ಅರುಣಾಚಲ ಪ್ರದೇಶದ ಪುಟ್ಟ ಪೋರನ ಗುನುಗಿದ ಗಲ್ಲಿ ಬಾಯ್ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು, ಅಪ್ನ ಟೈಮ್ ಆಯೇಗಾ ಹುಡುಗನ ಹಾಡಿನ ಜೊತೆಗೆ ಎನರ್ಜಿಗೆ ನೆಟ್ಟಿಗರು ಬೋಲ್ಡ್  

ಅರುಣಾಚಲ ಪ್ರದೇಶ(ಅ.09): ಕಳೆದ ಕೆಲ ದಿನಗಳಿಂದ ಅರುಣಾಚಲ ಪ್ರದೇಶ ಭಾರಿ ಸದ್ದು ಮಾಡುತ್ತಿದೆ. ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶಕ್ಕೆ ಚೀನಾ ಸೇನೆ ನುಗ್ಗಿ ಅತಿಕ್ರಣಕ್ಕೆ ಯತ್ನಿಸಿದೆ ಅನ್ನೋ ಸುದ್ದಿ ಭಾರಿ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಇದೇ ಅರುಣಾಚಲ ಪ್ರದೇಶದಿಂದ ತಂಪನೆಯ, ಮನಸ್ಸು ಚಿಲ್ ಮಾಡುವ ಸುದ್ದಿ ಇದೆ. ಪುಟ್ಟ ಪೋರ ಗಲ್ಲಿ ಬಾಯ್ ಚಿತ್ರದ ಅಪ್ನಾ ಟೈಮ್ ಅಯೇಗಾ ಹಾಡನ್ನು ಹಾಡಿದ್ದಾನೆ. ಇದು ವೈರಲ್ ಆಗಿದೆ.

1 ಕ್ವಾರ್ಟರ್‌ ಅಂದ್ರೆ ಎಷ್ಟು? ಟೀಚರ್‌ ಪ್ರಶ್ನೆಗೆ ವಿದ್ಯಾರ್ಥಿಯ ಶಾಕಿಂಗ್ ಉತ್ತರ!

ಅರುಣಾಚಲ ಪ್ರದೇಶದ ಈ ಪೋರ ಅಪ್ನ ಟೈಮ್ ಆಯೇಗಾ ರ್ಯಾಪ್ ಸಾಂಗನ್ನು ಹಾಡಿದ್ದಾರೆ. ಇದರ ಜೊತೆಗೆ ಹುಡುಗನ ನಟನೆ, ಜೋಶ್ ಎಲ್ಲರನ್ನು ಚಕಿತಗೊಳಿಸಿದೆ. ಉತ್ಸಾಹದಲ್ಲಿ, ಹೈ ಎನರ್ಜಿಯಲ್ಲಿ ರ್ಯಾಪ್ ಸಾಂಗ್ ಹಾಡಿದ್ದಾನೆ. ಜೊತೆಗೆ ಹುಡುಗನ ಡ್ಯಾನ್ಸ್ ನೆಟ್ಟಿಗರ ಗಮನಸೆಳೆದಿದೆ.

Scroll to load tweet…

ಪಂದ್ಯ ಸೋತರೂ ಪ್ರೀತಿ ಗೆದ್ದ ಸಿಎಸ್‌ಕೆ ಬೌಲರ್.. ಮೈದಾನದ ಹೊರಗೊಂದು ಕ್ಯೂಟ್ ಲವ್ ಸ್ಟೋರಿ!

ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅಭಿನಯಿಸಿದ ಗಲ್ಲಿ ಬಾಯ್ ಹಾಡನ್ನು ಹಾಡೋ ಮೂಲಕ ಪುಟ್ಟ ಪೋರ ಸಾಮಾಜಿಕ ಜಾಲತಾಣದಲ್ಲಿ ಹೀರೋ ಆಗಿದ್ದಾನೆ. ಹುಡುಗನ ಪುಟಾಣಿ ಗೆಳೆಯರು ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಈ ವೇಳೆ ಹುಡುಗನನ್ನು ಹುರಿದುಂಬಿಸಿದ್ದಾರೆ.

ಸೀರಿಯಲ್ ನೋಡ್ತಿದ್ದ ಅಮ್ಮನಿಗೆ ಮಗಳ ಕಾಟ.. ಬಾಕ್ಸ್ ತಲೆಮೇಲೆ..ಫನ್ನಿ ವಿಡಿಯೋ

ಯುವ ಅರುಣಾಚಲ ಟ್ವಿಟರ್ ಖಾತೆ ಈ ವಿಡಿಯೋ ಹಂಚಿಕೊಂಡಿದೆ. ಭಾರತದಲ್ಲಿ ಪ್ರತಿಭೆಗೆ ಮಿತಿಯಿಲ್ಲ, ಇತರ ಎಲ್ಲಿಯೂ ಸಿಗುವುದಿಲ್ಲ. ಅರುಣಾಚಲ ಪ್ರದೇಶದ ಮೊನ್ಪಾ ಸ್ಥಳೀಯ ಹುಡುಗನ ಬಾಲಿವುಡ್ ರ್ಯಾಪ್ ಹಾಡು ಎಂದು ಟ್ವಿಟರ್ ಖಾತೆಯಲ್ಲಿ ಬರೆಯಲಾಗಿದೆ.

ಹುಡುಗನ ಪತಿಭೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಸುರಿಮಳೆ ಸುರಿಸಲಾಗಿದೆ.

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…