Asianet Suvarna News Asianet Suvarna News

ಇಂಡಿಯಾ ಒಕ್ಕೂಟಕ್ಕೆ ಸಿಎಂ ನಿತೀಶ್ ಶಾಕ್, ಮೈತ್ರಿ ಮುರಿದು ಬಿಜೆಪಿ ಜೊತೆ ಸೇರುವ ಸಾಧ್ಯತೆ!

ಲೋಕಸಭಾ ಚುನಾವಣೆಗೆ ತಿಂಗಳು ಮಾತ್ರ ಬಾಕಿ ಇದೆ. ಆದರೆ ಬಿಜೆಪಿ ಸೋಲಿಸಲು ಮಾಡಿಕೊಂಡ ಮೈತ್ರಿ ಅಲುಗಾಡುತ್ತಿದೆ. ಮಮತಾ ಬ್ಯಾನರ್ಜಿ ಹಾಗೂ ಆಪ್ ಈಗಾಗಲೇ ಮೈತ್ರಿ ಮುರಿದು ಏಕಾಂಗಿ ಹೋರಾಟ ಘೋಷಿಸಿದೆ. ಇದರ ಬೆನ್ನಲ್ಲೇ ಇಂಡಿಯಾ ಮೈತ್ರಿಗೆ ಅಡಿಪಾಯ ಹಾಕಿದ ಬಿಹಾರ ಸಿಎಂ ನಿತೀಶ್ ಕುಮಾರ್ ಮೈತ್ರಿ ಮುರಿದು ಬಿಜೆಪಿ ಜೊತೆ ಸೇರುವ ಸಾಧ್ಯತೆ ಇದೆ.

Massive set back for India Alliance Bihar CM Nitish kumar likely to go with BJP again ckm
Author
First Published Jan 25, 2024, 4:26 PM IST | Last Updated Jan 25, 2024, 4:33 PM IST

ಪಾಟ್ನಾ(ಜ.25) ಕಾಂಗ್ರೆಸ್ ಹಾಗೂ ವಿಪಕ್ಷಗಳ ಇಂಡಿಯಾ ಮೈತ್ರಿ ಒಕ್ಕೂಟ ಬುಡ ಅಲುಗಾಡುತ್ತಿದೆ. ಲೋಕಸಭಾ ಚುನಾವಣೆಗೆ ಭಾರಿ ತಯಾರಿ ನಡೆಯುತ್ತಿರುವ ಬೆನ್ನಲ್ಲೇ ಇಂಡಿಯಾ ಮೈತ್ರಿ ಒಕ್ಕೂಟಕ್ಕೆ ಆಘಾತಗಳು ಎದುರಾಗುತ್ತಿದೆ. ಟಿಎಂಸಿ ಹಾಗೂ ಆಪ್ ಏಕಾಂಗಿ ಹೋರಾಟ ಮಾಡುವುದಾಗಿ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ತರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಇಂಡಿಯಾ ಮೈತ್ರಿ ಒಕ್ಕೂಟ ತೊರೆದು ಮತ್ತೆ ಬಿಜೆಪಿ ಜೊತೆ ಸೇರಲು ನಿತೀಶ್ ಕುಮಾರ್ ಮನಸ್ಸು ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. 

ಲೋಕಸಭಾ ಚುನಾವಣೆಗೆ ದಿನಾಂಕಗಳು ಹತ್ತಿರಬರುತ್ತಿದ್ದಂತೆ ನಿತೀಶ್ ಕುಮಾರ್ ಇದೀಗ ಟೂರ್ನ್ ಹೊಡೆಯುವ ಸಾಧ್ಯತೆ ಕಾಣಿಸುತ್ತಿದೆ. ಇಂಡಿಯಾ ಮೈತ್ರಿ ಒಕ್ಕೂಟಕ್ಕೆ ಅಡಿಪಾಯ ಹಾಕಿ, ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳನ್ನು ಒಗ್ಗೂಡಿಸಿದ ಕೀರ್ತಿ ನಿತೀಶ್ ಕುಮಾರ್‌ಗೆ ಸಲ್ಲಲಿದೆ. ಇಂಡಿಯಾ ಮೈತ್ರಿ ಒಕ್ಕೂಟದ ಮೊದಲ ಸಭೆಯನ್ನು ನಿತೀಶ್ ಕುಮಾರ್ ಪಾಟ್ನಾದಲ್ಲಿ ಆಯೋಜಿಸಿದ್ದರು. ಅತ್ಯಂತ ಯಶಸ್ವಿ ಸಭೆ ಇದಾಗಿತ್ತು. ಇದೀಗ ಇದೇ ನಿತೀಶ್ ಕುಮಾರ್ ಇಂಡಿಯಾ ಮೈತ್ರಿ ಮುರಿದು ಬಿಜೆಪಿ ಸೇರಲು ಸಜ್ಜಾಗಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ.

