Asianet Suvarna News Asianet Suvarna News

Kartavya Path Jamun Trees: ದೆಹಲಿಯ ಕರ್ತವ್ಯಪಥದಲ್ಲಿ ನೇರಳೆ ಹಣ್ಣು ಕೀಳಲು ಟೆಂಡರ್‌!

ಕರ್ತವ್ಯ ಪಥದಲ್ಲಿರುವ ಸಾಕಷ್ಟು ನೇರಳೆ ಹಣ್ಣಿನ ಮರದ ಹಣ್ಣುಗಳನ್ನು ಕೀಳಲು ಶೀಘ್ರದಲ್ಲಿಯೇ ಟೆಂಡರ್‌ ಕರೆಯಲಾಗುತ್ತದೆ. ಇಲ್ಲಿನ ಹಣ್ಣುಗಳನ್ನು ಕೀಳುಲು ಜನರು ಕಲ್ಲುಗಳನ್ನು ಬೀಸುತ್ತಿದ್ದರು. ಇನ್ನು ಮುಂದೆ ಪಿಡಬ್ಲ್ಯುಡಿ ಇಲಾಖೆ ಟೆಂಡರ್‌ ಕರೆದು ಈ ಹಣ್ಣುಗಳ ವಿಲೇವಾರಿ ಮಾಡಲಿದೆ.

New Delhi Kartavya Path Jamun Trees Auction Will be Held san
Author
First Published May 18, 2023, 5:25 PM IST

ನವದೆಹಲಿ (ಮೇ.18): ರಾಷ್ಟ್ರ ರಾಜಧಾನಿ ನವದೆಹಲಿಯ ಕರ್ತವ್ಯಪಥದಲ್ಲಿ ಸುಮಾರು 100 ವರ್ಷಗಳಷ್ಟು ಹಳೆಯದಾದ ಸಾಕಷ್ಟು ನೇರಳೆ ಹಣ್ಣಿನ ಮರಗಳಿವೆ. ಈಗ ಈ ನೇರಳ ಮರಗಳಲ್ಲಿನ ಹಣ್ಣಗಳನ್ನು ಕೀಳಲು ಹರಾಜು ನಡೆಯಲಿದೆ. ಇದರಿಂದ ಸರ್ಕಾರಕ್ಕೆ ಸಣ್ಣ ಪ್ರಮಾಣದ ಆದಾಯವೂ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಯವರೆಗೂ ಕರ್ತವ್ಯಪಥದಲ್ಲಿನ ನೇರಳೆ ಮರದ ಹಣ್ಣುಗಳನ್ನು ಕೀಳಲು ಯಾವುದೇ ರೀತಿಯ ಹರಾಜು ಅಥವಾ ಟೆಂಡರ್‌ ಪ್ರಕ್ರಿಯೆ ಇದ್ದಿರಲಿಲ್ಲ. ಮರದಲ್ಲಿ ಆದ ಹಣ್ಣುಗಳನ್ನು ಕರ್ತವ್ಯಪಥದ ಉದ್ಯಾನವನಕ್ಕೆ ತೆರಳುತ್ತಿದ್ದ ಜನಸಾಮಾನ್ಯರು ಕಲ್ಲು ಬೀಸಿ ಉದುರಿಸುತ್ತಿದ್ದರು. ಕಲ್ಲು ಬಿದ್ದು ಕೆಲವೊಂದು ಪ್ರವಾಸಿಗರಿಗೆ ಗಾಯವಾದ ಘಟನೆಗಳು ನಡೆದಿದ್ದವು. ಇನ್ನು ಮುಂದೆ ಇಂಥ ಪರಿಸ್ಥಿತಿಗಳು ಎದುರಾಗದೇ ಇರಲು, ನೇರಳೆ ಹಣ್ಣುಗಳನ್ನು ಕೀಳಲು ಟೆಂಡರ್‌ ಕರೆಯುವುದಾಗಿ ಸರ್ಕಾರ ಘೋಷಿಸಿದೆ. ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ) ಈ ಕುರಿತು ಆದೇಶ ನೀಡಿದೆ. ಸಿಪಿಡಬ್ಲ್ಯುಡಿ ಬಹಿರಂಗ ಹರಾಜಿನಲ್ಲಿ ಬಿಡ್ ಮಾಡಲು ಜನರಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ. ಹರಾಜಿನ ಆರಂಭಿಕ ಬೆಲೆಯನ್ನು 1.30 ಲಕ್ಷ ರೂಪಾಯಿಗೆ ನಿಗದಿ ಮಾಡಲಾಗಿದೆ. ಯಶಸ್ವಿ ಬಿಡ್‌ ಮಾಡಿರುವ ವ್ಯಕ್ತಿಗಳು ಆಗಸ್ಟ್‌ 31ರ ಬಳಿಕ ಹಣ್ಣುಗಳನ್ನು ಕೀಳುವ ಅವಕಾಶ ಪಡೆಯಲಿದ್ದಾರೆ.

