Asianet Suvarna News Asianet Suvarna News

Aatmanirbhar Bharat: ಮೋದಿಯಿಂದ ಸೇನೆಗೆ 'ಮೇಡ್‌ ಇನ್ ಇಂಡಿಯಾ' ಶಸ್ತ್ರಾಸ್ತ್ರ ಹಸ್ತಾಂತರ!

* ರಕ್ಷಣಾ ಪಡೆಯನ್ನು ಆತ್ಮನಿರ್ಭರ ಮಾಡುವ ಪ್ರಯತ್ನ: ಮೋದಿ

* ಮೇಕ್‌ ಇನ್‌ ಇಂಡಿಯಾ ಮೂಲಕ ಮೇಕ್‌ ಫ್‌ ದ ವರ್ಲ್ಡ್‌ ಸಂಕಲ್ಪ

* ಮೋದಿಯಿಂದ ಸೇನೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಹಸ್ತಾಂತರ

PM Modi hands over Made in India combat chopper to IAF advanced warfare suite to Navy in Jhansi pod
Author
Bangalore, First Published Nov 20, 2021, 9:40 AM IST

ಝಾನ್ಸಿ (ನ.20): ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಶುಕ್ರವಾರ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದ ರಾಷ್ಟ್ರ ರಕ್ಷಾ ಸಮರ್ಪಣ ಪರ್ವದಲ್ಲಿ ಮೇಡ್‌ ಇನ್‌ ಇಂಡಿಯಾ (Made In India) ಯುದ್ಧ ಹೆಲಿಕಾಪ್ಟರ್‌ಗಳು, ಡ್ರೋನ್‌ಗಳು (Drone) ಮತ್ತು ಅತ್ಯಾಧುನಿಕ ಎಲೆಕ್ಟ್ರಾನಿಕ್‌ ಶಸ್ತ್ರಾಸ್ತ್ರಗಳನ್ನು ಭಾರತೀಯ ಸೇನಾಗೆ ಹಸ್ತಾಂತರಿಸಿದರು.

ಸ್ವಾತಂತ್ರ್ಯೋತ್ಸವಕ್ಕೆ 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಮೂರು ದಿನಗಳ ಪರ್ವವು ಬುಧವಾರದಿಂದ ಆರಂಭವಾಗಿದೆ. ಕೊನೆಯ ದಿನವಾದ ಶುಕ್ರವಾರ ಪ್ರಧಾನಿ ಮೋದಿ, ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿ. (Hindustan Aeronautics Limited) ಅಭಿವೃದ್ಧಿಪಡಿಸಿರುವ ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು ವಾಯು ಸೇನಾ ಮುಖ್ಯಸ್ಥರಿಗೆ ಹಸ್ತಾಂತರಿಸಿದರು. ಡ್ರೋನ್‌ಗಳು (Drone) ಮತ್ತು ಮಾನವರಹಿತ ಏರಿಯಲ್‌ ವೆಹಿಕಲ್‌ಗಳನ್ನು ಭೂ ಸೇನಾ ಮುಖ್ಯಸ್ಥರಿಗೆ ನೀಡಿದರು. ಡಿಆರ್‌ಡಿಒ (DRDO) ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಎಲೆಕ್ಟ್ರಾನಿಕ್‌ ಯುದ್ಧ ಸಾಮಗ್ರಿಗಳನ್ನು ನೌಕಾದಳ ಮುಖ್ಯಸ್ಥರಿಗೆ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಪ್ರಧಾನಿ ಮೋದಿ, ‘ಭಾರತ ತನ್ನ ರಕ್ಷಣಾ ಪಡೆಯನ್ನು ಆತ್ಮನಿರ್ಭರ ಮಾಡಲು ಶ್ರಮಿಸುತ್ತಿದೆ. ದೇಶವು ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಖರೀದಿದಾರ ರಾಷ್ಟ್ರಗಳಲ್ಲಿ ಒಂದಾಗಿದೆ. ಆದರೆ ಈಗ ದೇಶದ ‘ಮೇಕ್‌ ಇನ್‌ ಇಂಡಿಯಾ’ ಮಂತ್ರ ‘ಮೇಕ್‌ಫಾರ್‌ ದ ವರ್‌್ರ್ಡ’ (ಇಡೀ ಜಗತ್ತಿಗಾಗಿ ನಿರ್ಮಿಸು) ಎಂಬ ಸಂಕಲ್ಪ ಮಾಡಿದೆ ಎಂದರು. ಇವತ್ತಿನಿಂದ ನಮ್ಮ ಸೇನಾ ಬಲ ದುಪ್ಪಟ್ಟಾಗಿದೆ. ಇದೇ ವೇಳೆ 100 ಸೈನಿಕ ಶಾಲೆಗಳ ಮೂಲಕ ಭವಿಷ್ಯದಲ್ಲಿ ದೇಶದ ರಕ್ಷಣೆಗೆ ಯುವ ಜನರನ್ನು ಸಿದ್ಧಗೊಳಿಸಲಾಗುತ್ತಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಉತ್ತರ ಪ್ರದೇಶದ ಬುಂದೇಲ್ಕಂಡದಲ್ಲಿ 3,425 ಕೋಟಿ ರು. ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

Predator Drones: ಅಮೆರಿಕಾದಿಂದ 30 ಡ್ರೋನ್ ಖರೀದಿಗೆ ಭಾರತ ಸಿದ್ಧತೆ!

