Cyber Security Threat: 5 ವರ್ಷದಲ್ಲಿ ಸರ್ಕಾರದ 600ಕ್ಕೂ ಅಧಿಕ ಖಾತೆ ಹ್ಯಾಕ್!

*ಖಾತೆ ಹ್ಯಾಕ್‌ ಬಗ್ಗೆ ಲೋಕಸಭೆಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್
*ಕಳೆದ ಐದು ವರ್ಷದಲ್ಲಿ ಸರ್ಕಾರದ 600ಕ್ಕೂ ಅಧಿಕ ಸೋಷಿಯಲ್ ಮೀಡಿಯಾ ಅಕೌಂಟ್ಸ್‌ಗೆ ಕನ್ನ
*ಈ ಸೈಬರ್ ಸೆಕ್ಯುರಿಟಿ ಬೆದರಿಕೆಗಳನ್ನು ತಡೆಯಲು ಸಿಇಆರ್‌ಟಿ-ಇನ್ ಸಂಸ್ಥೆ ಕ್ರಮ ವಹಿಸುತ್ತದೆ

Over 600 Social Media Accounts of the Government Hacked, Says Minister Anurag Thakur

ಡಿಜಿಟಲ್ ಯುಗದಲ್ಲಿ (Digital World) ಎಲ್ಲವೂ ಆನ್‌ಲೈನ್ ಆಗಿದೆ. ಸರ್ಕಾರ ಬಹುತೇಕ ಆನ್‌ಲೈನ್ ಮೇಲೆಯೇ ನಡೆಯುತ್ತದೆ. ಈ ಡಿಜಿಟಲ್ ವ್ಯವಹಾರಗಳಿಂದ (Digital Transactions) ಎಷ್ಟು ಲಾಭವಿದೆಯೋ ಅಷ್ಟೇ ಅಪಾಯವೂ ಇದೆ ಎಂಬುದನ್ನು ಮರೆಯಬಾರದು. ನಮ್ಮ ಹಲವು ಖಾತೆಗಳನ್ನು ಸೈಬರ್ ಖದೀಮರು ಕನ್ನ ಹಾಕಿರುವುದನ್ನು ಕೇಳಿರುತ್ತೀರಿ. ಈಗ ಹೊಸ ವಿಷಯ ಏನೆಂದರೆ, 2017ರಿಂದ ಈವರೆಗೆ ಕೇಂದ್ರ ಸರ್ಕಾರದ 600ಕ್ಕೂ ಅಧಿಕ ಸೋಷಿಯಲ್ ಮೀಡಿಯಾ ಖಾತೆಗಳನ್ನು ಹ್ಯಾಕ್ (Over 600 social media accounts hacked) ಮಾಡಲಾಗಿದೆಯಂತೆ!. ಈ ವಿಷಯವನ್ನು ಸ್ವತಃ ಕೇಂದ್ರ ಸರ್ಕಾರವೇ ನೀಡಿದೆ. ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ (Anurag Thakur) ಅವರೇ ಸ್ವತಃ ಮಾಹಿತಿಯನ್ನು ಮಂಗಳವಾರ ಲೋಕಸಭೆಗೆ ನೀಡಿದ್ದಾರೆ. ಕಳೆದ ಐದು ವರ್ಷದಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಸೋಷಿಯಲ್ ಮೀಡಿಯಾ ಖಾತೆಗಳಿಗೆ ಕನ್ನ ಹಾಕಲಾಗಿದೆ ಎಂದು ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಟ್ವಿಟರ್ ಖಾತೆಗಳು, ಇ ಮೇಲ್ ಅಕೌಂಟ್‌ಗಳು ಹ್ಯಾಕ್‌ಗೆ ಸಂಬಂಧಿಸಿದಂತೆ  ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಗೆ ಸಚಿವ ಅನುರಾಗ್ ಠಾಕೂರ್ ಅವರು ಈ ಉತ್ತರವನ್ನು ನೀಡಿದ್ದಾರೆ. 

