ಧ್ವಜಾರೋಹಣಕ್ಕೂ ಮುನ್ನ ದೆಹಲಿಯ ಅಮರ್‌ ಜವಾನ್‌ ಜ್ಯೋತಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು. ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿದ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.

ನವದೆಹಲಿ (ಜನವರಿ 26, 2023) : ಇಂದು 74ನೇ ಗಣರಾಜ್ಯೋತ್ಸವ ಹಿನ್ನೆಲೆ ದೇಶಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೇನಾ ಗೌರವ ವಂದನೆಯ ಬಳಿಕ ಧ್ವಜಾರೋಹಣ ನೆರವೇರಿಸಿದರು. ಪ್ರಧಾನಿ ಮೋದಿ, ಹಲವು ಕೇಂದ್ರ ಸಚಿವರು ಸೇರಿ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವರ್ಷ ರಾಷ್ಟ್ರ ರಾಜಧಾನಿ ನವದೆಹಲಿಯ ಕರ್ತವ್ಯ ಪಥದಲ್ಲಿ ಮೊದಲ ಬಾರಿಗೆ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಅಲ್ಲದೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಇದು ಮೊದಲ ಗಣರಾಜ್ಯೋತ್ಸವ. ಇನ್ನು, ಧ್ವಜಾರೋಹಣಕ್ಕೂ ಮುನ್ನ ದೆಹಲಿಯ ಅಮರ್‌ ಜವಾನ್‌ ಜ್ಯೋತಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು. ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿದ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ಈ ಬಾರಿಯ ಗಣರಾಜ್ಯೋತ್ಸವ ಸಮಾರಂಭಕ್ಕೆ ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್‌ ಫತ್ತಾ ಎಲ್‌ ಸಿಸಿ ಮುಖ್ಯ ಅತಿಥಿ. ಹಾಗೂ ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಈಜಿಪ್ಟ್‌ ಸೇನಾ ತುಕಡಿಯ ತಂಡವು ಪಾಲ್ಗೊಳ್ಳುತ್ತಿರುವುದು ಮತ್ತೊಂದು ವಿಶೇಷ.

ಹಾಗೆ, ದೇಶಿ ನಿರ್ಮಿತ ಫಿರಂಗಿಗಳಿಂದ 21 ಸುತ್ತು ಕುಶಾಲು ತೋಪು ಹಾರಿಸಲಾಗಿದೆ. ಈ ಬಾರಿ ಸಾಮಾನ್ಯ ಜನರಿಗೆ ಮೊದಲ ಸಾಲಿನಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಿರುವುದು ಸಹ ಮತ್ತೊಂದು ವಿಶೇಷವಾಗಿದೆ. ಧ್ವಜಾರೋಹಣ ನೆರವೇರಿದ ಬೆನ್ನಲ್ಲೇ ಕರ್ತವ್ಯ ಪಥದಲ್ಲಿ ಆಕರ್ಷಕ ಪರೇಡ್‌ ಆರಂಭವಾಗಿದ್ದು, ಈಜಿಪ್ಟ್‌ನ ಸೇನಾ ತುಕಡಿ ಸಹ ಈ ಬಾರಿ ಪರೇಡ್‌ ಮಾಡಿದೆ. ಅಲ್ಲದೆ, ದೇಶದ ಮಿಲಿಟರಿ ಶಕ್ತಿಯನ್ನು ದೇಶದ ಜನರಿಗೆ ಹಾಗೂ ಇತರರಿಗೆ ತೋರಿಸುವುದು ಇಂದಿನ ಪರೇಡ್‌ನ ಮುಖ್ಯ ಅಂಶವಾಗಿದೆ. ಮಿಲಿಟರಿ ಹಾಗೂ ಪ್ಯಾರಾ ಮಿಲಿಟರಿ ಪಡೆಗಳು ಪಥ ಸಂಚಲನದಲ್ಲಿ ಭಾಗಿಯಾಗಿವೆ. ವಿವಿಧ ರೆಜಿಮೆಂಟ್‌ಗಳು ಸಹ ಪರೇಡ್‌ನಲ್ಲಿ ಭಾಗಿಯಾಗಿವೆ.

ಇದನ್ನು ಓದಿ: ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ ರಾಜ್ಯಪಾಲರಿಂದ ಧ್ವಜಾರೋಹಣ

Scroll to load tweet…

ಸೇನಾ ಪರೇಡ್‌ ಬಳಿಕ ಕರ್ನಾಟಕ ಸೇರಿ 17 ರಾಜ್ಯ, ಕೆಂದ್ರಾಡಳಿತ ಪ್ರದೇಶಗಳ ಟ್ಯಾಬ್ಲೂ ಪ್ರದರ್ಶನ ನಡೆಯಲಿದ್ದು, ಜತೆಗೆ ಕೇಂದ್ರ ಸರ್ಕಾರದ 6 ಸಚಿವಾಲಯಗಳ ಟ್ಯಾಬ್ಲೂಗಳು ಸಹ ಇರಲಿವೆ ಎಂದು ತಿಳಿದುಬಂದಿದೆ. ಇನ್ನು, ಪರೇಡ್‌ ವೇಳೆ ಭಾರತೀಯ ವಾಯುಪಡೆಯ ತಂಡವನ್ನು ಬೆಂಗಳೂರು ಮೂಲದ ಸಿಂಧೂ ರೆಡ್ಡಿ ಮುನ್ನಡೆಸಿದರೆ, ಭಾರತೀಯ ನೌಕಾಪಡೆಯ ತಂಡವನ್ನು ಮಂಗಳೂರು ಮೂಲದ ದಿಶಾ ಅಮೃತ್‌ ಮುನ್ನಡೆಸಿದ್ದು ಕರ್ನಾಟಕದ ಹೆಮ್ಮೆಯಾಗಿದೆ. 

ಇದನ್ನೂ ಓದಿ: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಆಚರಣೆ

ಈ ಬಾರಿಯ ಕರ್ನಾಟಕದ ಟ್ಯಾಬ್ಲೂ ವಿಶೇಷತೆ ನಾರಿ ಶಕ್ತಿಯಾಗಿದ್ದು, ಇವರ ಪೈಕಿ ಸೂಲಗಿತ್ತಿ ನರಸಮ್ಮ, ಹಾಲಕ್ಕಿ ಸಮುದಾಯದ ತುಳಸಿ ಗೌಡ ಹಾಗೂ ಸಾಲುಮರದ ತಿಮ್ಮಕ್ಕ ಅವರ ಸಾಧನೆಯನ್ನು ಈ ಬಾರಿ ಟ್ಯಾಬ್ಲೂನಲ್ಲಿ ದೇಶದ ಜನತೆಯ ಎದುರು ಪ್ರದರ್ಶಿಸಲಾಗಿದ್ದು, ಹಲವರ ಗಮನ ಸೆಳೆದಿದೆ. ಈ ಬಾರಿ ಕರ್ನಾಟಕದ ಟ್ಯಾಬ್ಲೂವನ್ನು ತಿರಸ್ಕರಿಸಲಾಗಿದೆ ಎಂದು ವರದಿಯಾಗಿತ್ತಾದರೂ, ಕೊನೆಯ ಗಳಿಗೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಯ್ತು. ನಂತರ 7 ದಿನಗಳಲ್ಲಿ ರೆಡಿ ಮಾಡಲಾಗಿದೆ. 

Scroll to load tweet…