Asianet Suvarna News Asianet Suvarna News

Petrol Price Hike ನವವಿವಾಹಿತ ಜೋಡಿಗೆ ಪೆಟ್ರೋಲ್-ಡೀಸೆಲ್ ಗಿಫ್ಟ್!

ಚೆಂಗಲ್ಪಟ್ಟು ಜಿಲ್ಲೆಯ ಚೆಯ್ಯೂರಿನಲ್ಲಿ ಅದ್ದೂರಿಯಾಗಿ ನಡೆದ ಆರತಕ್ಷತೆ

ಉಡುಗೊರೆಯಾಗಿ ತಲಾ ಒಂದು ಲೀಟರ್ ಪೆಟ್ರೋಲ್, ಡೀಸೆಲ್

ದುಬಾರಿಯಾದ ವಸ್ತುಗಳನ್ನು ವಿಶೇಷ ರೀತಿಯಲ್ಲಿ ಗಿಫ್ಟ್ ಆಗಿ ನೀಡುವುದು ಇತ್ತೀಚಿನ ಟ್ರೆಂಡ್
 

newly married couple received unusual gifts as they were presented petrol and diesel as their wedding gift in Tamil Nadu san
Author
Bengaluru, First Published Apr 7, 2022, 7:06 PM IST

ಚೆನ್ನೈ (ಏ. 7): ಭಾರತದಲ್ಲಿ ಇಂಧನ ದರಗಳು (Oil Rate) ಹೆಚ್ಚುತ್ತಲೇ ಇರುವುದರಿಂದ, ನವವಿವಾಹಿತ ದಂಪತಿಗಳಿಗೆ (Newley Wed)ತಮಿಳುನಾಡಿನ ಸ್ನೇಹಿತರು ಮದುವೆಯ ಉಡುಗೊರೆಯಾಗಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ನೀಡಿದ್ದಾರೆ.  ಗಿರೀಶ್ ಕುಮಾರ್ ಮತ್ತು ಕೀರ್ತನಾ ಅವರ ಸ್ನೇಹಿತರು ಮದುವೆಯ ಉಡುಗೊರೆಯಾಗಿ ದಂಪತಿಗೆ ಸ್ವಲ್ಪ ಪ್ರಮಾಣದ ಪೆಟ್ರೋಲ್ (Petrol),  ಡೀಸೆಲ್ (Diesel) ಅನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದರು.

ಸಾಮಾನ್ಯವಾಗಿ ಮದುವೆಗಳಲ್ಲಿ ಸ್ವಲ್ಪ ದುಬಾರಿ ಎನಿಸುವಂಥ ಗಿಫ್ಟ್ ನೀಡುವುದು ವಾಡಿದೆ. ಅದರಂತೆ ದುಬಾರಿಯಾದ ದಿನಬಳಕೆಯ ವಸ್ತುಗಳನ್ನು ಮದುವೆಗಳಲ್ಲಿ ಗಿಫ್ಟ್ ಆಗಿ ನೀಡುವುದು ಇತ್ತೀಚಿನ ಟ್ರೆಂಡ್ ಆಗಿದೆ. ಈ ಹಿಂದೆ ಈರುಳ್ಳಿ, ಟೊಮಾಟೋ, ಅಲೂಗಡ್ಡೆ ಬೆಲೆಗಳಲ್ಲಿ ವಿಪರೀತ ಏರಿಕೆಯಾಗಿದ್ದಾಗ ಇದೇ ರೀತಿಯಲ್ಲಿ ಮದುವೆಗಳಲ್ಲಿ ಗಿಫ್ಟ್ ಆಗಿ ನೀಡುವ ಮೂಲಕ ಲೇವಡಿ ಮಾಡಲಾಗಿತ್ತು.

ಚೆಂಗಲ್ಪಟ್ಟು ಜಿಲ್ಲೆಯ ಚೆಯ್ಯೂರ್‌ನಲ್ಲಿ(Cheyyur) ನಡೆದ ಆರತಕ್ಷತೆ ಸಮಾರಂಭದಲ್ಲಿ, ಇಂಧನ ಬೆಲೆಗಳು ಗಗನಕ್ಕೇರಿರುವ ಸಮಯದಲ್ಲಿ ದಂಪತಿಗಳ ಸ್ನೇಹಿತರು ಅವರ ಮದುವೆಯ ಉಡುಗೊರೆಯಾಗಿ ಒಂದು ಲೀಟರ್ ಪೆಟ್ರೋಲ್ ಮತ್ತು ಒಂದು ಲೀಟರ್ ಡೀಸೆಲ್ ಅನ್ನು ಉಡುಗೊರೆಯಾಗಿ ನೀಡಿದರು.

