ಸ್ಲೀಪರ್‌ ಬಸ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡು, ಜನರು ಬಸ್‌ನಿಂದ ಹೊರಬರಲಾಗದೇ ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಸುರಕ್ಷಿತ ನಿಯಮ ಪಾಲಿಸದ ಸ್ಲೀಪರ್‌ ಬಸ್‌ಗಳ ಸೇವೆ ಸ್ಥಗಿತಗೊಳಿಸುವಂತೆ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸೂಚಿಸಿದೆ.

ನವದೆಹಲಿ: ಸ್ಲೀಪರ್‌ ಬಸ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡು, ಜನರು ಬಸ್‌ನಿಂದ ಹೊರಬರಲಾಗದೇ ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಸುರಕ್ಷಿತ ನಿಯಮ ಪಾಲಿಸದ ಸ್ಲೀಪರ್‌ ಬಸ್‌ಗಳ ಸೇವೆ ಸ್ಥಗಿತಗೊಳಿಸುವಂತೆ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸೂಚಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚೆಗೆ ರಾಜಸ್ಥಾನದಲ್ಲಿ ನಡೆದ ಬಸ್ ದುರಂತದ ಬಗ್ಗೆ ಆಯೋಗಕ್ಕೆ ಜನರು ದೂರು ಸಲ್ಲಿಸಿದ್ದು, ಮುಖ್ಯವಾಗಿ ಕೆಲವು ಬಸ್‌ಗಳಲ್ಲಿ ಚಾಲಕರ ಕ್ಯಾಬಿನ್‌ ಪ್ರಯಾಣಿಕರ ವಿಭಾಗದಿಂದ ಪ್ರತ್ಯೇಕವಾಗಿರುತ್ತದೆ. ಇದು ತುರ್ತು ಸಂದರ್ಭದಲ್ಲಿ ಆಪತ್ತಿಗೆ ಕಾರಣವಾಗಬಹುದು. ಜತೆಗೆ ಇಂಥ ಸ್ಲೀಪರ್‌ ಬಸ್‌ಗಳ ವಿನ್ಯಾಸವೂ ಅಗ್ನಿ ಅವಘಡದಂಥ ತುರ್ತು ಸಂದರ್ಭದಲ್ಲಿ ಜನಸ್ನೇಹಿಯಾಗಿಲ್ಲ ಎಂದು ಆಕ್ಷೇಪಿಸಿದ್ದರು,

ದೂರುಗಳ ವಿಚಾರಣೆ ನಡೆಸಿದ ಎನ್ಎಚ್‌ಆರ್‌ಸಿ

ಈ ದೂರುಗಳ ವಿಚಾರಣೆ ನಡೆಸಿದ ಎನ್ಎಚ್‌ಆರ್‌ಸಿ ಕಾರ್ಯದರ್ಶಿ ಪ್ರಿಯಾಂಕ್‌ ಕನೂಂಗೊ ಅಧ್ಯಕ್ಷತೆಯ ಸಮಿತಿ, ‘ ಬಸ್‌ಗಳಲ್ಲಿ ಕ್ಯಾಬಿನ್‌ ವಿಭಾಗ ಪ್ರತ್ಯೇಕವಾಗಿರುವಂತಿಲ್ಲ. 12 ಮೀ ಉದ್ದದ ಬಸ್‌ಗಳಿಗೆ ಕನಿಷ್ಠ 4 ತುರ್ತು ನಿರ್ಗಮನ ದ್ವಾರ ಇರಬೇಕು. ಒಂದು ವೇಳೆ ಅದಕ್ಕಿಂತ ಹೆಚ್ಚು ಉದ್ದವಿದ್ದರೆ 5 ತುರ್ತು ನಿರ್ಗಮನ ಕಡ್ಡಾಯವಾಗಿ ಇರಬೇಕು. ಬಸ್‌ಗಳ ವಿನ್ಯಾಸವು ನಿಯಮಗಳಿಗೆ ಅನುಸಾರ ಇಲ್ಲದಿದ್ದರೆ ಅವುಗಳ ಓಡಾಟಕ್ಕೆ ಅವಕಾಶ ನೀಡಬಾರದು ಎಂದು ಸೂಚಿಸಿದೆ.

ಸರಣಿ ದುರಂತಗಳು:

ಕಳೆದೆರೆಡು ತಿಂಗಳಲ್ಲಿ ದೇಶದಲ್ಲಿ ಹಲವು ಸ್ಲೀಪರ್‌ ಬಸ್‌ಗಳು ಸಾವಿನ ಮನೆಗಳಾಗಿ ಪರಿಣಮಿಸಿದ್ದವು. ಹೈದರಾ ಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಕಾವೇರಿ ಟ್ರಾವೆಲ್ಸ್‌ಗೆ ಕರ್ನೂಲ್‌ನಲ್ಲಿ ಬೆಂಕಿ ಹೊತ್ತಿಕೊಂಡು 19 ಪ್ರಯಾಣಿಕರು ಸಜೀವ ದಹನವಾಗಿದ್ದರು. ಜೈಪುರನಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡು 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.