ಮರದ ಕಾಂಡಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಹಣ್ಣುಗಳನ್ನು ಸಂಗ್ರಹಿಸಬೇಕು ಎಂದು ಸಿಪಿಡಬ್ಲ್ಯುಡಿ ಹರಾಜಿಗೆ ನೀಡಿರುವ ನೋಟಿಸ್‌ನಲ್ಲಿ ತಿಳಿಸಿದೆ. ಹಗ್ಗ ಅಥವಾ ಸ್ವಿಂಗ್ ಸಹಾಯದಿಂದ ಹಣ್ಣುಗಳನ್ನು ಸಂಗ್ರಹಿಸಲು ಅನುಮತಿಸಲಾಗುವುದಿಲ್ಲ ಎಂದು ತಿಳಿಸಿದೆ. ಆಗಸ್ಟ್, 2023 ರ ಅಂತ್ಯದವರೆಗೆ ಫ್ರುಟಿಂಗ್ ನಂತರ ವಸ್ತುಗಳನ್ನು ವಿಲೇವಾರಿ ಮಾಡಲಾಗುತ್ತದೆ ಮತ್ತು ಅದರ ಗುಣಮಟ್ಟ ಮತ್ತು ಪ್ರಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ವಿವಾದಕ್ಕೂ ಸರ್ಕಾರ ಇರೋದಿಲ್ಲ ಎಂದು ತಿಳಿಸಲಾಗಿದೆ.

ಕರ್ತವ್ಯ ಫಥ ಹಾಗೂ ಸಿ ಷಡ್ಬುಜಾಕೃತಿಯ ರಸ್ತೆಯ ಮಾರ್ಗದ ಎರಡೂ ಬದಿಗಳಲ್ಲಿ ಸುಮಾರು ನೇರಳೆ ಮರಗಳಿವೆ.  ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗೆ ವಿಸ್ತರಿಸಿರುವ ಕರ್ತವ್ಯ ಪಥವು ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚು ಭೇಟಿ ನೀಡುವ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ.

ಕರ್ತವ್ಯ ಪಥದ ಎರಡೂ ಬದಿಗಳಲ್ಲಿ ಹಲವಾರು ಜಾಮೂನ್ ಮರಗಳಿವೆ, ಕೆಲವು ಸುಮಾರು 100 ವರ್ಷಗಳಷ್ಟು ಹಳೆಯವು ಎಂದು ಹೇಳಲಾಗಿದೆ. ವಿಜಯ್ ಚೌಕ್‌ನಿಂದ ಇಂಡಿಯಾ ಗೇಟ್‌ವರೆಗೆ ವಿಸ್ತರಿಸಿರುವ ಸೆಂಟ್ರಲ್ ವಿಸ್ಟಾ ಅವೆನ್ಯೂವನ್ನು ಇತ್ತೀಚೆಗೆ ಸರ್ಕಾರದ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ಟಾ ಮರುಅಭಿವೃದ್ಧಿ ಯೋಜನೆಯಡಿಯಲ್ಲಿ ನವೀಕರಿಸಲಾಗಿದೆ.

ದೆಹಲಿಯ ಕರ್ತವ್ಯ ಪಥದಲ್ಲಿ ರಾಷ್ಟ್ರಪತಿಯಿಂದ ಧ್ವಜಾರೋಹಣ: ಹುತಾತ್ಮ ಯೋಧರಿಗೆ ಮೋದಿ ನಮನ

ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್ ಅಡಿಯಲ್ಲಿ, ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ವರೆಗಿನ 3 ಕಿಲೋಮೀಟರ್ ಉದ್ದದ ರಸ್ತೆಯನ್ನು ಮರುಅಭಿವೃದ್ಧಿಗೊಳಿಸಲಾಯಿತು. ಇದನ್ನು 8 ಸೆಪ್ಟೆಂಬರ್ 2022 ರಂದು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದರು. ಅದೇ ದಿನ, ಅವರು ಅದರ ಹೆಸರನ್ನು ರಾಜಪಥದಿಂದ ಕರ್ತವ್ಯ ಪಥ್ ಎಂದು ಬದಲಾವಣೆ ಮಾಡಿದ್ದಾಗಿ ಘೋಷಣೆ ಮಾಡಿದ್ದರು.

Central Vista: ಆಕೃತಿ ಮಾತ್ರವೇ ಅಲ್ಲ, ಚರಿತ್ರೆಯೇ ಫುಲ್ ಚೇಂಜ್: ಹೇಗಿದ್ದ ದೆಹಲಿ ಈಗ ಹೇಗಾಗಿದೆ ಗೊತ್ತಾ?

ಕರ್ತವ್ಯದ ಮಾರ್ಗವು ಕೇವಲ ಇಟ್ಟಿಗೆ ಮತ್ತು ಕಲ್ಲುಗಳ ಮಾರ್ಗವಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. ಇದು ಭಾರತದ ಪ್ರಜಾಸತ್ತಾತ್ಮಕ ಹಿಂದಿನ ಮತ್ತು ಕಾಲಾತೀತ ಆದರ್ಶಗಳ ಜೀವಂತ ಮಾರ್ಗವಾಗಿದೆ. ದೇಶದ ಜನರು ಇಲ್ಲಿಗೆ ಬಂದಾಗ, ನೇತಾಜಿ ಪ್ರತಿಮೆ, ರಾಷ್ಟ್ರೀಯ ಯುದ್ಧ ಸ್ಮಾರಕ, ಇವೆಲ್ಲವೂ ಅವರಿಗೆ ಉತ್ತಮ ಸ್ಫೂರ್ತಿಯನ್ನು ನೀಡುತ್ತದೆ ಮತ್ತು ಅವರಲ್ಲಿ ಕರ್ತವ್ಯ ಪ್ರಜ್ಞೆಯನ್ನು ತುಂಬುತ್ತದೆ ಹಾಗಾಗಿ ಈ ಹೆಸರು ನೀಡಿದ್ದಾಗಿ ಘೋಷಣೆ ಮಾಡಿದ್ದರು.

Follow Us:
Download App:
  • android
  • ios