ಇದೇ ವೇಳೆ, 2017ರಲ್ಲಿ ಒಟ್ಟು 175 ಖಾತೆಗಳಿಗೆ ಕನ್ನ ಹಾಕಿದ್ದರೆ, 2018ರಲ್ಲಿ 114, 2019ರಲ್ಲಿ 61, 2020ರಲ್ಲಿ 77, 2021ರಲ್ಲಿ 186 ಮತ್ತು ಪ್ರಸಕ್ತ ಸಾಲಿನಲ್ಲಿ ಈವರೆಗೆ 28 ಸರ್ಕಾರಿ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಅವರು ತಮ್ಮ ಲಿಖಿತ ರೂಪದಲ್ಲಿ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಇನ್ಫಾರ್ಮೇಸನ್ ಟೆಕ್ನಾಲಜಿ (MeitY)ಗೆ ಇಂಡಿಯನ್ ಕಂಪ್ಯೂಟರ್ ಎಮರ್ಜೇನ್ಸಿ ರೆಸ್ಪಾನ್ಸ್ ಟೀಂ(CERT-In) ಮೂಲಕ ಮಾಹಿತಿ ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ. 

ಇದನ್ನೂ ಓದಿ: ಅಬ್ಬಾ... ನಿತ್ಯ 7 ಶತಕೋಟಿ Whatsapp Voice Message ರವಾನೆ!

ಇದೇ ವೇಳೆ, ಇಂಥ ಅವಘಡಗಳ ಮುಂಬರುವ ದಿನಗಳಲ್ಲಿ ನಡೆಯದಂತೆ ಕೇಂದ್ರ ಸರ್ಕಾರವು ಕೈಗೊಂಡಿರು ಕ್ರಮಗಳ ಬಗ್ಗೆಯೂ ಸಂಸತ್ತಿಗೆ ಮಾಹಿತಿಯನ್ನು ನೀಡಿದ್ದಾರೆ. ಸೈಬರ್ ಸೆಕ್ಯುರಿಟಿಯನ್ನು ಹೆಚ್ಚಿಸುವುದಕ್ಕಾಗಿಯೇ CERT-In ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಹೊಸ ಸೈಬರ್ ದಾಳಿಯ ಮುನ್ಸೂಚನೆಗಳನ್ನು ಈ ಸಂಸ್ಥೆಯು ನೀಡುತ್ತದೆ ಮತ್ತು ದಾಳಿಗೆ ಪ್ರತಿಯಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಮಗೆ ನಿಯಮಮಿತವಾಗಿ ತಿಳಿಸುತ್ತದೆ ಎಂದು ಅವರು ಹೇಳಿದ್ದಾರೆ. CERT-In ಇಲ್ಲಿಯವರೆಗೂ, ವಂಚನಾ ಚಟುವಟಿಕೆಗಳ ಬಗ್ಗೆ ಸಂಸ್ಥೆಗಳಿಗೆ 68 ಸಲಹಾ ಮಾರ್ಗದರ್ಶಿ ಸೂಚನೆಗಳನ್ನು ನೀಡಿದೆ. 

ವೆಬ್‌ಸೈಟ್‌ (Website) ಗಳು / ಇ-ಮೇಲ್ (e mail) / ಟ್ವಿಟ್ಟರ್ (Twitter) ಖಾತೆಗಳನ್ನ ಗಮನಿಸಿದ ಮೇಲೆ, CERT-In ಪೀಡಿತ ಘಟಕಗಳಿಗೆ ತಿಳಿಸುತ್ತದೆ. ಜೊತೆಗೆ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. CERT-In ಪೀಡಿತ ಘಟಕಗಳು, ಸೇವಾ ಪೂರೈಕೆದಾರರು, ವಲಯದ ಕಂಪ್ಯೂಟರ್ ಭದ್ರತಾ ಘಟನೆಯ ಪ್ರತಿಕ್ರಿಯೆ ತಂಡಗಳೊಂದಿಗೆ ಘಟನೆಯ ಪ್ರತಿಕ್ರಿಯೆ ಕ್ರಮಗಳನ್ನು ಸಂಘಟಿಸುತ್ತದೆ (ಸಿಎಸ್‌ಐಆರ್‌ಟಿಗಳು) ಹಾಗೂ ಕಾನೂನು ಜಾರಿ ಸಂಸ್ಥೆಗಳು ಎಂದು ಸಚಿವ ಅನುರಾಗ್ ಠಾಕೂರ್  ಹೇಳಿದರು.

