Rajnath Singh: ಹೊಸ ಮತ್ತು ಶಕ್ತಿಶಾಲಿ ಭಾರತ ಪಾಕಿಸ್ತಾನ ಚೀನಾಗಳಿಗೆ ತಕ್ಕ ಪ್ರತ್ತ್ಯುತ್ತರ ನೀಡಲಿದೆ!
*ಶಹೀದ್ ಸಮ್ಮಾನ್ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಸಿಂಗ್
*ದೇಶದಲ್ಲಿ ಶಾಂತಿಯನ್ನು ಅಸ್ಥಿರಗೊಳಿಸಿದರೆ ಪಾಕಿಸ್ತಾನಕ್ಕೆ ತಕ್ಕ ಉತ್ತರ
*ನಮ್ಮ ಒಂದು ಇಂಚು ಭೂಮಿಯನ್ನು ಯಾರೂ ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ
*ಚೀನಾ ಸರಿಯಾಗಿ ವಿಷಯಗಳನ್ನು ಅರ್ಥಮಾಡಿಕೊಳ್ಳುತ್ತಿಲ್ಲ : ರಾಜನಾಥ್
ಉತ್ತರಾಖಂಡ(ನ.20): ದೇಶದಲ್ಲಿ ಶಾಂತಿಯನ್ನು ಅಸ್ಥಿರಗೊಳಿಸಲು ಪಾಕಿಸ್ತಾನ (Pakistan) ಮಾಡುವ ಯಾವುದೇ ಪ್ರಯತ್ನಗಳಿಗೆ 'ಹೊಸ ಮತ್ತು ಶಕ್ತಿಶಾಲಿ ಭಾರತ' ತಕ್ಕ ಪ್ರತ್ಯುತ್ತರ (befitting reply) ನೀಡಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Defense Minister Rajnath Singh) ಶನಿವಾರ (ನ.20) ಹೇಳಿದ್ದಾರೆ. ಉತ್ತರಾಖಂಡದ ಪಿಥೋರಗಢ್‌ನಲ್ಲಿ ಶಹೀದ್ ಸಮ್ಮಾನ್ ಯಾತ್ರೆಯನ್ನು (Shaheed Samman Yatra ) ಉದ್ದೇಶಿಸಿ ಮಾತನಾಡಿದ ಸಿಂಗ್, "ಭಾರತದಲ್ಲಿ ಶಾಂತಿಯನ್ನು ಅಸ್ಥಿರಗೊಳಿಸಲು ಪಾಕಿಸ್ತಾನ ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ ಆದರೆ ನಾವು ಅವರಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ನಾವು ಅವರಿಗೆ ಸ್ಪಷ್ಟ ಸಂದೇಶವನ್ನು ಕಳುಹಿಸಿದ್ದೇವೆ. ಇದು ಹೊಸ ಮತ್ತು ಶಕ್ತಿಯುತ ಭಾರತ" ಎಂದು ಹೇಳಿದರು.
ನಮ್ಮ ಒಂದು ಇಂಚು ಭೂಮಿಯನ್ನು ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ!
"ಪಶ್ಚಿಮ ಗಡಿಯಲ್ಲಿರುವ (Western Boundry) ನಮ್ಮ ನೆರೆಹೊರೆಯವರಿಗೆ ನಾವು ಸ್ಪಷ್ಟ ಸಂದೇಶವನ್ನು ನೀಡಿದ್ದೇವೆ, ಅದು ತನ್ನ ಮಿತಿಯನ್ನು ದಾಟಿದರೆ, ನಾವು ಗಡಿಯಲ್ಲಿ ಪ್ರತೀಕಾರ ತೀರಿಸುವುದಿಲ್ಲ ಆದರೆ ಗಡಿಯನ್ನು ದಾಟಿ ಸರ್ಜಿಕಲ್ (Surgical) ಮತ್ತು ಎರ್ ಸ್ಟ್ರೈಕ್ (Air Strike) ದಾಳಿ ಮಾಡಬಹುದು". ನಮಗೆ ಇನ್ನೂ ಒಬ್ಬ ನೆರೆಹೊರೆಯವರಿದ್ದಾರೆ, ಅದು ವಿಷಯಗಳನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ರಕ್ಷಣಾ ಸಚಿವರು ಚೀನಾವನ್ನು ಹೆಸರಿಸದೆ ಚೀನಾ (China) ಬಗ್ಗೆ ಮಾತನಾಡಿದ್ದಾರೆ. ವಿಶ್ವದ ಯಾವುದೇ ದೇಶವು "ನಮ್ಮ ಒಂದು ಇಂಚು ಭೂಮಿಯನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸಿದರೆ, ಭಾರತ ಅದಕ್ಕೆ ತಕ್ಕ ಉತ್ತರವನ್ನು ನೀಡುತ್ತದೆ" ಎಂದು ಸಿಂಗ್ ಸ್ಪಷ್ಟವಾಗಿ ಹೇಳಿದ್ದಾರೆ.
