Asianet Suvarna News Asianet Suvarna News

Helmet ಹಾಕದಿದ್ದವರಿಗೆ ಈ ಊರಲ್ಲಿ ಸಾರಾಯಿ ಸಿಗಲ್ಲ..!

ಸುರ​ಕ್ಷಿತವಾಗಿ ಸಂಚಾರ ಮಾಡಲು ಜನ​ರನ್ನು ಜಾಗೃ​ತ​ಗೊ​ಳಿ​ಸಲು ಮಧ್ಯ ಪ್ರದೇಶದ ಅಬ​ಕಾರಿ ಇಲಾಖೆ ಹೊಸ ನಿಯಮಕ್ಕೆ ಕೈ ಹಾಕಿದೆ. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸದೇ ಬಂದರೆ ಮದ್ಯ ಕೊಡೋದಿಲ್ಲ ಎಂದು ಅಂಗಡಿ ಮುಂದೆ ಬೋರ್ಡ್‌ ಹಾಕಿಕೊಂಡಿದೆ.

no helmet no booze at madhya pradesh jabalpur liquor shops ash
Author
First Published Oct 19, 2022, 1:09 PM IST

ದೇಶದಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ರಸ್ತೆ ಅಪಘಾತ ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ. ಈ ಹಿನ್ನೆಲೆ ದ್ವಿಚಕ್ರ ವಾಹನ ಸವಾರರಿಗೆ (Two wheeler Vehicle Riders) ಹೆಲ್ಮೆಟ್‌ (Helmet) ಕಡ್ಡಾಯ ಮಾಡಲಾಗಿದೆ. ಆದರೂ, ಅನೇಕರು ಸಂಚಾರಿ ನಿಯಮಗಳನ್ನು (Traffic Rules) ಪಾಲಿಸೋದೇ ಇಲ್ಲ. ಈ ಹಿನ್ನೆಲೆ ಹೆಲ್ಮೆಟ್‌ ಇಲ್ಲದಿದ್ದರೆ ಪೆಟ್ರೋಲ್ (Petrol) ಹಾಕಲ್ಲ ಎಂದು ಕೆಲ ಪೆಟ್ರೋಲ್‌ ಬಂಕ್‌ಗಳಲ್ಲಿ (Fuel Stations) ಬೋರ್ಡ್‌ ಹಾಕಲಾಯ್ತು, ಹಾಗೂ ಅದನ್ನು ಪಾಲಿಸಲಾಯ್ತು. ಆದರೂ, ಹಲವರು ಇದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ, ಮಧ್ಯಪ್ರದೇಶದ (Madhya Pradesh) ಜಬಲ್ಪುರದಲ್ಲಿ (Jabalpur) ಹೊಸದೊಂದು ನಿಯಮ ಜಾರಿಗೆ ತರಲಾಗುತ್ತಿದೆ. ಈ ಆತಂಕದಿಂದಾದಲೂ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸಬಹುದು ಎಂಬುದು ಅಲ್ಲಿನ ಆಡಳಿತದ ಆಲೋಚನೆ. ಏನಿದು ನಿಯಮ ಅಂತೀರಾ..? ಮುಂದೆ ಓದಿ..

ಹೆಲ್ಮೆಟ್‌ ಹಾಕದಿದ್ದರೆ ಪೆಟ್ರೋಲ್‌ ಬಂಕ್‌ಗಳಲ್ಲಿ ಪೆಟ್ರೋಲ್‌ ನೀಡುವುದಿಲ್ಲ ಎಂಬ ನಿಯಮ ಅಷ್ಟಾಗಿ ಯಶಸ್ವಿಯಾಗಲಿಲ್ಲ. ಈ ಹಿನ್ನೆಲೆ ಮಧ್ಯ ಪ್ರದೇಶದ ಜಬಲ್ಪುರದಲ್ಲಿ ಹೊಸ ರೂಲ್ಸ್‌ ಜಾರಿಗೆ ಬರುತ್ತಿದೆ. ಅದೇನೆಂದರೆ, ಹೆಲ್ಮಟ್‌ ಹಾಕದಿದ್ದರೆ ಸಾರಾಯಿ (Liquor) ಕೊಡುವುದಿಲ್ಲವಂತೆ. ಈ ರೀತಿ ಎಚ್ಚರಿಕೆಯಿಂದಲಾದರೂ, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಹಾಕಲಿ ಎಂಬುದು ಸರ್ಕಾರದ ಚಿಂತನೆ.