ಲೋಕಸಮರಕ್ಕೂ ಮುನ್ನ ಮೈತ್ರಿ ಠುಸ್, ಬಂಗಾಳದಲ್ಲಿ ಏಕಾಂಗಿ ಹೋರಾಟ ಘೋಷಿಸಿದ ಮಮತಾ!

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೈತ್ರಿ ಕುರಿತು ಸ್ಪಷ್ಟ ನಿಲುವು ಘೋಷಿಸಿದ್ದಾರೆ. ಕಾಂಗ್ರೆಸ್ ಸಹಾಕರ ನೀಡುತ್ತಿಲ್ಲ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ. ಯಾವುದೇ ಮೈತ್ರಿ ಇಲ್ಲ ಎಂದಿದೆ. ಇನ್ನು ಇತರ ರಾಜ್ಯಗಳಲ್ಲೂ ಇಂಡಿಯಾ ಒಕ್ಕೂಟದ ಮೈತ್ರಿಯಲ್ಲಿ ಚುನಾವಣೆ ಎದುರಿಸುತ್ತಿಲ್ಲ. ಟಿಎಂಸಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ರಾಹುಲ್ ಗಾಂಧಿಯ ಭಾರತ್ ಜೋಡೋ ನ್ಯಾಯ ಯಾತ್ರೆ ಇನ್ನೇನು ಟೇಕ್ ಆಫ್ ಆಗಬೇಕು ಅನ್ನುವಷ್ಟರಲ್ಲೇ ಮಮತಾ ಬ್ಯಾನರ್ಜಿ ಘೋಷಣೆಯಿಂದ ವಿಘ್ನ ಎದುರಾಗಿದೆ.

ಮಮತಾ ಬ್ಯಾನರ್ಜಿ ಘೋಷಣೆ ಬೆನ್ನಲ್ಲೇ ಆಮ್ ಆದ್ಮಿಪಾರ್ಟಿ ಪಂಜಾಬ್‌ನಲ್ಲಿ ಯಾವುದೇ ಮೈತ್ರಿ ಇಲ್ಲ ಎಂದು ಘೋಷಿಸಿದೆ. ಪಂಜಾಬ್‌ನಲ್ಲಿ ಆಪ್ ಯಾವುದೇ ಮೈತ್ರಿ ಇಲ್ಲದೆ ಲೋಕಸಭೆ ಚುನಾವಣೆ ಎದುರಿಸಲಿದೆ. ಕಾಂಗ್ರೆಸ್ ಜೊತೆಗೆ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದೆ. ಪಂಜಾಬ್‌ನಲ್ಲಿ ಆಪ್ ಏಕಾಂಗಿಯಾಗಿ ಗೆಲುವು ದಾಖಖಲಿಸಿದೆ. ಇಲ್ಲಿ ಮೈತ್ರಿಯ ಅವಶ್ಯಕತೆ ಇಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ. 

ಇಂಡಿಯಾ ಮೈತ್ರಿ ಚೂರು ಚೂರು, ಪಂಜಾಬ್‌ನಲ್ಲಿ ಮೈತ್ರಿ ಇಲ್ಲ ಏಕಾಂಗಿ ಹೋರಾಟ ಘೋಷಿಸಿದ ಆಪ್!

ಇಂಡಿಯಾ ಮೈತ್ರಿ ಒಕ್ಕೂಟ ಹಾಗೂ ಕಾಂಗ್ರೆಸ್‌ಗೆ ಮೇಲಿಂದ ಮೇಲೆ ಆಘಾತಗಳು ಎದುರಾಗುತ್ತಿದೆ. ಕರ್ನಾಟಕದಲ್ಲಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಇಂದು ಕಾಂಗ್ರೆಸ್ ತೊರೆದು ಮತ್ತೆ ಬಿಜೆಪಿ ಸೇರಿಕೊಂಡಿದ್ದಾರೆ. 

Latest Videos
Follow Us:
Download App:
  • android
  • ios