ಯಾವುದೇ ಸ್ಥಿರಾಸ್ತಿ ಇಲ್ಲ, ಪ್ರಧಾನಿ ಮೋದಿ ಆಸ್ತಿ ವಿವರ ಘೋಷಿಸಿದ ಕಾರ್ಯಾಲಯ!

ಪ್ರಧಾನಿ ಕಾರ್ಯಾಲಯ ನರೇಂದ್ರ ಮೋದಿ ಆಸ್ತಿ ವಿವರಗಳನ್ನು  ಪ್ರಕಟಿಸಿದೆ. 2021-22ರ ಸಾಲಿನಲ್ಲಿ ಪ್ರಧಾನಿ ಮೋದಿ ಆದಾಯ, ಬ್ಯಾಂಕ್ ಬ್ಯಾಲೆನ್ಸ್ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಪ್ರಧಾನಿ ಕಾರ್ಯಾಲಯ ಬಹಿರಂಗ ಪಡಿಸಿದೆ.

No immovable property Movable Assets up by Rs 26 Lakh PM Office declares Narendra Modi assets ckm

ನವದೆಹಲಿ(ಆ.09): ಚುನಾವಣೆ ವೇಳೆ ರಾಜಕಾರಣಿಗಳ ಆಸ್ತಿ ವಿವರ ಘೋಷಣೆ ಭಾರಿ ಕುತೂಹಲ ಕೆರಳಿಸುತ್ತದೆ. ಕಾರಣ ವರ್ಷದಿಂದ ವರ್ಷಕ್ಕೆ ರಾಜಕಾರಣಿಗಳ ಆಸ್ತಿ ಒಂದೆರೆಡು ಕೋಟಿಯಲ್ಲ, ನೂರು ಇನ್ನೂರು ಕೋಟಿಗಳಷ್ಟು ಏರಿಕೆ ಕಾಣುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ತದ್ವಿರುದ್ಧ. 2021-22ರ ಸಾಲಿನಲ್ಲಿ ಮೋದಿ ಆಸ್ತಿ ವಿವರನ್ನು ಪ್ರಧಾನಿ ಕಾರ್ಯಾಲಯ ಘೋಷಿಸಿದೆ. 2021-22ರ ಸಾಲಿನಲ್ಲಿ ಪ್ರಧಾನಿ ಮೋದಿ ಬ್ಯಾಂಕ್ ಬ್ಯಾಲೆನ್ಸ್ 26.13 ಲಕ್ಷ ರೂಪಾಯಿ ಏರಿಕೆಯಾಗಿದೆ. ಇದನ್ನು ಹೊರತು ಪಡಿಸಿದರೆ ಮೋದಿಗೆ ಯಾವುದೇ ಸ್ಥಿರಾಸ್ತಿ ಇಲ್ಲ. ಗುಜರಾತ್‌ಲ್ಲಿದ್ದ ತನ್ನ ಪಾಲಿನ ನಿವೇಶವನ್ನು ದಾನ ಮಾಡಿದ್ದಾರೆ. ಹೀಗಾಗಿ ಮೋದಿ ಹೆಸರಿನಲ್ಲಿ ಯಾವುದೇ ಸ್ಥಿರಾಸ್ತಿ ಇಲ್ಲ. ಇನ್ನು ಫಿಕ್ಸೆಡ್ ಡೆಪಾಸಿಟ್, ಬ್ಯಾಂಕ್ ಬ್ಯಾಲೆನ್ಸ್, ರಾಷ್ಟ್ರೀಯ ಉಳಿತಾಯ ಯೋಜನೆ, ವಿಮೆ, ಆಭರಣ, ಕೈಯಲ್ಲಿರುವ ನಗದು ಹಣ ಒಟ್ಟು  2,23,82,504 ರೂಪಾಯಿ. ಕಳೆದ ಸಾಲಿನಲ್ಲಿ ಈ ಮೊತ್ತ  1,97,68,885 ರೂಪಾಯಿ ಆಗಿತ್ತು.

ಪ್ರಧಾನಿ ಮೋದಿ ತಮ್ಮ ಆಸ್ತಿ ವಿವರ ಘೋಷಣೆ ದಾಖಲೆಯಲ್ಲಿ ಸ್ಥಿರಾಸ್ತಿ ಕಾಲಂನಲ್ಲಿ ಇಲ್ಲ ಎಂದು ನಮೂದಿಸಿದ್ದಾರೆ. ಕಾರಣ ಗುಜರಾತ್‌ನಲ್ಲಿದ್ದ   401/A ಸರ್ವೆ ನಂಬರ್‌ನಲ್ಲಿ ನಿವೇಶನ ಹೊಂದಿದ್ದರು. ಈ ನಿವೇಶದಲ್ಲಿ ಮೋದಿ ಶೇಕಡಾ 25 ರಷ್ಟು ಪಾಲು ಹೊಂದಿದ್ದರು. ಇನ್ನುಳಿದ ಶೇಕಡಾ 75 ರಷ್ಟು ಪಾಲನ್ನು ಇನ್ನುಳಿದ ಮೂವರು ಹೊಂದಿದ್ದಾರೆ. ಆದರೆ ಪ್ರಧಾನಿ ಮೋದಿ ತಮ್ಮ ಹೆಸರಿನಲ್ಲಿದ್ದ ಶೇಕಡಾ 25 ರಷ್ಟು ಪಾಲನ್ನು ದಾನ ಮಾಡಿದ್ದಾರೆ. ಹೀಗಾಗಿ ಮೋದಿ ಹೆಸರಲ್ಲಿ ಯಾವುದೇ ಸ್ಥಿರಾಸ್ತಿ ಹೊಂದಿದ್ದಾರೆ.

