Asianet Suvarna News Asianet Suvarna News

ಹೆಲ್ಮೆಟ್‌ ಸರಿಯಾಗಿ ಧರಿಸದಿದ್ರೆ ದಂಡ ಕಟ್ಟಲು ಸಜ್ಜಾಗಿ, ಕೇಂದ್ರದಿಂದ ಹೊಸ ನಿಯಮ!

* ಹೆಲ್ಮೆಟ್‌ ಸರಿಯಾಗಿ ಧರಿಸದಿದ್ದರೆ 2000 ರು. ದಂಡ

* ಐಎಸ್‌ಐ ಮಾನ್ಯತೆ ಇಲ್ಲದ ಹೆಲ್ಮೆಟ್‌ ಧರಿಸಿದರೂ ದಂಡ

* ದ್ವಿಚಕ್ರವಾಹನ ಚಾಲಕರ ಸುರಕ್ಷತೆಗೆ ಹೊಸ ನಿಯಮ

Bikers pillion riders wearing helmet unstrapped or without ISI mark to be fined with Rs 2000 pod
Author
Bengaluru, First Published May 21, 2022, 12:11 AM IST

ನವದೆಹಲಿ(ಮೇ.21): ಬೆಲ್ಟ್‌ ಹಾಕದೆಯೇ ಹೆಲ್ಮೆಟ್‌ ಧರಿಸಿದ್ದರೆ ಮತ್ತು ಐಎಸ್‌ಐ ಮಾನ್ಯತೆ ಇರದ ಹೆಲ್ಮೆಟ್‌ ಧರಿಸಿದರೆ ತಲಾ 2000 ರು. ದಂಡ ವಿಧಿಸುವ ಹೊಸ ನಿಯಮವನ್ನು ಕೇಂದ್ರ ಸರ್ಕಾರ ರೂಪಿಸಿದೆ. ದ್ವಿಚಕ್ರ ವಾಹನ ಸವಾರರ ಸುರಕ್ಷತೆಯ ನಿಟ್ಟಿನಲ್ಲಿ ಸರ್ಕಾರವು, ಮೋಟಾರು ಕಾಯ್ದೆಗೆ ಕೆಲವೊಂದು ತಿದ್ದುಪಡಿಗಳನ್ನು ಮಾಡಿದ್ದು ಅದರಲ್ಲಿ ಈ ಅಂಶಗಳಿವೆ.

ಹೊಸ ನಿಯಮಗಳ ಅನ್ವಯ ವಾಹನ ಸವಾರರು, ಹೆಲ್ಮೆಟ್‌ ಧರಿಸುವುದು ಮಾತ್ರವಲ್ಲದೇ, ಅದರಲ್ಲಿ ಇರುವ ಬೆಲ್ಟ್‌ ಅನ್ನೂ ಕಡ್ಡಾಯವಾಗಿ ಹಾಕಿಕೊಂಡಿರಬೇಕು. ಇಲ್ಲದೇ ಹೋದಲ್ಲಿ 1000 ರು. ದಂಡ ವಿಧಿಸಬಹುದು. ಇನ್ನು ಐಎಸ್‌ಐ ಚಿಹ್ನೆ ಇರದ ಹೆಲ್ಮೆಟ್‌ ಹಾಕಿದ್ದರೆ ಅದಕ್ಕೆ 1000 ರು. ದಂಡ ವಿಧಿಸಲಾಗುವುದು. ಜೊತೆಗೆ ಹೆಲ್ಮೆಟ್‌ ಹಾಕಿದ್ದರೂ ಸಿಗ್ನಲ್‌ ಜಂಪ್‌ ಮಾಡಿದರೆ 2000 ರು.ವರೆಗೆ ದಂಡ ವಿಧಿಸಬಹುದಾಗಿದೆ. ಜೊತೆಗೆ ಲೈಸನ್ಸ್‌ ಅನ್ನು ಕೂಡಾ 3 ತಿಂಗಳ ಅವಧಿಯವರೆಗೆ ಅನರ್ಹಗೊಳಿಸಬಹುದಾಗಿದೆ ಎಂದು ಮೋಟಾರು ವಾಹನ ಕಾಯ್ದೆ ತಿಳಿಸಿದೆ.