ಸಿಇಆರ್‌ಟಿ-ಇನ್ (CERT-In) ಸ್ವಯಂ ಚಾಲಿತ ಸೈಬರ್ ಬೆದರಿಕೆ ವಿನಿಮಯ ವೇದಿಕೆಯನ್ನು ಕಾರ್ಯಾಚರಿಸುತ್ತಿದೆ, ಅವುಗಳಿಂದ ಪೂರ್ವಭಾವಿಯಾಗಿ ಬೆದರಿಕೆ ತಗ್ಗಿಸುವ ಕ್ರಮಗಳಿಗಾಗಿ ವಲಯಗಳಾದ್ಯಂತ ಸಂಸ್ಥೆಗಳೊಂದಿಗೆ ಪೂರ್ವಭಾವಿಯಾಗಿ ಸಂಗ್ರಹಿಸಲು, ವಿಶ್ಲೇಷಿಸಲು ಮತ್ತು ಅನುಗುಣವಾಗಿ ಎಚ್ಚರಿಕೆಗಳನ್ನು ಹಂಚಿಕೊಳ್ಳಲು ನೆರವು ಒದಗಿಸುತ್ತದೆ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ. ಬಳಕೆದಾರರು ತಮ್ಮ ಡೆಸ್ಕ್‌ಟಾಪ್ (Desktop), ಮೊಬೈಲ್/ಸ್ಮಾರ್ಟ್ ಫೋನ್‌ (Mobile/ Smartphone) ಗಳನ್ನು ಸುರಕ್ಷಿತವಾಗಿರಿಸಲು ಮತ್ತು ಫಿಶಿಂಗ್ ದಾಳಿಯನ್ನು ತಡೆಯಲು ಭದ್ರತಾ ಸಲಹೆಗಳನ್ನು ಪ್ರಕಟಿಸಲಾಗಿದೆ ಎಂದು ಸಚಿವರು ಸಂಸತ್ತಿಗೆ ತಿಳಿಸಿದರು.

ಇದನ್ನೂ ಓದಿ: Xiaomi 12 Pro 5G ಸ್ಮಾರ್ಟ್‌ಫೋನ್ ಇದೇ ತಿಂಗಳು ಬಿಡುಗಡೆ, ಇಲ್ಲಿದೆ ಬೆಲೆ ಹಾಗೂ ವಿಶೇಷತೆ!

ಸಿಇಆರ್‌ಟಿ-ಇನ್ (CERT-In) ಅಸ್ತಿತ್ವದಲ್ಲಿರುವ ಮತ್ತು ಸಂಭಾವ್ಯ ಸೈಬರ್ ಭದ್ರತಾ ಬೆದರಿಕೆಗಳ ಅಗತ್ಯ ಸಾಂದರ್ಭಿಕ ಅರಿವು ಮೂಡಿಸಲು ರಾಷ್ಟ್ರೀಯ ಸೈಬರ್ ಸಮನ್ವಯ ಕೇಂದ್ರವನ್ನು (NCCC) ಸ್ಥಾಪಿಸಲಾಗಿದೆ. ಎನ್‌ಸಿಸಿಸಿಯ ಮೊದಲನೆಯ ಹಂತ ಈಗಾಗಲೇ ಕಾರ್ಯಾರಂಭ ಮಾಡಿದೆ ಎಂದು ಅವರು ಇದೇದ ವೇಳೆ ತಿಳಿಸಿದರು. 

Latest Videos
Follow Us:
Download App:
  • android
  • ios