Declare Assets 3 ತಿಂಗಳ ಒಳಗೆ ಆಸ್ತಿ ವಿವರ ಘೋಷಿಸಿ, ಸಚಿವರಿಗೆ ಯೋಗಿ ಖಡಕ್ ಸೂಚನೆ!

  • ಸಂಪುಟದ ಸಹೋದ್ಯೋಗಿಗಳಿಗೆ ಯೋಗಿ ಸೂಚನೆ
  • 3 ತಿಂಗಳ ಒಳಗೆ ಆನ್‌ಲೈನ್‌ನಲ್ಲಿ ಆಸ್ತಿ ಘೋಷಿಸಿ
  • ಯೋಗಿ ಮಾರ್ಗ ಅನುಸರಿಸುತ್ತಾರಾ ಸಿಎಂ ಬೊಮ್ಮಾಯಿ
     
Uttar Pradesh CM Yogi adityanath ask ministers and bureaucrats to Declare Assets Online ckm

ನವದೆಹಲಿ (27) : `ನಿಮ್ಮ ಆಸ್ತಿಯನ್ನು ಈಗಲೇ ಘೋಷಿಸಿ. ಅದು ಆನ್ ಲೈನ್ ಲಭ್ಯವಾಗುವಂತೆ ನೋಡಿಕೊಳ್ಳಿ'. ಈ ಮಾತು ಹೇಳಿರುವುದು ತನ್ನ ಮಂತ್ರಿಮಂಡಲದ ಮಂತ್ರಿಗಳಿಗೆ. ಈ ಮಾತು ಹೇಳಿದವರು ಬಿಜೆಪಿ ಫೈರ್ ಬ್ರಾಂಡ್ ಸಿಎಂ ಯೋಗಿ ಅಧಿತ್ಯನಾಥ್. ಯೋಗಿ2.0 ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ತಿಂಗಳಾದ ಹಿನ್ನೆಲೆಯಲ್ಲಿ ವಿಶೇಷ ಸಭೆ ನಡೆಸಿದ ಸಿಎಂ ಯೋಗಿ ಅದಿತ್ಯನಾಥ್, ಸಂಪುಟದ ಸಹೋದ್ಯೋಗಿಗಳಿಗೆ ಇಂಥದೊಂದು ಖಡಕ್ ಸೂಚನೆ ನೀಡಿದ್ದಾರೆ.

ಮೋದಿ-ಯೋಗಿ ಮಾಡೆಲ್ ಮುಂದಿಟ್ಟು ಈ ಬಾರಿ ಯುಪಿಯಲ್ಲಿ ಚುನಾವಣೆಯಲ್ಲಿ ಅಧಿಕಾರ ಧಕ್ಕಿಸಿಕೊಂಡ ಬಿಜೆಪಿ, ಯೋಗಿ ಅಧಿತ್ಯನಾಥರನ್ನು ಮತ್ತೊಮ್ಮೆ ಅಂದರೆ ಎರಡನೇ ಅವಧಿಗೆ ಸಿಎಂ ಮಾಡಿತು. ಯೋಗಿ 1.0ನಲ್ಲಿ ಕ್ರೈಮ್ ಕ್ಲೀನ್ ಅಭಿಯಾನ ಹಮ್ಮಿಕೊಂಡು ಇಡೀ ಯು ಪಿ ಮತದಾರರ ಅದರಲ್ಲೂ ಮಹಿಳಾ ಮತದಾರರ ಮನಸ್ಸು ಗೆದ್ದು ಯೋಗಿ ಮಾಡೆಲ್ ಅಂತಲೇ ಅಧಿತ್ಯನಾಥರು ಹೊಸ ಮಡೆಲ್ ಸೃಷ್ಟಿ ಮಾಡಿದರು. ಜೊತೆಗೆ ಸರ್ಕಾರದ ಎಲ್ಲಾ ಸ್ಕೀಮ್‌ಗಳು ನೇರವಾಗಿ ಮತದಾರರ ಮನೆ ತಲುಪುವಂತೆ ನೋಡಿಕೊಂಡ `ಲಾಭಾರ್ತಿ' ಫ್ಯಾಕ್ಟರ್ ಚುನಾವಣೆಯಲ್ಲಿ ಮತ್ತೊಮ್ಮೆ ಕೈಹಿಡಿಯುವಂತೆ ಮಾಡಿತು. ಈಗ ಅಂದರೆ 2.0 ಅಸ್ಥಿತ್ವಕ್ಕೆ ಬಂದ ಕೂಡಲೇ `ರಥ ತಮ್ಮ ಸಂಪುಟದ ದಿಂದಲೇ ಶುರುವಾಗಲಿ' ಅಂಥ ಸ್ವಚ್ಛ ಹಾಗು ಪಾರದರ್ಶಕ ಕ್ಯಾಬಿನೆಟ್‌ಗೆ ಚಾಲನೆ ನೀಡಿದ್ದಾರೆ.

