ನವದೆಹಲಿ(ಮೇ.06): ಸತತ 3ನೇ ಬಾರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರಿದ ಮಮತಾ ಬ್ಯಾನರ್ಜಿ ಕೆಲ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇದರಲ್ಲಿ ಚುನಾವಣಾ ಆಯೋಗದಿಂದ ಅಮಾನತಾಗಿರುವ ಪೊಲೀಸ್ ಅಧಿಕಾರಿಗಳನ್ನು ಮರುನೇಮಕ ಮಾಡಿಕೊಂಡ ನಿರ್ಧಾರ ಕೂಡ ಸೇರಿದೆ. ಇನ್ನು ಅಧಿಕಾರ ಬಂದ ಬೆನ್ನಲ್ಲೇ ತಾವು ರೈತರ ಪರ ಎಂದು ಬಿಂಬಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ ಇದೇ ಪತ್ರದಿಂದ ಮಮತಾ ಬ್ಯಾನರ್ಜಿ ಪೇಚಿಗೆ ಸಿಲುಕಿದ್ದಾರೆ.

ಅಮಾನತುಗೊಂಡಿದ್ದ ಪೊಲೀಸ್‌ ಅಧಿಕಾರಿಗಳನ್ನು ಸಿಎಂ ಆದ ಬೆನ್ನಲ್ಲೇ ವಾಪಸ್ ಕರೆಸಿದ ಮಮತಾ!

ಪಶ್ಚಿಮ ಬಂಗಾಳದ ರೈತರಿಗೆ ಬರಬೇಕಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಹಣವನ್ನು ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ 21.79 ಲಕ್ಷ ಮಂದಿ ಫಲಾನುಭವಿ ರೈತರಿಗೆ ಹಣ ಬಿಡುಗಡೆ ಮಾಡಬೇಕಾಗಿ ಮನವಿ ಮಾಡಿದ್ದಾರೆ. ಮಮತಾ ಬ್ಯಾನರ್ಜಿ ಇಂದು(ಮೇ.06) ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದರಲ್ಲಿ ಮಮತಾ ಪೇಚಿಗೆ ಸಿಲುಕಿದ್ದು ಹೇಗೆ ಅಂತೀರಾ? ಇಲ್ಲಿದೆ ವಿವರ.

 

ಚುನಾವಣೆ ಫಲಿತಾಂಶ(ಮೇ.02) ಹೊರಬಿದ್ದ ಮರುದಿನ(ಮೇ.03) ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪಶ್ಚಿಮ ಬಂಗಾಳದಲ್ಲಿ 3ನೇ ಬಾರಿಗೆ ಆಯ್ಕೆಯಾದ ನೂತನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿಗಳ ರೈತರ ಪಟ್ಟಿಯನ್ನು ಕೇಂದ್ರಕ್ಕೆ ನೀಡುವಂತೆ ಕೋರಿದ್ದಾರೆ.

3ನೇ ಬಾರಿ ಪಶ್ಚಿಮ ಬಂಗಾಳ ಸಿಎಂ ಆಗಿ ಮಮತಾ ಬ್ಯಾನರ್ಜಿ ಪ್ರಮಾಣ ವಚನ ಸ್ವೀಕಾರ!

ಕೇಂದ್ರದ ಯೋಜನೆಗಳ ರೈತ ಫಲಾನುಭವಿಗಳ ಸಂಪೂರ್ಣ ಪಟ್ಟಿಯನ್ನು ಕೇಳಿತ್ತು. ಆದರೆ ಈ ಪತ್ರವನ್ನು ನೋಡದ ಮಮತಾ ಬ್ಯಾನರ್ಜಿ ಇದೀಗ , ರೈತರ ಸೌಲಭ್ಯಗಳನ್ನು, ನಿಧಿಯನ್ನು ಬಿಡುಗಡೆ ಮಾಡಿ ಎಂದು ಪತ್ರ ಬರೆದಿದೆ. ಇಷ್ಟೇ ಅಲ್ಲ ಈ ಪತ್ರವನ್ನು ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ಮಾಧ್ಯಮದಲ್ಲಿ ಪ್ರಚಾರ ಮಾಡಿತ್ತು. ಈ ಮೂಲಕ ತಾವು ಕೇಂದ್ರವನ್ನು ಈ ಮೂಲಕ ಮನವಿ ಮಾಡುತ್ತಿರುವುದಾಗಿ ಬಿಂಬಿಸಿದ್ದಾರೆ.

ಅಸಲಿಗೆ ಮೇ.3ರಂದೇ ಪತ್ರ ಮಮತಾ ಬ್ಯಾನರ್ಜಿ ಕೈಸೇರಿದ್ದರು, ತಮ್ಮ ರಾಜಕೀಯ ಮೈಲೇಜ್‌ಗಾಗಿ ಇದೇ ವಿಚಾರ ಮುಂದಿಟ್ಟು ಕೇಂದ್ರಕ್ಕೆ ಮೇ.06ರಂದು ಪತ್ರ ಬರೆದಿದ್ದಾರೆ. ಇದೀಗ ಪತ್ರ ಜಟಾಪಟಿ ನಡೆಯುತ್ತಿದೆ.