ಇದನ್ನು ಓದಿ: ದ್ವಿಚಕ್ರ ವಾಹನಗಳ ನಡುವೆ ಅಪಘಾತ: ಹೆಲ್ಮೆಟ್‌ ಧರಿಸದ ಸವಾರ ಸಾವು

ಹೌದು, ಜಬಲ್ಪುರದ ಮದ್ಯದಂಗಡಿಗಳಲ್ಲಿ ಈ ರೀತಿ ಪೋಸ್ಟರ್‌ಗಳನ್ನು ಹಾಕಲಾಗಿದೆ. ಮಧ್ಯಪ್ರದೇಶ ಸರ್ಕಾರದ ಅಬಕಾರಿ ಇಲಾಖೆ ಈ ಪೋಸ್ಟರ್‌ಗಳನ್ನು ಹಾಕಿಸಿದೆ. ಇದಕ್ಕೆ ಕಾರಣ ಕಳೆದ 2 ವಾರಗಳ ಹಿಂದೆ ಅಲ್ಲಿನ ಪೊಲೀಸ್‌ ಮುಖ್ಯ ಕಚೇರಿ, ಹೆಲ್ಮೆಟ್‌ ಕಡ್ಡಾಯ ಕುರಿತ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಹೊರಡಿಸಿದೆ. 

ರಸ್ತೆಗಳಲ್ಲಿ ವಾಹನ ಸವಾರರು ಯಾರೂ ಹೆಲ್ಮೆಟ್‌ಗಳನ್ನು ಧರಿಸುವುದನ್ನು ಕಾಣಿಸುತ್ತಲೇ ಇಲ್ಲ ಎಂದು ಹೈಕೋರ್ಟ್‌ ಪೊಲೀಸ್‌ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡ ಬಳಿಕ ಪೊಲೀಸರು ಕಟ್ಟುನಿಟ್ಟಾಗಿದ್ದಾರೆ. ಈ ಹಿನ್ನೆಲೆ, ಅಬಕಾರಿ ಇಲಾಖೆ ಸಹ ಈ ಪೋಸ್ಟರ್‌ಗಳನ್ನು ಹಾಕಿಸಿದ್ದು, ದ್ವಿ ಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸದೆ ಮದ್ಯದ ಅಂಗಡಿಗಳಿಗೆ ಬಂದರೆ, ನಾವು ಅಂತಹವರಿಗೆ ಸಾರಾಯಿ ಅಥವಾ ಮದ್ಯ ಬಾಟೆಲ್‌ಗಳನ್ನು ನೀಡುವುದಿಲ್ಲ ಎಂದು ತೀರ್ಮಾನ ಕೈಗೊಂಡಿದೆ. 

ಇದನ್ನೂ ಓದಿ: ಹೆಲ್ಮೆಟ್‌ ಸರಿಯಾಗಿ ಧರಿಸದಿದ್ರೆ ದಂಡ ಕಟ್ಟಲು ಸಜ್ಜಾಗಿ, ಕೇಂದ್ರದಿಂದ ಹೊಸ ನಿಯಮ!

