Asianet Suvarna News Asianet Suvarna News

ಭಾರತೀಯ ಹವಾಮಾನ ಇಲಾಖೆಯ ಟ್ವಿಟರ್ ಖಾತೆ ಹ್ಯಾಕ್

  • ಐಎಂಡಿ ಟ್ವಿಟ್ಟರ್‌ ಖಾತೆ ಹ್ಯಾಕ್ ಮಾಡಿದ ಕಿಡಿಗೇಡಿಗಳು
  • ಹ್ಯಾಕ್ ಮಾಡಿ ದುರುದ್ದೇಶಪೂರಿತ ಲಿಂಕ್ ಪೋಸ್ಟ್
  • ಖಾತೆ ಹ್ಯಾಕ್ ಆದ ಬಗ್ಗೆ ಐಎಂಡಿ ಮಹಾನಿರ್ದೇಶಕರಿಂದ ಮಾಹಿತಿ
New Delhi India Meteorological Departments Twitter account hacked akb
Author
Bangalore, First Published Apr 9, 2022, 11:37 PM IST | Last Updated Apr 9, 2022, 11:37 PM IST

ನವದೆಹಲಿ: ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಟ್ವಿಟರ್ ಖಾತೆಯನ್ನು ಶನಿವಾರ (ಏಪ್ರಿಲ್ 9) ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ. ಹ್ಯಾಕಿಂಗ್ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಭಾರತೀಯ ಹವಾಮಾನ ಇಲಾಖೆಯ ಟ್ವಿಟ್ಟರ್‌ ಖಾತೆಯು ದೇಶದ ಹಲವು ಭಾಗಗಳಲ್ಲಿ ಪ್ರಸ್ತುತ ಬೇಸಿಗೆಯ ಶಾಖದ ಅಲೆಗಳ ಕುರಿತ ಹೊಸ ಮಾಹಿತಿ ಹಾಗೂ ಮುನ್ಸೂಚನೆಗಳನ್ನು ಆಗಾಗ ಜನರಿಗೆ ನೀಡುತ್ತಿದೆ. ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ್ ಮಹಾಪಾತ್ರ ಅವರು ಈ ಬಗ್ಗೆ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ ನಮ್ಮ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ, ನಾವು ಅದನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಖಾತೆಯನ್ನು ಹ್ಯಾಕ್‌ ಮಾಡಿದ ಬಳಿಕ ಭಾರತೀಯ ಹವಾಮಾನ ಇಲಾಖೆಯ ಟ್ವಿಟ್ಟರ್‌ ಖಾತೆಯಲ್ಲಿ ಹ್ಯಾಕರ್ ದುರುದ್ದೇಶಪೂರಿತ ಲಿಂಕ್ ಅನ್ನು ಪೋಸ್ಟ್ ಮಾಡಿದ್ದಾರೆ.  ಮುಂದಿನ 2 ಗಂಟೆಗಳ ಕಾಲ ಸಮುದಾಯದ ಎಲ್ಲಾ ಸಕ್ರಿಯ NFT ವ್ಯಾಪಾರಿಗಳಿಗೆ ಏರ್‌ಡ್ರಾಪ್  ಇದೆ ಎಂದು ಅವರು ಭಾರತೀಯ ಹವಾಮಾನ ಇಲಾಖೆಯ ಟ್ವಿಟ್ಟರ್‌ ಖಾತೆಯಿಂದ ಪೋಸ್ಟ್ ಮಾಡಿದ್ದಾರೆ. ಇಂದು ಮುಂಜಾನೆ,  ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರ ಉತ್ತರ ಪ್ರದೇಶ (Uttar Pradesh) ಮುಖ್ಯಮಂತ್ರಿ ಕಚೇರಿ (CMO) ಟ್ವಿಟರ್ ಖಾತೆಯನ್ನು ಸಂಕ್ಷಿಪ್ತವಾಗಿ ಹ್ಯಾಕ್ ಮಾಡಲಾಗಿತ್ತು ಮತ್ತು ಅದರ ಪ್ರೊಫೈಲ್ ಚಿತ್ರವನ್ನು ಕಾರ್ಟೂನಿಸ್ಟ್ ಮಂಕಿ ಎಂದು ಬದಲಾಯಿಸಲಾಗಿತ್ತು.

Cyber Security Threat: 5 ವರ್ಷದಲ್ಲಿ ಸರ್ಕಾರದ 600ಕ್ಕೂ ಅಧಿಕ ಖಾತೆ ಹ್ಯಾಕ್!