ದ್ವಿಚಕ್ರವಾಹನ ಚಾಲಕರ ಸುರಕ್ಷತೆಗಾಗಿ ಹೆಲ್ಮೆಟ್‌ ಅನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಜನರು ಹೆಲ್ಮೆಟ್‌ ಅನ್ನು ಸಡಿಲವಾಗಿ ಧರಿಸುವುದು. ಅದರ ಸ್ಟ್ರ್ಯಾಪ್‌ ಅನ್ನು ಹಾಕಿಕೊಳ್ಳದೇ ಇರುವುದರಿಂದ ಯಾವುದೇ ಸುರಕ್ಷತೆ ಸಿಗುವುದಿಲ್ಲ. ಬಿಎಸ್‌ಐ ಅಥವಾ ಐಎಸ್‌ಐ ಪ್ರಮಾಣೀಕೃತ ಉತ್ತಮ ಗುಣಮಟ್ಟದ ಹೆಲ್ಮೆಟ್‌ ಧರಿಸುವುದು ದ್ವಿಚಕ್ರವಾಹನ ಚಾಲಕರಿಗೆ ರಕ್ಷಣೆ ನೀಡುತ್ತದೆ. ಸಣ್ಣ ಅಪಘಾತದಲ್ಲಿ ಹೆಲ್ಮೆಟ್‌ಗೆ ಹಾನಿಯಾದರೂ ಅದನ್ನು ಬದಲಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಲಾಗಿದೆ.

ಹೆಲ್ಮೆಟ್‌ ಅಭಿಯಾನಕ್ಕೆ ಪುನೀತ್‌ ರಾಜಕುಮಾರ್‌ ಸಂದೇಶ

ದ್ವಿಚಕ್ರ ವಾಹನಗಳ ಅಪಘಾತದಲ್ಲಿ(Accidents) ಸಾವಿನ ಪ್ರಮಾಣದ ಹೆಚ್ಚಿದ ಹಿನ್ನಲೆಯಲ್ಲಿ ‘ಹೆಲ್ಮೆಟ್‌’ ಕುರಿತು ಸಂಚಾರ ಪೊಲೀಸರು(Traffic Police) ಹಮ್ಮಿಕೊಂಡಿರುವ ‘ಗುಣಮಟ್ಟದ ಹೆಲ್ಮೆಟ್‌ ಧರಿಸೋಣ, ಪ್ರಾಣ ಉಳಿಸೋಣ’ ಜನ ಜಾಗೃತಿ ಅಭಿಯಾನಕ್ಕೆ ನಟ ಪುನೀತ್‌ ರಾಜ್‌ಕುಮಾರ್‌(Puneeth Rajkumar) ಪತ್ನಿ ಅಶ್ವಿನಿ ಬುಧವಾರ ಚಾಲನೆ ನೀಡಿದರು.

ನಗರದ ಇನ್ಫೆಂಟ್ರಿ ರಸ್ತೆಯಲ್ಲಿ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಸಾಂಕೇತಿಕವಾಗಿ ಕಾನ್‌ಸ್ಟೇಬಲ್‌ ಹಾಗೂ ಕೆಲ ಸಾರ್ವಜನಿಕರಿಗೆ ಹೆಲ್ಮೆಟ್‌ ವಿತರಿಸಿದ ಅಶ್ವಿನಿ(Ashwini Puneeth Rajkumar) ಅವರು, ಹೆಲ್ಮೆಟ್‌ ಧರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಈ ಅಭಿಯಾನದ ವಿಡಿಯೋದಲ್ಲಿ ನಟ ಶಿವರಾಜ್‌ ಕುಮಾರ್‌(Shivarj Kumar) ಹಾಗೂ ಪುನೀತ್‌ ರಾಜ್‌ ಕುಮಾರ್‌ ಅವರ ಸಂದೇಶವಿದೆ.

Puneeth Rajkumar Memory: ಸುರಿಯುವ ಹಿಮದಲ್ಲೂ ಅಪ್ಪು ನೆನೆಯುತ್ತಿರುವ ಕೊಪ್ಪಳದ ಯೋಧರು..!