ಧಾರ್ಮಿಕ ಸ್ಥಳಗಳಲ್ಲಿದ್ದ 778 ಧ್ವನಿವರ್ಧಕಗಳನ್ನು ತೆರವು ಮಾಡಿದ ಉತ್ತರ ಪ್ರದೇಶ!

ಆನ್‌ಲೈನ್‌ನಲ್ಲಿ ಆಸ್ತಿ ಘೋಷಿಸಿ : ಯೋಗಿ ಅವರ ಹೊಸ ಶೈಲಿಯ ಆಡಳಿತದ ಮೊದಲ ಹೆಜ್ಜೆ ಇದು. ಉತ್ತರ ಪ್ರದೇಶದ ಸಂಪುಟದ ಎಲ್ಲಾ ಸದಸ್ಯರು ಕೂಡ ತಮ್ಮ ಹಾಗು ತಮ್ಮ ಕುಟುಂಬದ ಹಾಗು ತಮ್ಮ ಸಿಬ್ಬಂದಿಯ ಆಸ್ತಿ ( ಚಿರಾಸ್ಥಿ ಹಾಗು ಸ್ಥಿರಾಸ್ತಿ) ಯನ್ನು ಆನ್‌ಲೈನ್ (ಸರ್ಕಾರದ ಪೋರ್ಟಲ್) ನಲ್ಲಿ ಘೋಷಣೆ ಮಾಡಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಈ ಘೋಷಣೆಗೂ ಮೂರು ತಿಂಗಳ ಸಮಯ ಕೊಟ್ಟಿದ್ದಾರೆ ಯೋಗಿಯವರು. ಸಚಿವರ ಆಸ್ತಿಯ ವಿವರಗಳು ಸಾರ್ವಜನಿಕರಿಗೆ ಲಭ್ಯವಾಗಬೇಕು. ಅಲ್ಲದೇ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಮೂರು ತಿಂಗಳ ಒಳಗೆ ಆಸ್ತಿ ವಿವರಗಳು ಘೋಷಿಸುವಂತೆ ಸೂಚಿಸಿದ್ದಾರೆ. ಈ ಹಿಂದೆ ಅಂದರೆ ಮೊದಲ ಅವಧಿಯಲ್ಲೂ ಕೂಡ ಇದೇ ನಿರ್ದೇಶನ ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ನೀಡಿದ್ದರು. ಆದರೆ ಸಮಯ ಕೇವಲ ೧೫ ದಿನ ನಿಗಧಿ ಮಾಡಿದ್ದರು. ಸಚಿವರು ಕುಟುಂಬ ಸದಸ್ಯರ ಆಸ್ತಿ ವಿವರ ಘೋಷಣೆ ಮಾಡುವುದರಿಂದ ಇತರರಿಗೆ ಉದಾಹರಣೆಯಾಗಲಿದ್ದಾರೆ ಅನ್ನೋದು ಯೋಗಿಯವರ ಅಭಿಪ್ರಾಯ. ಕೇವಲ ಸಚಿವರು ಮಾತ್ರ ಪಾರದರ್ಶಕತೆ ಕಾಯ್ದುಕೊಂಡರೇ ಸಾಲದು ಅಂಥ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಯೋಗಿಯವರು, ಯು.ಪಿ.ಯ ಎಲ್ಲಾ ಐಎಎಸ್, ಪಿಸಿಎಸ್‌ಗಳು ಸೇರಿ ಎಲ್ಲಾ ಸರ್ಕಾರಿ ಅಧಿಕಾರಿಗಳು ಕೂಡ ತಮ್ಮ ಕುಟುಂಬ ಸದಸ್ಯರಯ ಆಸ್ತಿ ಘೋಷಣೆ ಮಾಡುವಂತೆ ಸೂಚಿಸಿದ್ದಾರೆ.

ಕೋಟಿ ಬೆಲೆಯ ಆಸ್ತಿಯನ್ನು Rahul Gandhiಗೆ ವರ್ಗಾಯಿಸಿದ ವೃದ್ಧೆ!

