20 ವರ್ಷ ಮಾತ್ರವಲ್ಲ, 2024ರಲ್ಲೂ ಮೋದಿಗೆ ಗೆಲುವು; ಭವಿಷ್ಯ ನುಡಿದ ಅಮಿತ್ ಶಾ!

  • ಸಾರ್ವಜನಿಕ ಸೇವೆಯಲ್ಲಿ ನಿರಂತರ 20 ವರ್ಷ ಕಾಯಕ
  • ಮೋದಿ ಕುರಿತು ಭವಿಷ್ಯ ನುಡಿದ ಅಮಿತ್ ಶಾ
  • 2024ರಲ್ಲೂ ಪ್ರಧಾನಿ ಮೋದಿಗೆ ಗೆಲುವು ಎಂದ ಅಮಿತ್ ಶಾ
     
PM Modi surely be elected our PM again in 2024 says Amit shah in Gujarat ckm

ಗುಜರಾತ್(ಅ.09):  ಪ್ರಧಾನಿ ಮೋದಿ(Narendra Modi) ಸಾರ್ವಜನಿಕ ಸೇವೆಯಲ್ಲಿ 20 ವರ್ಷ ಪೂರೈಸಿದ್ದಾರೆ. ವಿಶ್ವದೆಲ್ಲಡೆಯಿಂದ ಮೋದಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಇದರ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಭವಿಷ್ಯ ನುಡಿದಿದ್ದಾರೆ. ಮೋದಿ ಆಡಳಿತ 20 ವರ್ಷಕ್ಕೆ ಸೀಮಿತವಾಗಿಲ್ಲ. 2024ರಲ್ಲೂ(Election 2024) ಪ್ರಧಾನಿ ನರೇಂದ್ರ ಮೋದಿಗೆ ಗೆಲುವು ಖಚಿತ ಎಂದು ಅಮಿತ್ ಶಾ ಹೇಳಿದ್ದಾರೆ.

2 ದಶಕಗಳು: 4 ಬಾರಿ ಸಿಎಂ, 2 ಬಾರಿ ಪಿಎಂ..! ಮೋದಿ 20 ವರ್ಷ ಅಧಿಕಾರ

ಸತತ 20 ವರ್ಷ ಜನರು ಒಬ್ಬ ನಾಯಕನಿಗೆ ಆಶೀರ್ವದಿಸಿದ್ದಾರೆ ಅನ್ನೋದು ಸಾಮಾನ್ಯ ಮಾತಲ್ಲ. ಇದು ವಿಶ್ವದಲ್ಲೇ ಅಪರೂಪದ ದಾಖಲೆಯಾಗಿದೆ. 2001ರಲ್ಲಿ ಗುಜರಾತ್(Gujarat) ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೋದಿ, 2014ರಿಂದ ಪ್ರಧಾನಿಯಾಗಿ ಇದೀಗ ಒಟ್ಟು 20 ವರ್ಷದಿಂದ ಸಾರ್ವಜನಿಕ ಸೇವೆಯಲ್ಲಿದ್ದಾರೆ. ಹೀಗಾಗಿ ಜನ 2024ರಲ್ಲೂ ಮೋದಿ ಆಡಳಿತವನ್ನೇ ಬಯಸಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.

ರೈತರಿಗೆ ಕೇಂದ್ರದ ಕೊಡುಗೆ: ಖರೀದಿ ಪೋರ್ಟಲ್‌ ಬದಲಾವಣೆ, ಮಧ್ಯವರ್ತಿಗಳ ಆಟಕ್ಕೆ ಬ್ರೇಕ್!

ಅಮಿತ್ ಶಾ ರಾಜಧಾನಿ ಗಾಂಧಿನಗರದಿಂದ 23 ಕಿಲೋಮೀಟರ್ ದೂರದಲ್ಲಿರುವ ಪನಸರ್ ಗ್ರಾಮದಲ್ಲಿರುವ ಬುಚರ್ ಮಾತಾ ಮಂದಿರಕ್ಕೆ(Temple) ಭೇಟಿ ನೀಡಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಮಾತಾ ಮಂದಿರದಲ್ಲಿನ ನವರಾತ್ರಿಯ ವಿಶೇಷ ಆರತಿ ಪೂಜೆಯಲ್ಲಿ ಅಮಿತ್ ಶಾ ಪಾಲ್ಗೊಂಡರು. ಪನಸರ್ ಗ್ರಾಮ ಅಮಿತ್ ಪೂರ್ವಜರ ಗ್ರಾಮವಾಗಿದೆ.