 

Declare Assets 3 ತಿಂಗಳ ಒಳಗೆ ಆಸ್ತಿ ವಿವರ ಘೋಷಿಸಿ, ಸಚಿವರಿಗೆ ಯೋಗಿ ಖಡಕ್ ಸೂಚನೆ!

ಕಳೆದ ವರ್ಷದ ಮೋದಿ ಆಸ್ತಿ ವಿವರ ಘೋಷಿಸಿದ ದಾಖಲೆ ಪತ್ರದಲ್ಲಿ ತಮ್ಮ ಸ್ಥಿರಾಸ್ತಿ ಕುರಿತು ಉಲ್ಲೇಖಿಸಿದ್ದರು. ಶೇಕಡಾ 25 ರಷ್ಟು ಪಾಲು ಹೊಂದಿದ ನಿವೇಶನ 2002ರಲ್ಲಿ ಮೋದಿ ಖರೀದಿಸಿದ್ದರು. ಕಳೆದ ವರ್ಷ ಇದರ ಮಾರುಕಟ್ಟೆ ಮೌಲ್ಯ 1.10 ಕೋಟಿಯಾಗಿತ್ತು. ಆದರೆ ಈ ನಿವೇಶನವನ್ನು ಮೋದಿ ದಾನ ಮಾಡಿದ್ದಾರೆ. 

ಪ್ರಧಾನಿ ಮೋದಿ ಕೈಯಲ್ಲಿ 35,250 ರೂಪಾಯಿ ನಗದು ರೂಪಾಯಿ ಇದೆ. ಕಳೆದ ವರ್ಷ 36,900 ರೂಪಾಯಿ ನಗದು ಹಣವಿತ್ತು. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಬ್ಯಾಂಕ್ ಬ್ಯಾಲೆನ್ಸ್ 1,52,480 ರೂಪಾಯಿ ಆಗಿತ್ತು. ಈ ಬಾರಿ ಮೋದಿ ಬ್ಯಾಂಕ್ ಬ್ಯಾಲೆನ್ಸ್  46,555 ರೂಪಾಯಿಗೆ ಕುಸಿದಿದೆ. ರಾಷ್ಟ್ಪೀಯ ಉಳಿತಾಯ ಯೋಜನೆಯಲ್ಲಿ ಮೋದಿ 8.9 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ. ಎಲ್ ಎಂಡ್ ಟಿ ಬಾಂಡ್ನಲ್ಲಿ ಹೂಡಿಕೆ ಮಾಡಿದ 1.5 ಲಕ್ಷ ರೂಪಾಯಿ ಇದೆ. 2012ರಲ್ಲಿ 20,000 ರೂಪಾಯಿ ಹೂಡಿಕೆ ಮಾಡಿದ್ದರು. 1.48 ಲಕ್ಷ ರೂಪಾಯಿ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳಿವೆ.

ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲದ ವೆಬ್‌ಸೈಟ್‌ನಲ್ಲಿ 10 ಕೇಂದ್ರ ಸಚಿವರ ಆಸ್ತಿ ವಿವರ ಮಾಹಿತಿಯನ್ನು ಬಹಿರಂಗ ಪಡಿಸಿದೆ. ರಾಜನಾಥ್ ಸಿಂಗ್, ಆರ್‌ಕೆ ಸಿಂಗ್, ಧರ್ಮೇಂದ್ರ ಪ್ರಧಾನ್, ಹರ್ದೀಪ್ ಸಿಂಗ್ ಪುರಿ, ಜಿ ಕಿಶನ್ ರೆಡ್ಡಿ, ಜ್ಯೋತಿರಾದಿತ್ಯ ಸಿಂಧಿಯಾ, ಪುರುಷೋತ್ತಮ್ ರೂಪಾಲಾ, ವಿ ಮುರಳೀಧರನ್, ಫಗನ್ ಸಿಂಗ್ ಹಾಗೂ ಮುಕ್ತಾರ್ ಅಬ್ಬಾಸ್ ನಖ್ವಿ ಅಸ್ತಿ ವಿವರಗಳನ್ನು ಬಹಿರಂಗ ಪಡಿಸಲಾಗಿದೆ.

10 ಕೋಟಿ ಆಸ್ತಿಯ ಅಜ್ಜಿ ಸಾವು: ಚಟ್ಟದ ಮೇಲೆಯೇ ಹೆಬ್ಬೆಟ್ಟು ಒತ್ತಿಸಿಕೊಂಡ ಸಂಬಂಧಿಕರು
 

Latest Videos
Follow Us:
Download App:
  • android
  • ios