 

ಸದ್ಯದಲ್ಲೇ ಭಾರತವು ಅಮೆರಿಕದಿಂದ (America) 21,000 ಕೋಟಿ ಮೌಲ್ಯದ ಪ್ರಿಡೇಟರ್ ಡ್ರೋನ್‌ಗಳನ್ನು (Predator drones)  ಖರೀದಿಸುವ ಚಿಂತನೆ ನಡೆಸಿದೆ. ರಕ್ಷಣಾ ಸಚಿವಾಲಯದ ಉನ್ನತ ಮಟ್ಟದ ಸಭೆಯಲ್ಲಿ ಒಪ್ಪಿಗೆ ದೊರೆತರೆ ಪ್ರಸ್ತಾವವನ್ನು ರಕ್ಷಣಾ ಸ್ವಾಧೀನ ಮಂಡಳಿಗ (Defence Acquisition Council) ರವಾನಿಸಲಾಗುತ್ತದೆ. ಈ ಡ್ರೋನ್‌ಗಳು ಸುಧಾರಿತ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರಗಳನ್ನೊಳಗೊಂಡಿದ್ದು ದೀರ್ಘ ಶ್ರೇಣಿಯ ಕಣ್ಗಾವಲು ಹಾಗೂ ನಿಖರವಾದ ದಾಳಿಗೆ ನೆರವಾಗಲಿವೆ. ಜಲಪ್ರದೇಶ ಹಾಗೂ ವಾಯುಪ್ರದೇಶ ರಕ್ಷಣೆಗೆ ನೆರವಾಗಲಿದೆ.

ಭಾರತಕ್ಕೆ ಚೀನಾ ಭಾರಿ ಅಪಾಯ: ಸೇನಾಪಡೆಗಳ ಮುಖ್ಯಸ್ಥ ರಾವತ್‌!

ಸುಮಾರು 21,000 ಕೋಟಿ ಮೌಲ್ಯದ ಸ್ವಾಧೀನಪಡಿಸಿಕೊಳ್ಳುವ ಕುರಿತು ಚರ್ಚಿಸಲು ರಕ್ಷಣಾ ಸಚಿವಾಲಯದಲ್ಲಿ ಸೋಮವಾರ ಉನ್ನತ ಮಟ್ಟದ ಸಭೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಹಿರಿಯ ಅಧಿಕಾರಿಗಳು ಪಾಲ್ಗೊಳ್ಳುವ ಸಭೆಯ ಅಧ್ಯಕ್ಷತೆಯನ್ನು ರಕ್ಷಣಾ ಕಾರ್ಯದರ್ಶಿ ವಹಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಸ್ವಾಧೀನಕ್ಕೆ ಒಪ್ಪಿಗೆ ದೊರೆತರೆ ಅದನ್ನು ರಕ್ಷಣಾ ಸಚಿವರ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿಗೆ ರವಾನಿಸಲಾಗುತ್ತದೆ. ನಂತರ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಅಂತಿಮ ಒಪ್ಪಿಗೆ ನೀಡಲು ಭದ್ರತೆಯ ಕ್ಯಾಬಿನೆಟ್ ಸಮಿತಿಗೆ (Cabinet Committee on Security) ಕಳುಹಿಸಲಾಗುತ್ತದೆ. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ತಲಾ 10 ಡ್ರೋನ್‌ಗಳನ್ನು ಕಸ್ಟಮೈಸ್ (customise) ಮಾಡಿದ ವಿಶೇಷಣಗಳೊಂದಿಗೆ ಪಡೆಯಲಿವೆ ಎಂದು ವರದಿಗಳು ತಿಳಿಸಿವೆ.

ಈಗಾಗಲೇ ಎರಡು ಡ್ರೋನ್‌ಗಳನ್ನು ಬಳಸುತ್ತಿರುವ ನೌಕಾಪಡೆ!

ಭಾರತೀಯ ನೌಕಾಪಡೆಯು (Indian Navy) ಈಗಾಗಲೇ ಎರಡು ಆಯುಧ ರಹಿತ ಸೀಗಾರ್ಡಿಯನ್ ಡ್ರೋನ್‌ಗಳನ್ನು (seaguardian drone) ಬಳಸುತ್ತಿದೆ, ಅದು ಕಳೆದ ವರ್ಷ ಯುಎಸ್‌ನಿಂದ ಹಿಂದೂ ಮಹಾಸಾಗರ ಪ್ರದೇಶದಲ್ಲಿ ರಕ್ಷಣೆಗಾಗಿ  ಲೀಸ್‌ (Lease) ಪಡೆದ ಡ್ರೋನ್‌ಗಳಾಗಿವೆ.  ರಕ್ಷಣಾ ಸ್ವಾಧೀನ ಪ್ರಕ್ರಿಯೆ 2020 ಮತ್ತು ರಕ್ಷಣಾ ಸಂಗ್ರಹಣೆ ಕೈಪಿಡಿ 2009 ರ ಅನ್ವಯ ಶಸ್ತ್ರಾಸ್ತ್ರಗಳನ್ನು  ಗುತ್ತಿಗೆ ನೀಡುವ ಆಯ್ಕೆಯನ್ನು ಒದಗಿಸಲಾಗಿದೆ. ಡ್ರೋನ್ ಲೀಸ್‌ ಪಡೆಯುವುದರಿಂದ ವೆಚ್ಚವನ್ನು ಕಡಿತಗೊಳಿಸಲು ಭಾರತಕ್ಕೆ ಸಹಾಯ ಮಾಡುತ್ತದೆ, ಏಕೆಂದರೆ ಅದರ ನಿರ್ವಹಣೆಯ ಜವಾಬ್ದಾರಿ ಯುಎಸ್‌ ಹೊರಲಿದೆ.

Follow Us:
Download App:
  • android
  • ios