Asianet Suvarna News Asianet Suvarna News

ರಾಹುಲ್ ಬಗ್ಗೆ ತರೂರ್ ಹೊಸ ಬುಕ್- ಡಿಕ್ಷನರಿಯಲ್ಲೂ ಸಿಗಲ್ಲ ಅರ್ಥ?

ಸುಳ್ ಸುದ್ದಿ:  ಶಶಿ ತರೂರ್ ಪದ  ಬಳಕೆ ಕುರಿತು ಬಿಡಿಸಿ ಹೇಳಬೇಕಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಬಳಿಕ ಇದೀಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕುರಿತು ಹೊಸ ಪುಸ್ತಕ ಬರೆದಿದ್ದಾರೆ. ಈ ಪುಸ್ತಕದಲ್ಲಿ ಬಳಸಿರೋ ಪದಕಗಳು ಯಾವ ಡಿಕ್ಷನರಿಯಲ್ಲೂ ಇಲ್ಲ.

Fake news Shashi Taroor new book about rahul Gandi will surprise vocabulary
Author
Bengaluru, First Published Oct 13, 2018, 9:41 AM IST
  • Facebook
  • Twitter
  • Whatsapp

ನವದೆಹಲಿ(ಅ.13): ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಇತ್ತೀಚೆಗೆ ಪುಸ್ತಕವೊಂದನ್ನು ಬರೆದಿದ್ದ ಕಾಂಗ್ರೆಸ್‌ ಮುಖಂಡ ಶಶಿ ತರೂರ್‌, ಯಾರಿಂದಲೂ ಉಚ್ಛರಿಸಲಾಗದ, ಯಾರಿಂದಲೂ ಅರ್ಥ ಮಾಡಿಕೊಳ್ಳಲಾಗದ 29 ಅಕ್ಷರಗಳ ಶಬ್ದವೊಂದನ್ನು ಪರಿಚಯಿಸಿದ್ದರು. 

ಇದೀಗ ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಬಗ್ಗೆ ಹೊಸ ಪುಸ್ತಕವೊಂದನ್ನು ಬರೆದಿದ್ದಾರೆ. ಅಚ್ಚರಿಯೆಂದರೆ ಇದರಲ್ಲಿ ಬಳಸಿದ ಶಬ್ದಗಳು ಆಕ್ಸ್‌ಫರ್ಡ್‌ ಡಿಕ್ಷನರಿಯಲ್ಲೂ ಇಲ್ಲ. ತರೂರ್‌ ಅವರೇ ಹೊಸ ಶಬ್ದಗಳನ್ನು ಹುಟ್ಟುಹಾಕಿದ್ದು, ಈ ಶಬ್ದಗಳ ಬಗ್ಗೆ ಇಂಗ್ಲಿಷ್‌ ಪಂಡಿತರು ಗಹನವಾದ ಅಧ್ಯಯನದಲ್ಲಿ ತೊಡಗಿದ್ದಾರೆ. 

ಅವುಗಳ ಅರ್ಥ ಗೊತ್ತಾಗುವವರೆಗೂ ಪುಸ್ತಕವನ್ನು ಬಿಡುಗಡೆ ಮಾಡುವಂತೆ ಆಕ್ಸ್‌ಫರ್ಡ್‌ ಸಂಸ್ಥೆ ತರೂರ್‌ ಅವರಲ್ಲಿ ಮನವಿ ಮಾಡಿದೆ ಎಂದು ಸುಳ್‌ ಸುದ್ದಿ ಮೂಲಗಳು ತಿಳಿಸಿವೆ.
 

Follow Us:
Download App:
  • android
  • ios