ಘಟನೆಯ ನಂತರ ಲಕ್ನೋದ (Lucknow) ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ (Cyber Crime police station)ಪ್ರಕರಣ ದಾಖಲಾಗಿದೆ. ರಾತ್ರಿ ಸುಮಾರು 29 ನಿಮಿಷಗಳ ಕಾಲ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಹ್ಯಾಕರ್‌ಗಳು ಸುಮಾರು 400 ರಿಂದ 500 ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಅಸಹಜ ಚಟುವಟಿಕೆಯ ಆಧಾರದ ಮೇಲೆ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಖಾತೆ ಹ್ಯಾಕ್‌ ಆದ ಬಗ್ಗೆ ಉತ್ತರ ಪ್ರದೇಶ ಸರ್ಕಾರವು ಹಿಂದಿಯಲ್ಲಿ (Hindi) ಟ್ವೀಟ್ ಮಾಡಿತ್ತು. 'ಏಪ್ರಿಲ್ 9 ರಂದು ಮಧ್ಯರಾತ್ರಿ 12.30 ಕ್ಕೆ ಮುಖ್ಯಮಂತ್ರಿಗಳ ಕಚೇರಿ @CMOfficeUP ಯ ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲು ಸಮಾಜ ವಿರೋಧಿಗಳು ಪ್ರಯತ್ನಿಸಿದ್ದಾರೆ. ಕೆಲವು ಟ್ವೀಟ್‌ಗಳನ್ನು ಅವರು ಪೋಸ್ಟ್ ಮಾಡಿದ್ದಾರೆ, ತಕ್ಷಣವೇ ಖಾತೆಯನ್ನು ನಿಯಂತ್ರಣಕ್ಕೆ ತರಲಾಗಿದೆ. ಸೈಬರ್ ತಜ್ಞರಿಂದ ಪ್ರಕರಣದ ತನಿಖೆಯ ನಂತರ ಇದಕ್ಕೆ ಕಾರಣರಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅದು ಹೇಳಿದೆ.

ಭಾರತದ ವಿದ್ಯುತ್‌ ಗ್ರಿಡ್‌ ಹ್ಯಾಕ್‌ಗೆ ಚೀನಾ ಯತ್ನ

ಕೆಲ ದಿನಗಳ ಹಿಂದೆ ಪ್ರಯಾಣದ ವೇಳೆ ಅದಲು ಬದಲಾಗಿದ್ದ ಬ್ಯಾಗನ್ನು ಹಿಂಪಡೆದುಕೊಳ್ಳಲು ಪ್ರಯಾಣಿಕರೊಬ್ಬರು(Passenger) ಇಂಡಿಗೋ ವೆಬ್‌ಸೈಟನ್ನೇ(Indigo Website) ಹ್ಯಾಕ್‌(Hack) ಮಾಡಿದ ಘಟನೆ ನಡೆದಿತ್ತು. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌(Software Engineer) ಆಗಿರುವ ಕುಮಾರ್‌ ಎಂಬವರು ಭಾನುವಾರ(ಮಾ.27) ಪಟನಾದಿಂದ(Patna) ಬೆಂಗಳೂರಿಗೆ(Bengaluru) ಇಂಡಿಗೋ ವಿಮಾನದಲ್ಲಿ(Flight) ಪ್ರಯಾಣಿಸಿದ್ದರು. ಮನೆಗೆ ತೆರಳಿದ ನಂತರ ಬ್ಯಾಗ್‌ ಅದಲು ಬದಲಾಗಿದೆ. ಎರಡೂ ಬ್ಯಾಗುಗಳೂ ಒಂದೇ ತರ ಇದ್ದಿದ್ದುದ್ದರಿಂದ ಈ ಅಚಾತುರ‍್ಯ ನಡೆದಿದೆ ಎಂಬುದು ಗಮನಕ್ಕೆ ಬಂದಿದೆ. ತಕ್ಷಣ ಇಂಡಿಗೋ ಕಸ್ಟಮರ್‌ ಕೇರ್‌ ಸಂಪರ್ಕಿಸಿ ಹಲವು ಬಾರಿ ಕರೆ ಮಾಡಿ, ಉದ್ದುದ್ದ ಸರತಿಯಲ್ಲಿ ನಿಂತು ವಿಚಾರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕನಿಷ್ಠ ಪ್ರಯಾಣಿಕರ ಮಾಹಿತಿ ಒದಗಿಸಿ ಎಂದರೂ ವಿಮಾನಯಾನ ಸಂಸ್ಥೆ ಗೌಪ್ಯತೆ ಕಾರಣದಿಂದ ಒದಗಿಸಿಲ್ಲ. ಇದರಿಂದ ಸಿಟ್ಟಿಗೆದ್ದ ಅವರು ಇಂಡಿಗೋ ವೆಬ್‌ಸೈಟ್‌ನ್ನೇ ಹ್ಯಾಕ್ ಮಾಡಿದ್ದರು.

Latest Videos
Follow Us:
Download App:
  • android
  • ios