಆದರೆ, ಹುಬೇ ಪ್ರಾಂತ್ಯದ 16 ನಗರಗಳಲ್ಲಿ ಕಳೆದ 7 ದಿನಗಳಿಂದಲೂ ಹೊಸದಾಗಿ ಕೊರೋನಾಕ್ಕೆ ಸಿಲುಕಿದ ಬಗ್ಗೆ ವರದಿಗಳಿಲ್ಲ.

ಪ್ರಕಾರ, ಬುಧವಾರದವರೆಗೂ ಚೀನಾದಲ್ಲಿ ಕೊರೋನಾಕ್ಕೆ 3169 ಮಂದಿ ಬಲಿಯಾಗಿದ್ದು, ಈ ವ್ಯಾಧಿಗೆ 80,793 ಮಂದಿ ತುತ್ತಾಗಿದ್ದಾರೆ.

ಬೆಂಗಳೂರಲ್ಲಿ ಸ್ವಲ್ಪವೂ ಟ್ರಾಫಿಕ್ ಇಲ್ಲ : ವಾಹನಗಳೇ ಹೆಚ್ಚು ರೋಡಿಗಿಳಿಯುತ್ತಿಲ್ಲ

‘ಫಾರೆಸ್ಟ್‌ ಗಂಪ್‌’ ಖ್ಯಾತಿಯ ಟಾಮ್‌ ಹಾಂಕ್ಸ್‌ಗೆ ವೈರಸ್‌

ಲಾಸ್‌ ಏಂಜಲೀಸ್‌: ‘ಫಾರೆಸ್ಟ್‌ ಗಂಪ್‌’ ಸಿನಿಮಾ ಖ್ಯಾತಿಯ ಹಾಲಿವುಡ್‌ ನಟ ಟಾಮ್‌ ಹಾಂಕ್ಸ್‌ ಹಾಗೂ ಅವರ ಪತ್ನಿಗೆ ಕೊರೋನಾ ವೈರಸ್‌ ಸೋಂಕು ಬಾಧಿಸಿದೆ. ಈ ವಿಚಾರವನ್ನು ಸ್ವತಃ ಹಾಂಕ್ಸ್‌ ಅವರೇ ತಿಳಿಸಿದ್ದು, ತನಗೆ ಹಾಗೂ ತನ್ನ ಪತ್ನಿ ರಿಟಾ ವಿಲ್ಸನ್‌ಗೆ ಕೊರೋನಾ ತಗುಲಿದ್ದಾಗಿ ಟ್ವೀಟರ್‌ನಲ್ಲಿ ತಿಳಿಸಿದ್ದಾರೆ. ಸದ್ಯ ಸಿನಿಮಾ ಚಿತ್ರೀಕರಣದ ನಿಮಿತ್ತ ದಂಪತಿ ಆಸ್ಪ್ರೇಲಿಯಾದಲ್ಲಿ ಇದ್ದು, ಆಯಾಸದಿಂದ ಬಳಲುತ್ತಿದ್ದರು. ಈ ವೇಳೆ ಪರೀಕ್ಷೆ ನಡೆಸಿದಾಗ ಸೋಂಕು ತಟ್ಟಿರುವುದು ಗೊತ್ತಾಗಿದೆ.

ಪ್ರವಾಸೋದ್ಯಮಕ್ಕೆ 8,500 ಕೋಟಿ ನಷ್ಟ!

ಕೊರೋನಾ ವ್ಯಾಧಿ ಮತ್ತಷ್ಟುಹರಡುವುದನ್ನು ತಡೆಯಲು ಒಂದು ತಿಂಗಳ ಕಾಲ ವೀಸಾ ರದ್ದು ಮಾಡಿದ ಸರ್ಕಾರದ ನಿರ್ಧಾರದಿಂದಾಗಿ ಪ್ರವಾಸೋದ್ಯಮ ಹಾಗೂ ವಿಮಾನಯಾನ ಕ್ಷೇತ್ರಕ್ಕೆ ಬರೋಬ್ಬರಿ 8500 ಕೋಟಿ ರು. ನಷ್ಟವಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ ಈ ಕ್ಷೇತ್ರಗಳಿಗೆ ಉದ್ಯೋಗ ಕಡಿತ ಹಾಗೂ ನಿರುದ್ಯೋಗದ ಭೀತಿ ಎದುರಾಗಿದೆ.

ಒಂದು ತಿಂಗಳ ಕಾಲ ಭಾರತಕ್ಕೆ ಪ್ರವಾಸ ರದ್ದು ಮಾಡಿರುವ ನಿರ್ಧಾರದಿಂದಾಗಿ ಆರ್ಥಿಕತೆಗೆ ಹೊಡೆತ ಬೀಳಲಿದ್ದು, ಉದ್ಯೋಗ ನಷ್ಟದ ಜತೆಗೆ ಹೊಟೇಲ್‌, ವಿಮಾನಯಾನ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಿಗೆ 8,500 ಕೋಟಿ ರು. ನಷ್ಟಉಂಟಾಗಲಿದೆ ಎಂದು ಭಾರತೀಯ ಪ್ರವಾಸ ನಿರ್ವಾಹಕರ ಸಂಘದ ಕಾರ್ಯದರ್ಶಿ ರಾಜೇಶ್‌ ಮುದ್ಗಿಲ್‌ ಹೇಳಿದ್ದಾರೆ.

'ಕೈ, ಬಾಯಿಗೆ ಬ್ರಾಂದಿ ಹಾಕ್ಕೊಂಡ್ರೆ ಕೊರೋನಾ ಸಾಯುತ್ತಾ’?

ಅಗತ್ಯ ಪ್ರವಾಸಗಳಿಂದಾಗಿ ದೈನಂದಿನ ನಿರ್ವಹಣೆ ಮಾತ್ರ ಸಾಧ್ಯವಾಗಿದ್ದು, ಮುಂದಿನ ಹತ್ತು ದಿನದೊಳಗೆ ಪರಿಸ್ಥಿತಿ ಸುಧಾರಣೆಯಾಗದೇ ಇದ್ದಲ್ಲಿ ಪ್ರವಾಸೋದ್ಯಮ ಕ್ಷೇತ್ರ ವಾಸ್ತವವಾಗಿ ನಿಲ್ಲಲಿದೆ. ಹೀಗಾದರೆ ಉದ್ಯೋಗ ಕಡಿತ ಹಾಗೂ ಹೊಸ ಉದ್ಯೋಗಿಗಳನ್ನು ಸೇರಿಸಿಕೊಳ್ಳುವುದು ನಿಲ್ಲಿಸಬೇಕಾಗುತ್ತದೆ ಎನ್ನುವುದು ಉದ್ಯಮಿಗಳ ಅಳಲು.

 

Follow Us:
Download App:
  • android
  • ios