ಈ ಸಂಬಂಧ ಮಾಹಿತಿ ನೀಡಿದ ಮಧ್ಯಪ್ರದೇಶ ಜಬಲ್ಪುರದ ಜಿಲ್ಲಾ ಅಬಕಾರಿ ಅಧಿಕಾರಿ ರವಿಂದ್ರ ಮಾಣಿಕ್‌ಪುರಿ, ಅಬಕಾರಿ ಇಲಾಖೆ ಈ ಸಂಬಂಧ ಮಾರ್ಗಸೂಚಿ ಹೊರಡಿಸಿದ್ದು, ಜಬಲ್ಪುರದಲ್ಲಿ ಇದನ್ನು ಮೊದಲು ಅಳವಡಿಸಿಕೊಂಡಿದೆ ಎಂದು ಹೇಳಿದ್ದಾರೆ. ಹಾಗೂ, ನಾವು ಜಿಲ್ಲೆಯ ಎಲ್ಲ ನಗರ ಪ್ರದೇಶಗಳಲ್ಲಿರುವ ಸಾರಾಯಿ ಅಂಗಡಿಗಳಲ್ಲಿ ಈ ಪೋಸ್ಟರ್‌ಗಳನ್ನು ಹಾಕಿದ್ದೇವೆ. ಇನ್ನೆರಡು ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲೂ ಇದನ್ನು ಹಾಕುತ್ತೇವೆ. ದ್ವಿ ಚಕ್ರ ವಾಹನ ಸವಾರಿ ಮಾಡುವವೇಳೆ ಹೆಲ್ಮೆಟ್‌ ಹಾಕುವ ಕುರಿತು ಅರಿವು ಮೂಡಿಸುವುದು ನಮ್ಮ ಉದ್ದೇಶ ಎಂದೂ ಜಬಲ್ಪುರದ ಜಿಲ್ಲಾ ಅಬಕಾರಿ ಅಧಿಕಾರಿ ರವಿಂದ್ರ ಮಾಣಿಕ್‌ಪುರಿ ಹೇಳಿದ್ದಾರೆ.

ಮಧ್ಯ ಪ್ರದೇಶದ ಗ್ವಾಲಿಯರ್‌ ಮೂಲದ ಕಾನೂನು ವಿದ್ಯಾರ್ಥಿಯೊಬ್ಬರು ಹೈಕೋರ್ಟ್‌ಗೆ ಹಾಕಿದ್ದ ಅರ್ಜಿ ಸಂಬಂಧ ವಿಚಾರಣೆ ನಡೆಸುತ್ತಿದ್ದ ಅಲ್ಲಿನ ಹೈಕೋರ್ಟ್‌, ದ್ವಿ ಚಕ್ರ ವಾಹನ ಸವಾರಿ ಮಾಡುವ ವೇಳೆ ಹೆಲ್ಮೆಟ್‌ಗಳನ್ನು ಹಾಕುವುದು ಕಾಣಿಸುವುದೇ ಇಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೆ, ಈ ಸಂಬಂಧ ಮಧ್ಯ ಪ್ರದೇಶ ರಾಜ್ಯ ಸರ್ಕಾರದ 3 ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಇದಕ್ಕೆ ಉತ್ತರಿಸಬೇಕೆಂದು ಹೇಳಿ ನೋಟಿಸ್‌ ಅನ್ನೂ ನೀಡಲಾಗಿತ್ತು. ಹೈಕೋರ್ಟ್‌ ಜಡ್ಜ್‌ ಹೇಳಿಕೆ ನಂತರ ಪೊಲೀಸರು ಮಧ್ಯ ಪ್ರದೇಶದಾದ್ಯಂತ ವಾಹನ ಸವಾರರನ್ನು ಗಮನಿಸುತ್ತಿದ್ದು, ಹೆಲ್ಮೆಟ್‌ ಹಾಕದವರ ವಿರುದ್ಧ ದಂಡ ಪ್ರಯೋಗ ನಡೆಸುತ್ತಿದ್ದಾರೆ. 

ಇದನ್ನೂ ಓದಿ: Sunetra Pandit: ಹಂಪಲ್ಲಿ ಎಗರಿ ಬಿದ್ದ ಸ್ಕೂಟರ್‌: ನಟಿ ಜೀವ ಉಳಿಸಿದ ಹೆಲ್ಮೆಟ್‌!

Follow Us:
Download App:
  • android
  • ios