ತಿರುವನಂತಪುರಂ (ಅ.16): ಸ್ವಂತ ಕ್ಷೇತ್ರ ವಯನಾಡ್‌ನಲ್ಲಿ ಶಾಲೆಯೊಂದರ ಉದ್ಘಾಟನೆಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಅವಕಾಶ ನಿರಾಕರಿಸಲಾಗಿದೆ. ವಯನಾಡ್‌ನ ಮುಂಡೇರಿ ಸರ್ಕಾರಿ ಶಾಲೆಯ ನೂತನ ಕಟ್ಟಡದ ಉದ್ಘಾಟನೆ ಗುರುವಾರ ನಿಗದಿಯಾಗಿತ್ತು. 

ಯೋಜನೆ ಪ್ರಕಾರ ಬೆಳಿಗ್ಗೆ 10.15ಕ್ಕೆ ಶಾಲೆ ಉದ್ಘಾಟನೆಯಾಗುವುದಿತ್ತು. ಆದರೆ ಎಡಪಕ್ಷಗಳ ಆಡಳಿತ ಇರುವ ಸ್ಥಳೀಯಾಡಳಿತ ಸಂಸ್ಥೆ ಕಡೇ ಘಳಿಗೆಯಲ್ಲಿ ಅನುಮತಿ ನಿರಾಕರಿಸಿದೆ.

 ಉದ್ಘಾಟನೆ ಸಂಬಂಧ ರಾಹುಲ್‌ ಅವರ ಸಮಯ ಕೋರಿ ಸ್ಥಳೀಯಾಡಳಿತ ಸಂಸ್ಥೆಯ ಅಧ್ಯಕ್ಷ ಪತ್ರ ಬರೆದಿದ್ದರು.

ರಾಹುಲ್ ಬಗ್ಗೆ ತರೂರ್ ಹೊಸ ಬುಕ್- ಡಿಕ್ಷನರಿಯಲ್ಲೂ ಸಿಗಲ್ಲ ಅರ್ಥ? .

ಅಂತೆಯೇ ಅ.15ರಂದು ರಾಹುಲ್‌ ತಮ್ಮ ಸಮಯ ನೀಡಿದ್ದರು. ಹೀಗಾಗಿ ಗುರುವಾರ ವರ್ಚುವಲ್‌ ಕಾನ್ಫರೆನ್ಸ್‌ ಮೂಲಕ ರಾಹುಲ್‌ ಗಾಂಧಿ ಉದ್ಘಾಟನೆ ಮಾಡವವರಿದ್ದರು. ಆದರೆ ಶಿಷ್ಟಾಚಾರ ಪಾಲನೆ ಹಾಗೂ ರಾಜ್ಯ ಶಿಕ್ಷಣ ಮಂತ್ರಿಗೆ ಈ ಬಗ್ಗೆ ಮಾಹಿತಿ ನೀಡಬೇಕಿರುವುದರಿಂದ ಸ್ಥಳಿಯಾಡಳಿತ ಕಾರ್ಯಕ್ರಮ ರದ್ದು ಮಾಡಿದೆ.