ನೆರೆಹೊರೆಯವರು ಯಾವುದೇ ಭ್ರಮೆಯಲ್ಲಿ ಬದುಕಬಾರದು!
1971 ರಲ್ಲಿ ಭಾರತದ ನಿರ್ಣಾಯಕ ವಿಜಯದ ಬಗ್ಗೆ ಎಲ್ಲರಿಗೂ ತಿಳಿದಿದೆ ಎಂದು ಹೇಳಿದ ಸಿಂಗ್, ಭಾರತದ ನೆರೆಹೊರೆಯವರು (neigbours) ಯಾವುದೇ ಭ್ರಮೆಯಲ್ಲಿ ಬದುಕಬಾರದು ಎಂದು ಎಚ್ಚರಿಸಿದರು. ಅವರು ಇತ್ತೀಚೆಗೆ ಉದ್ಘಾಟಿಸಿದ ಲಿಪುಲೇಖ್ ಪಾಸ್‌ನಿಂದ ಧಾರ್ಚುಲಾ ಮೂಲಕ ಮಾನಸಸರೋವರಕ್ಕೆ ಹೋಗುವ ರಸ್ತೆಯ ಬಗ್ಗೆ ನೇಪಾಳದಲ್ಲಿ (Nepal) ತಪ್ಪು ಮಾಹಿತಿಯನ್ನು ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ನೇಪಾಳ ನಮ್ಮೊಂದಿಗೆ ನಿಕಟ ಸಾಂಸ್ಕೃತಿಕ ಸಂಬಂಧಗಳ ಬೆಸೆಯಲು ವಿಫಲವಾಗಿದೆ ಎಂದು ಅವರು ಹೇಳಿದರು.
Navjot singh sidhu:ಇಮ್ರಾನ್ ಖಾನ್ ನನ್ನ ಅಣ್ಣ, ನಮಗೆ ಗಡಿ ಯಾಕಣ್ಣ; ಸಿಧು ಮತ್ತೊಂದು ವಿವಾದ!
ನೇಪಾಳದ ಸೇನಾ ಮುಖ್ಯಸ್ಥ ಜನರಲ್ ಪ್ರಭು ರಾಮ್ ಶರ್ಮಾ (General Prabhu Ram Sharma) ಅವರಿಗೆ ಇತ್ತೀಚೆಗೆ ಭಾರತೀಯ ಸೇನಾ ಮುಖ್ಯಸ್ಥರ ಗೌರವ ಶ್ರೇಣಿಯನ್ನು ನೀಡಿರುವುದು ನೇಪಾಳದೊಂದಿಗಿನ ಭಾರತದ ನಿಕಟ ಸಾಂಸ್ಕೃತಿಕ ಸಂಬಂಧವನ್ನು ಪುನರುಚ್ಚರಿಸುತ್ತದೆ ಎಂದಿದ್ದಾರೆ. 'ಶಹೀದ್ ಸಮ್ಮಾನ್ ಯಾತ್ರೆ'ಯ ಎರಡನೇ ಹಂತವನ್ನು ಪ್ರಾರಂಭಿಸಿದ ಸಿಂಗ್, ಡೆಹ್ರಾಡೂನ್‌ನಲ್ಲಿ (Dehradun) ನಿರ್ಮಿಸಲಾಗುತ್ತಿರುವ ಸೈನ್ಯ ಧಾಮದ (Sainya Dham) ಮೇಲೆ ಹುತಾತ್ಮರ ಹೆಸರುಗಳು ಮತ್ತು ಅವರ ಗ್ರಾಮಗಳ ಹೆಸರನ್ನು ಸರಿಯಾಗಿ ಸೂಚಿಸುವಂತೆ ರಾಜ್ಯ ಸರ್ಕಾರವು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (Narendar Modi) ದೂರದೃಷ್ಟಿಯಂತೆ ಉತ್ತರಾಖಂಡದ 1,734 