Asianet Suvarna News Asianet Suvarna News

ಬೀದಿಗೆ ಬಂದ ರಾಹುಲ್‌ಗೆ ನಿರ್ಮಲಾ ಏಟು, ಎಲ್ಲಾ ಟೈಮ್ ವೇಸ್ಟ್!

ರಾಹುಲ್ ಗಾಂಧಿಗೆ ಟಾಂಗ್ ನೀಡಿದ ನಿರ್ಮಲಾ ಸೀತಾರಾಮನ್/ ವಲಸೆ ಕಾರ್ಮಿಕರನ್ನು ಮನೆಗೆ ಕರೆಸಿಕೊಳ್ಳುವ ವಿಚಾರ/ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಗಳು ಕ್ರಮ ತೆಗೆದುಕೊಳ್ಳಬೇಕು

Nirmala Sitharaman Slams Congress Leader Rahul Gandhi over migrant labour issue
Author
Bengaluru, First Published May 17, 2020, 3:21 PM IST
  • Facebook
  • Twitter
  • Whatsapp

ನವದೆಹಲಿ(ಮೇ 17) ವಲಸೆ ಕಾರ್ಮಿಕರಿಗೆ ವ್ಯವಸ್ಥೆ ಕಲ್ಪಿಸುವ ವಿಚಾರ ಕಾಂಗ್ರೆಸ್ ವರ್ಸ್ಸ್ ಬಿಜೆಪಿಯಾಗಿ ಬದಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸರಿಯಾದ ಟಾಂಗ್ ಕೊಟ್ಟಿದ್ದಾರೆ.

ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು ಮೊದಲು ಸರಿಯಾಗಿ ವಲಸೆ ಕಾರ್ಮಿಕರನ್ನು ಕರೆದುಕೊಂಡು ಹೋಗಲಿ.  ಮೊದಲು ನಿಮ್ಮ ಸಿಎಂಗಳಿಗೆ ಹೇಳಿ ಅಂಥ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರಿಗೆ ವ್ಯಂಗ್ಯಭರಿತ ವಿನಂತಿ ಮಾಡಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಕೊರೋಣಾ ಆರ್ಭಟ; ಬೆಳಗ್ಗೆಯೇ ಅರ್ಧಶತಕ

ರಾಜ್ಯಗಳಿಂದ ಮನವಿ ಬಂದ ಮೂರು ಗಂಟೆಗಳಲ್ಲಿ ರೈಲು ಸಿದ್ದವಿರುತ್ತದೆ.  ಸಾವಿರಕ್ಕೂ ಹೆಚ್ಚು ರೈಲು ಗಳು ಸಿದ್ಧವಾಗಿವೆ.  ರಸ್ತೆ ಬದಿ ಕೂತು ನಾಟಕ ಮಾಡೋದು ಅಲ್ಲ. ಇಂಥ ವೇಳೆ ಎಲ್ಲರೂ ಒಟ್ಟಿಗೆ ಹೋಗಬೇಕಿದೆ ಎಂದು ರಾಹುಲ್ ಗಾಂಧಿ ಅವರಿಗೂ ಟಾಂಗ್ ನೀಡಿದ್ದಾರೆ.

ರಾಹುಲ್ ಗಾಂಧಿ ಅತಿದೊಡ್ಡ ನಾಟಕ ಆಡುತ್ತಿದ್ದಾರೆ. ದೇಶಕ್ಕೆ ಇವರ ಅಸಲಿತನ ಗೊತ್ತು. ವಲಸೆ ಕಾರ್ಮಿಕರ ಸಮಯವನ್ನು ರಾಹುಲ್ ವ್ಯರ್ಥ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಗಳ ವಿಶೇಷ ಆರ್ಥಿಕ ಪ್ಯಾಕೇಜ್ ನ್ನು ರಾಹುಲ್ ಗಾಂಧೀ ಟೀಕೆ ಮಾಡಿದ್ದರು. ಹಸಿದ ಮಕ್ಕಳಿಗೆ ಆಹಾರ ನೀಡಬೇಕು, ಬದಲಾಗಿ ಸಾಲ ನೀಡುವುದಲ್ಲ ಎಂದು ಹೇಳಿದ್ದರು.

ಮನೆಗೆ ತೆರಳುತ್ತಿರುವ ವಲಸೆ ಕಾರ್ಮಿಕರನ್ನು ಪಾದಚಾರಿ ಮಾರ್ಗದಲ್ಲಿ ಭೇಟಿ ಮಾಡಿದ್ದ ಪೋಟೋ ಸಹ ವೈರಲ್ ಆಗಿತ್ತು.  ರಾಹುಲ್ ಗಾಂಧಿ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದ್ದವು. ಇದಕ್ಕೆಲ್ಲ ಠಕ್ಕರ್ ಎನ್ನುವಂತೆ ನಿರ್ಮಲಾ ಮಾತನಾಡಿದ್ದಾರೆ.

Follow Us:
Download App:
  • android
  • ios