ಇಂಧನ ಮತ್ತು ದಿನಬಳಕೆಯ ವಸ್ತುಗಳನ್ನು ಮದುವೆಯಲ್ಲಿ ಉಡುಗೊರೆಯಾಗಿ ನೀಡುವುದು ಇತ್ತೀಚಿನ ವಾಡಿಕೆ. ಯಾಕೆಂದರೆ, ಇತ್ತೀಚಿಗೆ ಇವುಗಳ ಬೆಲೆಯಲ್ಲಿ ಆಗಿರುವ ಏರಿಕೆ. ಇದರಿಂದ ಸಾರ್ವಜನಿಕರ ಗಮನವೂ ಇದರ ಮೇಲೆ ಸೆಳೆದಿದೆ. 2021ರ ಫೆಬ್ರವರಿಯಲ್ಲಿ, ತಮಿಳುನಾಡಿನ ನವವಿವಾಹಿತ ದಂಪತಿಗಳು ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಕ್ಯಾನ್ ಮತ್ತು ಈರುಳ್ಳಿಯ ಹಾರದಂತಹ ವಿಶೇಷ ಉಡುಗೊರೆಗಳನ್ನು ಮದುವೆಯಲ್ಲಿ ಪಡೆದಿದ್ದರು. ಅಲ್ಲದೆ, ಒಡಿಶಾದ ಝಾರ್ಸುಗುಡಾ ಜಿಲ್ಲೆಯ ಪುರುನಬಸ್ತಿ ಗ್ರಾಮದ ದೇಬಾಶಿಶ್ ಪಟ್ನಾಯಕ್ ಮತ್ತು ಸಿಬಾನಿ ಎಂದು ದಂಪತಿಗೆ ಸ್ನೇಹಿತರು ತಮ್ಮ ಮದುವೆಯ ಉಡುಗೊರೆಯಾಗಿ ಪೆಟ್ರೋಲ್ ಅನ್ನು ಸಹ ನೀಡಿದ್ದರು.

ಬೆಲೆ ಏರಿಕೆ ಖಂಡಿಸಿ ತಾಲೂಕು ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆ

16 ದಿನದೊಳಗೆ 14 ಬಾರಿ ಬೆಲೆ ಏರಿಕೆಯಾಗಿದ್ದು, ಲೀಟರ್ ಪೆಟ್ರೋಲ್ ದರದ ನಡುವೆಯೇ ಪೈಪೋಟಿ ಏರ್ಪಟ್ಟಿದೆ. 15 ದಿನಗಳ ಅಂತರದಲ್ಲಿ ತಮಿಳುನಾಡಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 9 ರೂ.ಗೂ ಹೆಚ್ಚು ಏರಿಕೆಯಾಗಿದ್ದು, ಲೀಟರ್ ಪೆಟ್ರೋಲ್ ಪ್ರತಿ ಲೀಟರ್ ಗೆ 110.85 ರೂ., ಡೀಸೆಲ್ 100.94 ರೂ.ಗೆ ಮಾರಾಟವಾಗುತ್ತಿದ್ದು, ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭವನ್ನು ಬಳಸಿಕೊಂಡು, ಇತ್ತೀಚೆಗೆ ಚೆಯ್ಯೂರಿನಲ್ಲಿ ವಿವಾಹವಾದ ಗಿರೀಶ್ ಕುಮಾರ್ ಮತ್ತು ಕೀರ್ತನಾ ಅವರ ಸ್ನೇಹಿತರು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಉಡುಗೊರೆಯಾಗಿ ನೀಡಿದರು. ಮೊದಮೊದಲು ಅಚ್ಚರಿಗೊಂಡ ದಂಪತಿ, ಬಳಿಕ ಖುಷಿಯಿಂದ ಉಡುಗೊರೆ ಸ್ವೀಕರಿಸಿದರು.

ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮವಾಗಿ ಕಚ್ಚಾತೈಲ ಬೆಲೆ ದಶಕದ ಬಳಿಕ ಮೊದಲ ಬಾರಿಗೆ ಭಾರೀ ಏರಿಕೆ ಕಂಡು ಬಂದಿದೆ. ಈ ಬೆನ್ನಲ್ಲೇ ದೇಶದಲ್ಲಿ ಸುಮಾರು 137 ದಿನಗಳ ನಂತರ ಪೆಟ್ರೋಲ್‌ ಹಾಗೂ ಡೀಸೆಲ್ ದರವನ್ನು ಏರಿಕೆ ಮಾಡಲಾಗಿದೆ. ಪೆಟ್ರೋಲ್‌, ಡೀಸೆಲ್ ದರ ಕಳೆದ 15 ದಿನಗಳಲ್ಲಿ ಒಂದೆರಡು ದಿನ ಮಾತ್ರ ಸ್ಥಿರವಾಗಿದ್ದು, ಉಳಿದ ದಿನಗಳಲ್ಲಿ ಏರಿಕೆ ಕಂಡಿದೆ.

Price List: ಪೆಟ್ರೋಲ್, ಡಿಸೇಲ್ ದರ ಸತತ ಏರಿಕೆ, ಚಿನ್ನ, ಬೆಳ್ಳಿ ಬಲು ದುಬಾರಿ..!

ಸ್ಥಳೀಯ ತೆರಿಗೆಯ ಆದಾರದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆ ಆಗುತ್ತದೆ. ಮುಂಬೈ ಮೆಟ್ರೋ ನಗರಗಳಲ್ಲಿ ಹೆಚ್ಚಿನ ಇಂಧನ ಬೆಲೆ ಇದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕ್ರಮವಾಗಿ ಲೀಟರ್‌ಗೆ 119.67 ರೂಪಾಯಿ ಮತ್ತು 103.92 ರೂಪಾಯಿ ಆಗಿದೆ.

Follow Us:
Download App:
  • android
  • ios