ತೆಲಂಗಾಣ ಸರ್ಕಾರವು 'ಇಂದಿರಮ್ಮ ಸೀರೆ ವಿತರಣೆ ಯೋಜನೆ'ಯನ್ನು ಜಾರಿಗೆ ತಂದಿದೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಉದ್ಘಾಟಿಸಿದಎರಡು ಹಂತಗಳಲ್ಲಿ ರಾಜ್ಯದ ಸುಮಾರು 1 ಕೋಟಿ ಅರ್ಹ ಮಹಿಳೆಯರಿಗೆ ಉಚಿತವಾಗಿ ಸೀರೆ ವಿತರಣೆ ಈ ಯೋಜನೆಯು ಇಂದಿರಾ ಗಾಂಧಿಯವರಿಂದ ಪ್ರೇರಿತವಾದ ಮಹಿಳಾ ಸಬಲೀಕರಣದ ಒಂದು ಭಾಗವಾಗಿದೆ.

ಹೈದರಾಬಾದ್‌ (ನ.20): ಈಗಾಗಲೇ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, ಮಾಸಿಕ ಹಣ ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದ ತೆಲಂಗಾಣ ಸರ್ಕಾರ ಈಗ ಉಚಿತ ಸೀರೆ ಯೋಜನೆ ಜಾರಿಗೆ ತಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದಿರಮ್ಮ ಸೀರೆ ವಿತರಣೆ ಯೋಜನೆ:

ಭಾರತದ ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮ ವಾರ್ಷಿಕೋತ್ಸವದಂದು 1 ಕೋಟಿ ಮಹಿಳೆಯರಿಗೆ ಸೇರೆ ಹಂಚುವ ‘ಇಂದಿರಮ್ಮ ಸೀರೆ ವಿತರಣೆ ಯೋಜನೆ’ಯನ್ನು ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಬುಧವಾರ ಉದ್ಘಾಟಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ರೆಡ್ಡಿ, ‘ಸೀರೆ ವಿತರಣೆ ಯೋಜನೆ 2 ಹಂತದಲ್ಲಿ ಈ ಯೋಜನೆ ಜಾರಿಯಾಗಲಿದೆ. ಮೊದಲು ಡಿ.9ರ ಒಳಗೆ ಗ್ರಾಮೀಣ ಭಾಗದ ಅರ್ಹ ಮಹಿಳೆಯರಿಗೆ ಸೀರೆ ನೀಡಲಾಗುವುದು. ಬಳಿಕ ಮಾ.1-8ರ ಹೊತ್ತಿಗೆ ನಗರಪ್ರದೇಶದಲ್ಲಿ 65 ಲಕ್ಷ ಸೀರೆಗಳ ವಿತರಣೆಯಾಗುವುದು ಎಂದರು.

ಮಹಿಳಾ ಸಬಲೀಕರಣ ಕಾರ್ಯಕ್ರಮಕ್ಕೆ ಇಂದಿರಾ ಗಾಂದಿ ಪ್ರೇರಣೆ:

ಇಂದಿರಾ ಅವರಿಂದ ಪ್ರೇರಿತರಾಗಿ ನಮ್ಮ ಸರ್ಕಾರ ಹಲವು ಮಹಿಳಾ ಸಬಲೀಕರಣ ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದು ರೆಡ್ಡಿ ಹೇಳಿದರು. ಇದೇ ವೇಳೆ, ಆ ಸೀರೆ ಉಟ್ಟು ಮಹಿಳಾ ಸ್ವಾಭಿಮಾನವನ್ನು ಪ್ರದರ್ಶಿಸುವಂತೆ ಸಚಿವೆಯರು ಮತ್ತು ಶಾಸಕಿಯರಿಗೆ ಕರೆ ನೀಡಿದರು.