Asianet Suvarna News Asianet Suvarna News

ರಾಹುಲ್‌ ಗಾಂಧಿ ಅವಮಾನ ಮಾಡಿದ್ದಕ್ಕೆ ‘I.N.D.I.A’ ಮೈತ್ರಿಕೂಟಕ್ಕೆ ಸೆಡ್ಡು ಹೊಡೆದ ನಿತೀಶ್‌! ಮೋದಿ ಜತೆ ಸೇರೋದು ಪಕ್ಕಾನಾ?

ನಿತೀಶ್‌ ಕುಮಾರ್ ಮತ್ತೆ ಯೂ ಟರ್ನ್‌ ಹೊಡೆದು ಬಿಜೆಪಿ ಜತೆಯೇ ಕೈಜೋಡಿಸುತ್ತಾರೆ ಎಂದು ವರದಿಗಳು ಹೇಳುತ್ತಿವೆ. ಹಾಗಾದರೆ ನಿತೀಶ್ ಕುಮಾರ್ ಹೇಗೆ ಮತ್ತು ಏಕೆ ಭ್ರಮನಿರಸನಗೊಂಡರು? ಇಲ್ಲಿದೆ ಉತ್ತರ..

nitish kumar s decision spurred by this moment at india meeting inside story ash
Author
First Published Jan 26, 2024, 12:16 PM IST

ಪಾಟ್ನಾ (ಜನವರಿ 26, 2024): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ 2022 ರಲ್ಲಿ ಬಿಜೆಪಿಯಿಂದ ಬೇರ್ಪಟ್ಟ ನಂತರ, ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆಡಳಿತ ಪಕ್ಷವನ್ನು ಜಂಟಿಯಾಗಿ ಎದುರಿಸಲು ಎಲ್ಲಾ ವಿರೋಧ ಶಕ್ತಿಗಳನ್ನು ಒಟ್ಟಾಗಿಸೋ ಉಪಕ್ರಮವನ್ನು ಕೈಗೊಂಡರು. ಅಲ್ಲದೆ, ಪಾಟ್ನಾದಲ್ಲಿ ವಿರೋಧ ಪಕ್ಷಗಳ ಮೊದಲ ಸಭೆಯನ್ನು ಆಯೋಜಿಸಿದರು ಮತ್ತು ನಿತೀಶ್‌ ಕುಮಾರ್ ಒಕ್ಕೂಟದ ಸಂಚಾಲಕರಾಗುತ್ತಾರೆ ಎಂದು ವ್ಯಾಪಕವಾಗಿ ನಂಬಲಾಗಿತ್ತು.

ಆದರೀಗ ನಿತೀಶ್‌ ಕುಮಾರ್ ಮತ್ತೆ ಯೂ ಟರ್ನ್‌ ಹೊಡೆದು ಬಿಜೆಪಿ ಜತೆಯೇ ಕೈಜೋಡಿಸುತ್ತಾರೆ ಎಂದು ವರದಿಗಳು ಹೇಳುತ್ತಿವೆ. ಹಾಗಾದರೆ ನಿತೀಶ್ ಕುಮಾರ್ ಹೇಗೆ ಮತ್ತು ಏಕೆ ಭ್ರಮನಿರಸನಗೊಂಡರು? ತಾನು ಸೋಲಿಸಲು ಬಯಸಿದ ವ್ಯಕ್ತಿ ಪ್ರಧಾನಿ ಮೋದಿಯ ಜತೆಗೇ ಮತ್ತೆ ಹೋಗಲು ಸಿದ್ದರಾಗಿದ್ದಾರೆ! 

ಕುಟುಂಬ ರಾಜಕೀಯದ ವಿರುದ್ಧ ನಿತೀಶ್‌ ಟೀಕೆ: ಬಿಹಾರ ಸಿಎಂ ವಿರುದ್ಧ ಹರಿಹಾಯ್ದ ಲಾಲೂ ಪ್ರಸಾದ್‌ ಪುತ್ರಿ!

ಇದಕ್ಕೆ ಕಾರಣ ಜನವರಿ 13 ರ I.N.D.I.A. ಮೈತ್ರಿಕೂಟದ ಸಭೆಯ ಮಹತ್ವದ ತಿರುವು ಎಂದು 72 ವರ್ಷ ವಯಸ್ಸಿನವರಿಗೆ ನಿಕಟವಾಗಿರುವ ನಾಯಕರು ಹೇಳಿದ್ದಾರೆ. ಆ ಸಭೆಯಲ್ಲಿ, ನಿತೀಶ್ ಕುಮಾರ್ ಹೆಸರನ್ನು ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಸಂಚಾಲಕರಾಗಿ ಪ್ರಸ್ತಾಪಿಸಿದರು ಮತ್ತು ಲಾಲೂ ಪ್ರಸಾದ್‌ ಯಾದವ್ ಹಾಗೂ ಶರದ್ ಪವಾರ್ ಸೇರಿದಂತೆ ಬಹುತೇಕ ಎಲ್ಲಾ ನಾಯಕರು ಅನುಮೋದಿಸಿದರು. 

