ನಡುಗೋ ಚಳಿಯಲ್ಲೂ ಬಿಸಿ ಏರಿದ ಬಿಹಾರ ರಾಜಕೀಯ ತಾಪಮಾನ: ದಿಢೀರ್ ರಾಜ್ಯಪಾಲರ ಭೇಟಿಯಾದ ನಿತೀಶ್ ಕುಮಾರ್!
ಪೂರ್ವ ನಿಗದಿತವಾಗಿಲ್ಲದಿದ್ದರೂ ಬಿಹಾರ ಸಿಎಂ ನಿತೀಶ್ ಕುಮಾರ್ ಜನವರಿ 23 ರಂದು ಬೆಳಗ್ಗೆ ಅಲ್ಲಿನ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ರನ್ನು ಭೇಟಿ ಮಾಡಲು ಹಠಾತ್ತನೆ ರಾಜ ಭವನಕ್ಕೆ ಭೇಟಿ ನೀಡಿದ್ದರು. ಅವರೊಂದಿಗೆ ಜೆಡಿಯುನ ಹಿರಿಯ ನಾಯಕ ವಿಜಯ್ ಚೌಧರಿ ಕೂಡ ಉಪಸ್ಥಿತರಿದ್ದರು.
ಪಾಟ್ನಾ (ಜನವರಿ 23, 2024): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ರಾಜಭವನಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದ್ದರು. ಹಾಗೂ ಅಲ್ಲಿನ ರಾಜ್ಯಪಾಲರನ್ನು ಭೇಟಿಯಾದರು. ಹಾಗೂ, ಈ ವೇಳೆ ಸಂಪುಟ ಸಚಿವ ವಿಜಯ್ ಚೌಧರಿ ಸಹ ಉಪಸ್ಥಿತರಿದ್ದರು. ಈ ಹಿನ್ನೆಲೆ ಈ ಭೇಟಿ ಉತ್ತರ ಭಾರತದ ನಡುಗೋ ಚಳಿಯಲ್ಲೂ ಬಿಹಾರ ರಾಜಕೀಯ ತಾಪಮಾನವನ್ನು ಏರಿಸಿದೆ.
ಪೂರ್ವ ನಿಗದಿತವಾಗಿಲ್ಲದಿದ್ದರೂ ಬಿಹಾರ ಸಿಎಂ ನಿತೀಶ್ ಕುಮಾರ್, ಮಂಗಳವಾರ ಅಂದರೆ ಜನವರಿ 23 ರಂದು ಬೆಳಗ್ಗೆ ಅಲ್ಲಿನ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ರನ್ನು ಭೇಟಿ ಮಾಡಲು ಹಠಾತ್ತನೆ ರಾಜ ಭವನಕ್ಕೆ ಭೇಟಿ ನೀಡಿದ್ದರು. ಅವರೊಂದಿಗೆ ಜೆಡಿಯುನ ಹಿರಿಯ ನಾಯಕ ವಿಜಯ್ ಚೌಧರಿ ಕೂಡ ಉಪಸ್ಥಿತರಿದ್ದರು. ಮಾಹಿತಿ ಪ್ರಕಾರ ಮುಖ್ಯಮಂತ್ರಿಗಳು ರಾಜ್ಯಪಾಲರೊಂದಿಗೆ ಮುಚ್ಚಿದ ಕೊಠಡಿಯಲ್ಲಿ ಸುಮಾರು 40 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.
ಕಾಂಗ್ರೆಸ್‌ಗೆ ಕೈಕೊಟ್ಟ ಜೆಡಿಯು: ಕೈ ಜತೆ ಸೀಟು ಹಂಚಿಕೆ ಇಲ್ಲ: ನಿತೀಶ್ ಸಡ್ಡು
ನಿತೀಶ್ ಕುಮಾರ್ ಎನ್‌ಡಿಎಗೆ ಮರಳುವ ಕುರಿತು ಊಹಾಪೋಹಗಳು ನಡೆಯುತ್ತಿರುವಾಗಲೇ ಹಾಗೂ ಆರ್ ಜೆ ಡಿ ಮತ್ತು ಜೆಡಿಯು ನಡುವೆ ಹೆಚ್ಚಿದ ಕಂದಕದ ನಡುವೆಯೇ ರಾಜ್ಯಪಾಲರೊಂದಿಗೆ ಮುಖ್ಯಮಂತ್ರಿಗಳ ಈ ಸಭೆ ನಡೆದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಿತೀಶ್ ಕುಮಾರ್ ಬಯಸಿದರೆ, ಅವರಿಗೆ ಎನ್‌ಡಿಎ ಬಾಗಿಲು ತೆರೆದಿದೆ ಎಂದು ಹೇಳಿದಾಗ ಈ ಊಹಾಪೋಹಗಳು ತೀವ್ರವಾಯ್ತು.