ಹೆಲ್ಮೆಟ್‌ ಧರಿಸುವಂತೆ ಅಪ್ಪು ಸಂದೇಶ:

ಹೆಲ್ಮೆಟ್‌ ಕುರಿತು ಅಭಿಯಾನ(Helmet Campaign) ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ನಟ ಪುನೀತ್‌ ರಾಜ್‌ಕುಮಾರ್‌ ಹಾಗೂ ಶಿವರಾಜ್‌ ಕುಮಾರ್‌ ಅವರು ನೀಡಿರುವ 1.2 ನಿಮಿಷಗಳ ವಿಡಿಯೋ ಸಂದೇಶವನ್ನು ಆಯುಕ್ತ ಕಮಲ್‌ ಪಂತ್‌(Kamal Pant) ಬಿಡುಗಡೆಗೊಳಿಸಿದರು. ಈ ವಿಡಿಯೋ ನೋಡಿ ಪುನೀತ್‌ ಪತ್ನಿ ಅಶ್ವಿನಿ ಸೇರಿದಂತೆ ಕಾರ್ಯಕ್ರಮದಲ್ಲಿ ನೆರೆದವರ ಕಣ್ಣಾಲಿಗಳು ತುಂಬಿದವು.

ದಯವಿಟ್ಟು ಟೂ ವ್ಹೀಲ​ರ್ಸ್‌ಗಳನ್ನು ಹೆಲ್ಮೆಟ್‌ ಇಲ್ಲದೆ ಓಡಿಸಬೇಡಿ. ಟ್ರಾಫಿಕ್‌ ರೂಲ್ಸ್‌ಗಳನ್ನು ಫಾಲೋ ಮಾಡಿ. ಟೂವ್ಹೀಲರ್‌ಗಳಲ್ಲಿ ಹೆಲ್ಮೆಟ್‌ ಬಳಸೋದನ್ನು ದಯವಿಟ್ಟು ಮರೆಯಬೇಡಿ. ನಿಮ್ಮ ಹಿಂದೆ ಕುಳಿತವರಿಗೆ ಸಹ ಹೆಲ್ಮೆಟ್‌ ಹಾಕಿಸಿ. ಒಳ್ಳೆಯದಾಗಲಿ ಟೇಕ್‌ ಕೇರ್‌’ ಎಂದು ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಸಂದೇಶ ನೀಡಿದ್ದಾರೆ.

ಜೀವ ಅಮೂಲ್ಯ. ಬೈಕ್‌ ಚಲಾಯಿಸುವಾಗ ಐಎಸ್‌ಐ ಮಾರ್ಕ್ ಇರುವ ಹೆಲ್ಮೆಟ್‌ ಬಳಸಿ ಜೀವ ಉಳಿಸಿ. ನಮ್ಮೆಲ್ಲರ ಪ್ರೀತಿಯ ಅಪ್ಪು ಇದನ್ನೇ ಹೇಳ್ತಾ ಇದ್ರು. ಅವರ ಮಾತನ್ನು ಗೌರವಿಸೋಣ. ಹೆಲ್ಮೆಟ್‌ ಜೀವ ರಕ್ಷಕ ಅಂತ ನಟ ಶಿವರಾಜ್‌ ಕುಮಾರ್‌ ತಿಳಿಸಿದ್ದಾರೆ.  

ಈ ವೇಳೆ ಮಾತನಾಡಿದ ಜಂಟಿ ಆಯುಕ್ತ (ಸಂಚಾರ) ಡಾ.ಬಿ.ಆರ್‌.ರವಿಕಾಂತೇಗೌಡ, ಸಂಚಾರ ಸುರಕ್ಷತೆ ಬಗ್ಗೆ ಪುನೀತ್‌ ಕಾಳಜಿ ಹೊಂದಿದ್ದರು. ಹೀಗಾಗಿ ಈ ಅಭಿಯಾನಕ್ಕೆ ಅವರನ್ನೇ ರಾಯಭಾರಿಯಾಗಿ ಆಯ್ಕೆ ಮಾಡಲು ಇಚ್ಛೆ ಇತ್ತು. ಆದರೆ ಸಾಧ್ಯವಾಗಲಿಲ್ಲ. ಹೆಲ್ಮಟ್‌ ಕುರಿತ ಅಭಿಯಾನವನ್ನು ಪುನೀತ್‌ ಅವರಿಗೆ ಅರ್ಪಿಸುತ್ತಿದ್ದೇವೆ ಎಂದು ಹೇಳಿದರು.

Follow Us:
Download App:
  • android
  • ios