ಆದರೆ, ಈ ವೇಳೆ ರಾಹುಲ್ ಗಾಂಧಿ ಮಧ್ಯಪ್ರವೇಶಿಸಿದರು ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಹಾಗೂ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಬಗ್ಗೆ ಆಕ್ಷೇಪ ಹೊಂದಿರುವುದರಿಂದ ಅವರ ನಿರ್ಧಾರಕ್ಕಾಗಿ ಕಾಯಬೇಕಾಗಿದೆ ಎಂದು ಹೇಳಿದ್ದರು. ಆದರೆ, ಈ ವೇಳೆ ನಿತೀಶ್‌ ಪರ ನಿಂತ ಬಿಹಾರ ಡೆಪ್ಯುಟಿ ಸಿಎಂ ತೇಜಸ್ವಿ ಯಾದವ್, ಮಮತಾ ಬ್ಯಾನರ್ಜಿ ಸಭೆಯಿಂದ ಹೊರಗುಳಿದಿದ್ದಾರೆ ಮತ್ತು ಬಹುಮತವು ನಿತೀಶ್ ಕುಮಾರ್ ಪರವಾಗಿ ಇರುವುದರಿಂದ ನಿರ್ಧಾರವು ಅವರ ಅನುಮೋದನೆಗೆ ಒಳಪಡಬಾರದು ಎಂದು ಸೂಚಿಸಿದ್ದರು.

ಇಂಡಿಯಾ ಒಕ್ಕೂಟಕ್ಕೆ ಸಿಎಂ ನಿತೀಶ್ ಶಾಕ್, ಮೈತ್ರಿ ಮುರಿದು ಬಿಜೆಪಿ ಜೊತೆ ಸೇರುವ ಸಾಧ್ಯತೆ!

ಇನ್ನೊಂದೆಡೆ, ರಾಹುಲ್‌ ಗಾಂಧಿ ಹೇಳಿಕೆಯನ್ನು ಸೋನಿಯಾ ಗಾಂಧಿ ಅಥವಾ ಮಲ್ಲಿಕಾರ್ಜುನ ಖರ್ಗೆ ತಳ್ಳಿಹಾಕಲು ಪ್ರಯತ್ನಿಸಲಿಲ್ಲ ಎಂದೂ ತಿಳಿದುಬಂದಿದೆ. ಈ ಹಿನ್ನೆಲೆ ನಿತೀಶ್ ಕುಮಾರ್, ಮೋದಿಯನ್ನು ಪದಚ್ಯುತಗೊಳಿಸುವ ತಮ್ಮ ಉದ್ದೇಶವನ್ನು ಎಂದಿಗೂ ಸಾಧಿಸಲ್ಲ ಎಂದುಕೊಂಡಿದ್ದರು. ಹಾಗೂ, ನಿಮಗೆ ಅವರನ್ನು ಸೋಲಿಸಲು ಸಾಧ್ಯವಾಗದಿದ್ದರೆ, ಅವರೊಂದಿಗೆ ಸೇರಿಕೊಳ್ಳಿ ಎಂದೂ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಹೇಳಿದ್ದಾಗಿ ಅವರ ಆಪ್ತ ಮೂಲಗಳು ತಿಳಿಸಿವೆ.

ಅಲ್ಲದೆ, ರಾಹುಲ್ ಗಾಂಧಿ ಮಮತಾ ಬ್ಯಾನರ್ಜಿಯ ಮನವೊಲಿಸಲು ಮತ್ತು ಅವರನ್ನು ಒಳಗೊಳ್ಳುವ ಪ್ರಯತ್ನ ಮಾಡೋ ಬದಲು, ಸಭೆಯಲ್ಲಿ ತನ್ನನ್ನು ಅವಮಾನಿಸಿದ್ದಾರೆ ಎಂದು ನಿತೀಶ್ ಕುಮಾರ್ ಭಾವಿಸಿದ್ದರು ಎಂದೂ ತಿಳಿದುಬಂದಿದೆ. ಅಲ್ಲದೆ,  ರಾಹುಲ್ ಗಾಂಧಿ ಎಲ್ಲ ಪ್ರಮುಖ ನಿರ್ಧಾರ ತೆಗೆದುಕೊಳ್ಳುವವರೆಗೂ, ಪ್ರತಿಪಕ್ಷಗಳು ಸಂಪೂರ್ಣ ಏಕತೆಯನ್ನು ನಿರ್ವಹಿಸಲು ಅಥವಾ ಬಿಜೆಪಿ ವಿರುದ್ಧ ಪ್ರಬಲ ಹೋರಾಟವನ್ನು ಮಾಡಲು ಸಾಧ್ಯವಿಲ್ಲ ಎಂದೂ ಬಿಹಾರ ಸಿಎಂ ನಂಬುತ್ತಾರೆ.

ನಡುಗೋ ಚಳಿಯಲ್ಲೂ ಬಿಸಿ ಏರಿದ ಬಿಹಾರ ರಾಜಕೀಯ ತಾಪಮಾನ: ದಿಢೀರ್‌ ರಾಜ್ಯಪಾಲರ ಭೇಟಿಯಾದ ನಿತೀಶ್‌ ಕುಮಾರ್!

Follow Us:
Download App:
  • android
  • ios