Asianet Suvarna News Asianet Suvarna News

1 ಕ್ವಾರ್ಟರ್‌ ಅಂದ್ರೆ ಎಷ್ಟು? ಟೀಚರ್‌ ಪ್ರಶ್ನೆಗೆ ವಿದ್ಯಾರ್ಥಿಯ ಶಾಕಿಂಗ್ ಉತ್ತರ!

* ಆನ್‌ಲೈನ್‌ ತರಗತಿಯಲ್ಲಿ ಶಿಕ್ಷಕನ ಪ್ರಶ್ನೆಗೆ ವಿದ್ಯಾರ್ಥಿಯ ಶಾಕಿಂಗ್ ಉತ್ತರ

* ಒಂದು ಕ್ವಾರ್ಟರ್ ಅಂದ್ರೆ ಅಂದ್ರೆ ವಿದ್ಯಾರ್ಥಿ ಹೀಗನ್ನೋದಾ?

* ವಿದ್ಯಾರ್ಥಿಯ ತಪ್ಉ ಸರಿಪಡಿಸಿದ ಶಿಕ್ಷಕ

Viral video Teacher asks ek quarter me kitna hota hai student says 30 ml pod
Author
Bangalore, First Published Oct 9, 2021, 3:30 PM IST
  • Facebook
  • Twitter
  • Whatsapp

ನವದೆಹಲಿಆ.09): ಕೊರೋನಾದಿಂದಾಗಿ(Covid 19) ವಿದ್ಯಾರ್ಥಿಗಳ ಶಾಲಾ ಬದುಕಿಗೆ ಬ್ರೇಕ್ ಬಿದ್ದಿದ್ದು, ಆನ್‌ಲೈನ್ ಶಿಕ್ಷಣ(Online Class) ವ್ಯವಸ್ಥೆ ಜಾರಿಗೆ ಬಂದಿದೆ. ಹೀಗಿರುವಾಗ ಅನೇಕ ಚಿತ್ರ ವಿಚಿತ್ರ ವಿಡಿಯೋಗಳು ಆಗಾಗ್ಗೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಸದ್ಯ ಇಂತಹುದೇ ವಿಡಿಯೋ ಒಂದು ವೈರಲ್ ಆಗಿದ್ದು, ಆನ್‌ಲೈನ್ ತರಗತಿಯಲ್ಲಿ ಸಿಎ ವಿದ್ಯಾರ್ಥಿಯೊಬ್ಬ/9Student) ಅಧ್ಯಾಪಕರ ಪ್ರಶ್ನೆಗೆ ಕೊಟ್ಟಿರುವ ಶಾಕಿಂಗ್ ಉತ್ತರ ಭಾರೀ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಎಡ್ನೋವೇಟ್‌ನ ಸ್ಥಾಪಕ ಸದಸ್ಯ ಸಿಎ ಧವಲ್ ಪುರೋಹಿತ್ ಸಿಎ(Chartered Accountant) ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾ 'ನೀವೆಲ್ಲರೂ ಮೊಟ್ಟ ಮೊದಲು ಒಂದು ಕ್ವಾರ್ಟರ್‌ನಲ್ಲಿ ಎಷ್ಟಿರುತ್ತದೆ ಎಂದು ತಿಳಿದುಕೊಳ್ಳಿ. ಹೆತ್ವಿಕ್‌, ನೀನೇ ಹೇಳು ಒಂದು ಕ್ವಾರ್ಟರ್‌ನಲ್ಲಿ ಎಷ್ಟಿರುತ್ತದೆ?' ಎಂದು ಪ್ರಶ್ನಿಸಿದ್ದಾರೆ. ಹೀಗಿರುವಾಗ ವಿದ್ಯಾರ್ಥಿ '30 ಎಂ. ಎಲ್' ಎಂದು ಬರೆದಿದ್ದಾನೆ. ಈ ಉತ್ತರ ನೋಡಿದ ಮರುಕ್ಷಣವೇ ಪುರೋಹಿತ್‌ರವರು(Dhawal Purohit) ಅದಲ್ಲಪ್ಪ ಎಂದಿದ್ದಾರೆ. ಅಷ್ಟರಲ್ಲಾಗಲೇ ವಿದ್ಯಾರ್ಥಿ ತೀವ್ರ ಮುಜುಗರಕ್ಕೀಡಾಗಿದ್ದಾನೆ. 

ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ ಸೇರಿದಂತೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. ಅನೇಕರು ಹೆತ್ವಿಕ್ ಅಂದ್ರೆ ಯಾರು ಎಂದು ತಿಳಿದುಕೊಳ್ಳುವ ಉತ್ಸಾಹ ತೋರಿಸಿದ್ದಾರೆ. 

ಇನ್ನು ಈ ವಿಡಿಯೋಗೆ ಮಜಾದಾಯಕ ಕಮೆಂಟ್‌ಗಳೂ ಬಂದಿವೆ. ಒಬ್ಬಾತ ಈಗಿನ ಮಕ್ಕಳ ಯೋಚನೆಯೇ ಬೇರೆಯೇ ಇರುತ್ತದೆ ಎಂದಿದ್ದರೆ, ಮತ್ತೊಬ್ಬಾತ ಇಂತಹ ಇಂಟರೆಸ್ಟಿಂಗ್ ಉತ್ತರಗಳು ಸಿಎ ತರಗತಿಯಲ್ಲಷ್ಟೇ ಸಿಗಲು ಸಾಧ್ಯ ಎಂದಿದ್ದಾರೆ.

ಮತ್ತೊಬ್ಬಾತ ಈ ಹೆತ್ವಿಕ್ ಯಾರು ಎಂದು ಪ್ರಶ್ನಿಸಿದರೆ, ಮತ್ತೊಬ್ಬಾತ ಧವಲ್ ಸರ್ ಮುಖಭಾವ ಚೆನ್ನಾಗಿದೆ ಎಂದಿದ್ದಾರೆ

ನಾನು ಯಾವತ್ತೂ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳುವ ಅವಕಾಶ ನಿಡುತ್ತೇನೆ. ಈ ಮೂಲಕ ವಿಭಿನ್ನವಾಗಿ ಅವರಿಗೆ ಪಾಠ ಹೇಳಿ ಅರ್ಥೈಸುತ್ತೇನೆ. ಹೀಗಿದ್ದರೂ ಕೆಲ ವಿದ್ಯಾರ್ಥಿಗಳು ವಿಚಿತ್ರವಾಗಿ ಉತ್ತರಿಸುತ್ತಾರೆ. ಆದರೆ ಈ ವೇಳೆ ಅವರನ್ನು ಸರಿಪೊಡಿಸುವುದು ಅಧ್ಯಾಪಕರಾದ ನಮ್ಮ ಕರ್ತವ್ಯ. ಹೀಗಾಗಿ ಒಂದು ಕ್ವಾರ್ಟರ್ ಅಂದ್ರೆ 30ml ಅಥವಾ 180ml ಅಲ್ಲ, ಬದಲಾಗಿ ಮೂರು ತಿಂಗಳು ಎಂಬುವುದು ಸರಿ ಉತ್ತರ ಎಂದಿದ್ದಾರೆ ಪುರೋಹಿತ್.

Follow Us:
Download App:
  • android
  • ios