ಬೊಮ್ಮಾಯಿ ಯೋಗಿ ಆಗ್ತಾರಾ ? ಯೋಗಿಯವರ ಈ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ಚುನಾವಣೆಗೆ ಒಂದು ವರ್ಷ ಇರುವ ಕರ್ನಾಟಕದಲ್ಲಿ ಈ ಮಾಡಲ್ ಬೊಮ್ಮಾಯಿ ಅವರು ಅನುಷ್ಠಾನಕ್ಕೆ ರ‍್ತಾರಾ ? ಅನ್ನೋದು ಡೆಲ್ಲಿಯ ಬಿಜೆಪಿ ಕಚೇರಿಯಲ್ಲಿ ಚರ್ಚೆಯಾಗುತ್ತಿರುವ ವಿಷಯ. ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯ ಮೂಡ್‌ನಲ್ಲಿರುವ ಸಿಎಂ ಬೊಮ್ಮಾಯಿ ತಮ್ಮ ಹೊಸ ಸಂಪುಟದ ಸಹೋದ್ಯೋಗಿಗಳಿಗೆ ಈ ಟಾಸ್ಕ್ ನೀಡಿ ಪಾರದರ್ಶಕತೆ ಮರೆಯುತ್ತಾರಾ ? ಅಲ್ಲದೇ ಆಡಳಿತರೂಢ ಬಿಜೆಪಿ ಸರ್ಕಾರಕ್ಕೆ ಅಂಟಿರುವ ೪೦ % ಕಳಂಕದಿAದ ಹೊರಬರಲು ಕೂಡ ಈ ಅಸ್ತç ಸಹಾಯಕ್ಕೆ ಬರಲಿದೆ. ಕರ್ನಾಟಕದ ರಾಜಕೀಯದ ಮಟ್ಟಿಗೆ ಹೊಸ ಅಸ್ತçವಾಗಿ ಕಾಣಿಸಿಕೊಳ್ಳುವ `ಸಚಿವರು ಆಸ್ತಿ ಘೋಷಣೆ' ಮತದಾರರಲ್ಲೂ ಕೂಡ ಅಭಿಪ್ರಾಯ ಬದಲಿಸಿಕೊಳ್ಳಲು ಸಹಾಯಕ್ಕೆ ಬರಲಿದೆ ಅನ್ನೋ ಸಲಹೆಗಳು ಕೂಡ ಬರುತ್ತಿವೆ.

ಸಂಪುಟದ ಸದಸ್ಯರ ಜೊತೆಗೆ ಯುಪಿಎಸ್ಸಿ ಹಾಗು ಕೆಪಿಎಸ್ಸಿ ಅಂದರೆ ಐಎಎಸ್, ಐಪಿಎಸ್,ಐಎಫ್‌ಎಸ್ ಹಾಗು ಕೆಎಎಸ್ ಅಧಿಕಾರಿಗಳು ಕೂಡ ತಮ್ಮ ಕುಟುಂದ ಆಸ್ತಿ ಘೋಷಣೆ ಮಾಡಿಸುವಲ್ಲಿ ಬೊಮ್ಮಾಯಿ ಸಫಲರಾದರೆ, ಬಿಜೆಪಿಯ ಮೇಲಿನ ಅಭಿಪ್ರಾಯ ಬದಲಾಗಿ ಮತದಾರರಿಗೆ ಮತ್ತಷ್ಟು ಹತ್ತಿರವಾಗುತ್ತಾರೆ. ಶಾಸಕರು ಲೋಕಾಯುಕ್ತರ ಮುಂದೆ ಆಸ್ತಿಘೋಷಣೆ ಮಾಡಿಕೊಳ್ಳುತ್ತಿಲ್ಲ. ಅಧಿಕಾರಿಗಳು ಇಂಥ ವಿಚಾರಗಳಿಂದ ದೂರವೇ ಉಳಿಯುತ್ತಿದ್ದಾರೆ ಅನ್ನೋ ಮಾತುಗಳಿಗೆ ವಿಭಿನ್ನವಾಗಿ ನಿಲ್ಲಬೇಕಾದರೆ ಯೋಗಿ ಅಧಿತ್ಯನಾಥರ ಈ ಹಾದಿ ಬೊಮ್ಮಾಯಿ ಅವರು ತುಳಿದರೆ, ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದ ಯೋಗಿ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಸಾರ್ಥಕವಾಗುತ್ತೆ ಅಂಥ ಅನ್ನಬಹುದು.
 

Latest Videos
Follow Us:
Download App:
  • android
  • ios