ಹುತಾತ್ಮರ ಕುಟುಂಬಗಳ ಮನೆಗಳಿಂದ ಮಣ್ಣನ್ನು ಡೆಹ್ರಾಡೂನ್‌ಗೆ ತಂದು ಸೈನ್ಯ ಧಾಮ ನಿರ್ಮಾಣಕ್ಕೆ ಬಳಸಲಾಗುತ್ತದೆ ಎಂದು ಸಿಂಗ್ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿಂಗ್, ಯುದ್ಧದಲ್ಲಿ ಹುತಾತ್ಮರಾದವರಿಗೆ ನೀಡಲಾಗುವ ಪರಿಹಾರದ ಮೊತ್ತವನ್ನು ಕೇಂದ್ರವು 8 ಲಕ್ಷ ರೂ.ಗೆ ಹೆಚ್ಚಿಸಿದೆ ಎಂದು ತಿಳಿಸಿದರು.
ಸೈನಿಕರ ಪರಿಹಾರ ಮೊತ್ತವನ್ನು ನಾಲ್ಕು ಪಟ್ಟು ಹೆಚ್ಚಿಸಲಾಗಿದೆ!
"ಈ ಹಿಂದೆ ಯುದ್ಧದಲ್ಲಿ ಗಾಯಗೊಂಡವರಿಗೆ ನೀಡುತ್ತಿದ್ದ 2 ಲಕ್ಷ ರೂಪಾಯಿಗಳ ಪರಿಹಾರ ಮೊತ್ತವನ್ನು ( ex-gratia) ನಾಲ್ಕು ಪಟ್ಟು ಹೆಚ್ಚಿಸಲಾಗಿದೆ" ನವೆಂಬರ್ 18 ರಂದು ಲಡಾಖ್‌ನ ರೆಜಾಂಗ್ ಲಾಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡ ಅವರು, "ನಾನು ರೆಜಾಂಗ್ ಲಾಗೆ ಹೋಗಿದ್ದೆ, ಅಲ್ಲಿ ಕುಮಾನ್ ಬೆಟಾಲಿಯನ್‌ನ 124 ಜವಾನರು ಮಾಡಿದ ಪವಾಡದ ಬಗ್ಗೆ ನನಗೆ ತಿಳಿಸಲಾಯಿತು ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
Aatmanirbhar Bharat: ಮೋದಿಯಿಂದ ಸೇನೆಗೆ 'ಮೇಡ್ ಇನ್ ಇಂಡಿಯಾ' ಶಸ್ತ್ರಾಸ್ತ್ರ ಹಸ್ತಾಂತರ!
ಉತ್ತರಾಖಂಡದಲ್ಲಿ ಐದನೇ ಧಾಮವೊಂದಿದ್ದರೆ, ಅದು ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಮನೆಗಳ ಮಣ್ಣನ್ನು ಹೊಂದಿರುತ್ತದೆ ಉತ್ತರಾಖಂಡದಲ್ಲಿ ನಾಲ್ಕು ಧಾಮಗಳಿವೆ ಮತ್ತು 'ಸೈನ್ಯ ಧಾಮ' ಮಾಡಿದರೆ, ನಾವು ಇಲ್ಲಿ ಐದನೇ ಧಾಮವನ್ನು ಹೊಂದಿದ್ದೇವೆ ಎಂದು ಹೇಳಬಹುದು. ಈ ಧಾಮವು ಹುತಾತ್ಮರ ಮನೆಗಳಿಂದ ಮಣ್ಣನ್ನು ಹೊಂದಿರುತ್ತದೆ," ಎಂದು ಸಿಂಗ್ ಹೇಳಿದರು.