ಅದರೆ, ವಿಧಾನಮಂಡಲದ ಬಜೆಟ್ ಅಧಿವೇಶನದ ಕುರಿತು ಚರ್ಚಿಸಲು ಹಾಗೂ ಈ ಸಭೆಗೆ ಯಾವುದೇ ರಾಜಕೀಯ ಕಾರಣವಿಲ್ಲ, ಉಪಕುಲಪತಿಗಳ ನೇಮಕಾತಿ ಕುರಿತು ಚರ್ಚಿಸಲು ಇಬ್ಬರ ಭೇಟಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
I.N.D.I.A ಒಕ್ಕೂಟದ ಮೀಟಿಂಗ್‌ಗೆ ಬರಲ್ಲ ಎಂದ ಪ್ರಮುಖ ಪಕ್ಷಗಳ ನಾಯಕರು: ನಾಳೆಯ ಸಭೆ ಮುಂದೂಡಿದ ಕಾಂಗ್ರೆಸ್!
ಬಿಹಾರದ ಜೆಡಿಯು ಹಾಗೂ ಆರ್‌ಜೆಡಿ ಮೈತ್ರಿಕೂಟದ ನಡುವೆ ಕಂದಕ ಹೆಚ್ಚಾಗ್ತಿದೆ ಎಂದು ಹೇಳಲಾಗಿದ್ದು, ಇದರ ಜತೆಗೆ ಇಂಡಿಯಾ ಮೈತ್ರಿಕೂಟದ ಸಂಚಾಲಕ ಸ್ಥಾನವನ್ನೂ ನಿತೀಶ್ ಕುಮಾರ್ ತಿರಸ್ಕರಿಸಿದ್ದಾರೆ ಎಂದು ವರದಿಗಳು ಹೇಳಿದ್ದವು. ಈ ನಡುವೆ ಇತ್ತೀಚೆಗೆ ಅಮಿತ್ ಶಾ, ನಿತೀಶ್ ಕುಮಾರ್ ಕಡೆಯಿಂದ ಎನ್‌ಡಿಎಗೆ ಸೇರುವ ಪ್ರಸ್ತಾವನೆ ಬಂದರೆ ಅದನ್ನು ಪರಿಗಣಿಸಲಾಗುವುದು ಎಂದು ಹೇಳಿದ್ದರು. ಅಮಿತ್ ಶಾ ಈ ಹೇಳಿಕೆಯ ನಂತರ ಬಿಜೆಪಿ ಮತ್ತು ಜೆಡಿಯು ನಾಯಕರ ಧ್ವನಿ ಪರಸ್ಪರ ಬದಲಾಗಿದೆ. ಇದೀಗ ರಾಜ್ಯಪಾಲರನ್ನು ಸಿಎಂ ಭೇಟಿ ಮಾಡಿರುವುದು ರಾಜಕೀಯ ಬಿಸಿ ಮತ್ತಷ್ಟು ಹೆಚ್ಚಿಸಿದೆ.
ಅಲ್ಲದೆ, ಬಿಹಾರ ಸಿಎಂ - ರಾಜ್ಯಪಾಲರ ನಡುವಿನ ಭೇಟಿಯ ನಂತರ, ಬಿಹಾರದ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗ್ತಿದೆ. ಬಂಗಾಳಿಯಲ್ಲಿ, "ಖೇಲಾ ಹೋಬೆ", ಮಗಾಹಿಯಲ್ಲಿ, "ಖೇಲಾ ಹೊಕ್ತೋ" ಹಾಗೂ ಭೋಜ್‌ಪುರಿಯಲ್ಲಿ.. "ಖೇಲಾ ಹೋಖಿ". ಎಂದು ಹೇಳಲಾಗುತ್ತದೆ. ಉಳಿದಂತೆ, ನೀವೇ ಬುದ್ಧಿವಂತರು..." ಎಂಬ ಅವರ ವಿಭಿನ್ನ ಪೋಸ್ಟ್ ಹಲವರ ಗಮನ ಸೆಳೆದಿದೆ.