Asianet Suvarna News Asianet Suvarna News

ಮೋದಿ ವಿಶ್ವನಾಯಕನಾಗಿದ್ದು ಹೇಗೆ? ಅಮಿತ್ ಶಾ ತೆರೆದಿಟ್ಟ ಸೀಕ್ರೆಟ್!

  • ವಿಪಕ್ಷಗಳು ಮೋದಿಯನ್ನು ಸರ್ವಾಧಿಕಾರಿ ಎಂದು ಟೀಕಿಸಿದೆ
  • ಮೋದಿಯಂತ ಕೇಳುಗ ಪ್ರಧಾನಿಯನ್ನು ನಾನು ನೋಡಿಲ್ಲ
  • ಪ್ರಧಾನಿ ಮೋದಿ ವಿಶ್ವನಾಯಕನಾಗಿದ್ದು ಹೇಗೆ?
  • ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತು
     
Never seen a listener like Narendra Modi says Amit shah in PM 20 years in public service ckm
Author
Bengaluru, First Published Oct 10, 2021, 4:15 PM IST

ನವದೆಹಲಿ(ಅ.10):  ಪ್ರಧಾನಿ ನರೇಂದ್ರ ಮೋದಿ(Narendra Modi) ಸಾರ್ವಜನಿಕ ಸೇವೆಯಲ್ಲಿ 20 ವರ್ಷ ಪೂರೈಸಿದ್ದಾರೆ. ಮೋದಿ 20 ವರ್ಷ ಸಾಧನೆಯನ್ನು ಬಿಜೆಪಿ(BJP) ಕೆಲ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇತ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit shah), ಪ್ರಧಾನಿ ಮೋದಿ ವಿಶ್ವನಾಯಕ ಎಂದು ಶ್ಲಾಘಿಸಿದ್ದಾರೆ. ಇದೇ ವೇಳೆ  ಮೋದಿ ಪ್ರತಿಯೊಬ್ಬರ ಮಾತುಗಳನ್ನು ಆಲಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮೋದಿಯಂತ ಕೇಳುಗ ಪ್ರಧಾನಿಯನ್ನು ಭಾರತ ಕಂಡಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

20 ವರ್ಷ ಮಾತ್ರವಲ್ಲ, 2024ರಲ್ಲೂ ಮೋದಿಗೆ ಗೆಲುವು; ಭವಿಷ್ಯ ನುಡಿದ ಅಮಿತ್ ಶಾ!

ವಿರೋಧ ಪಕ್ಷಗಳು ಪ್ರಧಾನಿ ಮೋದಿ ಸರ್ವಾಧಿಕಾರಿ ಎಂದು ಟೀಕಿಸಿದೆ. ಆದರೆ ಮೋದಿ ಪ್ರಜಾಪ್ರಭುತ್ವವನ್ನು(democratic leader) ಅತ್ಯಂತ ಗೌರವದಿಂದ ಕಾಣುವ ವ್ಯಕ್ತಿ. ಸಭೆಗಳಲ್ಲಿ ಮೋದಿ, ಪ್ರತಿಯೊಬ್ಬರ ಸಲಹೆ ಸೂಚನೆಗಳನ್ನು ತಾಳ್ಮೆಯಿಂದ ಆಲಿಸುತ್ತಾರೆ. ನಾವು ನಮ್ಮ ಯೋಜನೆಗಳು, ಮುಂದಿನ ರೂಪು ರೇಶೆಗಳ ಕುರಿತು ಅದೆಷ್ಟೆ ದೊಡ್ಡ ಪ್ರಬಂಧ ಇದ್ದರೂ ಮೋದಿ ತಾಳ್ಮೆಯಿಂದ ಆಲಿಸಿ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಹೀಗಾಗಿ ವಿಪಕ್ಷಗಳು ಸರ್ವಾಧಿಕಾರಿ ಅನ್ನೋ ಪದ ಬಳಕೆ ತಪ್ಪು ಎಂದು ಅಮಿತ್ ಶಾ ಸಂಸದ್ ಟಿವಿಗೆ ನೀಡಿದ ಸಂದರ್ಶನಲ್ಲಿ ಹೇಳಿದ್ದಾರೆ. 

ಚುನಾವಣಾ ಹೊಸ್ತಿಲಲ್ಲಿ ಮುಖ್ಯಮಂತ್ರಿಗಳ ಬದಲಾವಣೆ: ಇಲ್ಲಿದೆ ಇದರ ಹಿಂದಿನ ರಹಸ್ಯ!

ನರೇಂದ್ರ ಮೋದಿ ವಿರೋಧ ಪಕ್ಷದಲ್ಲಿ ಹಾಗೂ ಆಡಳಿತ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಅಧಿಕಾರ ಇದ್ದರೂ ಇಲ್ಲದಿದ್ದರೂ ಪ್ರಧಾನಿ ಮೋದಿ ಪ್ರತಿ ವಿಚಾರಗಳನ್ನು ಅಷ್ಟೇ ಗಮನವಹಿಸಿ ಕೇಳುತ್ತಾರೆ. ತಜ್ಞರಿಂದ ಸಲಹೆಗಳನ್ನು ಪಡೆಯುತ್ತಾರೆ. ಮೀಟಿಂಗ್‌ಗಳಲ್ಲಿ ಎಲ್ಲರ ಅಭಿಪ್ರಾಯಗಳನ್ನು ಕೇಳಿ ಬಳಿಕ ದೃಢ ನಿರ್ಧಾರ ಘೋಷಿಸುತ್ತಾರೆ. ಹೀಗಾಗಿ ಮೋದಿ ವಿಶ್ವನಾಯಕನಾಗಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ; ಶಾ ಹೇಳಿಕೆ ಹಿಂದಿನ ಲೆಕ್ಕಾಚಾರವಿದು!

ಪ್ರತಿ ಸಮಸ್ಯೆ ಎದುರಾದಾಗ ಅದಕ್ಕೆ ಶಾಶ್ವತ ಪರಿಹಾರ ಹುಡುಕುತ್ತಾರೆ. ದೇಶದಲ್ಲಿ ಮಹತ್ತರ ಬದಲಾವಣೆಗೆ ಮೋದಿ ತೆಗೆದುಕೊಂಡ ಧೈರ್ಯದ ನಿರ್ಧಾರಗಳೇ ಕಾರಣ. ದೇಶದ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಲ್ಲ. ಗಡಿಯಲ್ಲಿ ತಕ್ಕ ಪ್ರತ್ಯುತ್ತರ ನೀಡುವ ಮೂಲಕ ಶತ್ರುರಾಷ್ಟ್ರಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದೇವೆ. ಭದ್ರತಾ ವಿಭಾಗ, ಆರೋಗ್ಯ ವಿಭಾಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಹೊಸ ಬದಲಾವಣೆ ತಂದಿದ್ದಾರೆ. ಮೋದಿ ಪ್ರಧಾನಿಯಾದ ಬಳಿಕ ಭಾರತದ ಇಮೇಜ್ ಯಾವ ರೀತಿಯಲ್ಲಿ ಬದಲಾಗಿದೆ ಅನ್ನೋದು ಎಲ್ಲರೂ ಅನುಭವಿಸಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.

 

Follow Us:
Download App:
  • android
  • ios