ಈ ಭೇಟಿಯಲ್ಲಿ ಅಮಿತ್ ಶಾ ಅವರ ಲೋಕಸಭಾ ಕ್ಷೇತ್ರ(lok sabha constituency) ಸಭಾದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಬಳಿಕ ಮೋದಿ ಮುಂದಿನ ಅವಧಿಯಲ್ಲೂ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. ಜನ ಅವರ ಮೇಲೆ ವಿಶ್ವಾಸವನ್ನಿಟ್ಟಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.

ಸಿಎಂ ಸ್ಥಾನದಿಂದ ಪಿಎಂವರೆಗೆ, 20 ವರ್ಷ ಪೂರೈಸಿದ ಮೋದಿ ಬಗ್ಗೆ MyGovIndiaನಿಂದ ಕ್ವಿಜ್‌!

ಕಳೆದ 20 ವರ್ಷದಲ್ಲಿ ನರೇಂದ್ರ ಮೋದಿ ರಜಾ ಹಾಕಿದ ದಿನ ನಾನು ನೋಡಿಲ್ಲ. ಮೋದಿ ಅಡಳಿತದಲ್ಲಿನ ಅಭಿವೃದ್ಧಿ, ದೇಶದಲ್ಲಿ ಆದ ಮಹತ್ತರ ಬದಲಾವಣೆಗಳನ್ನು ನೀವೆಲ್ಲಾ ನೋಡಿದ್ದೀರಿ. ಮೋದಿ ಪ್ರತಿ ಭಾರಿ ಇನ್ನೇನು ಕೆಲಸ ಬಾಕಿ ಇದೆ. ಯಾವ ಕೆಲಸ ತಕ್ಷಣ ಆಗಬೇಕಿದೆ ಎಂದು ವಿಚಾರಿಸುತ್ತಲೇ ಇರುತ್ತಾರೆ. ಸಾರ್ವಜನಿಕರ ಸಮಸ್ಯೆ ತಮ್ಮ ಸಮಸ್ಯೆ ಎಂದೇ ಭಾವಿಸಿ ಪರಿಹಾರ ಕೊಡಿಸುತ್ತಾರೆ ಎಂದು ಅಮಿತ್ ಶಾ, ಮೋದಿಯನ್ನು ಹೊಗಳಿದ್ದಾರೆ.

ಈ ಹಿಂದಿನ 70 ವರ್ಷಗಳ ಆಡಳತಕ್ಕಿಂತ ಮೋದಿ ಅವರ 7 ವರ್ಷದ ಆಡಳಿತ ಅತ್ಯುತ್ತಮವಾಗಿದೆ. 60 ಕೋಟಿ ಬ್ಯಾಂಕ್ ಖಾತೆ ತೆರೆಯಲಾಗಿದೆ. ಹೊಸದಾಗಿ 13 ಕೋಟಿ ಕುಟುಂಬಕ್ಕೆ ಗ್ಯಾಸ್ ಸಂಪರ್ಕ ನೀಡಲಾಗಿದೆ. 10 ಕೋಟಿ ಶೌಚಾಲಯ ನಿರ್ಮಿಸಲಾಗಿದೆ. 5 ಕೋಟಿ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ನೀಡಲಾಗಿದೆ. 5 ಕೋಟಿ ಮಂದಿಗೆ  60 ಕೋಟಿ ರೂಪಾಯಿಯ ಮೌಲ್ಯದ ಆರೋಗ್ಯ ವಿಮೆ ಮಾಡಿಸಲಾಗಿದೆ ಎಂದು ಮೋದಿ ಆಡಳಿತದಲ್ಲಿ ದೇಶದಲ್ಲಿನ ಆದ ಬದಲಾವಣೆಗಳ ಕುರಿತು ಶಾ ಹೇಳಿದ್ದಾರೆ.

ಬಿಜೆಪಿ ಮಾಡಿದ ಉತ್ತಮ ಕೆಲಸದಿಂದ ಗಾಂಧಿನಗರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಗುಜರಾತ್ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಇದೇ ವೇಳೆ ಗಾಂಧಿನಗರ ರೈಲು ನಿಲ್ದಾಣಕ್ಕೆ ತೆರಳಿದ ಅಮಿತ್ ಶಾ ಸ್ವಸಹಾಯ ಮಹಿಳಾ ಗುಂಪು ತೆರೆದ ಟಿ ಅಂಗಡಿ ಉದ್ಘಾಟನೆ ಮಾಡಿದ್ದಾರೆ.
 

Latest Videos
Follow Us:
Download App:
  • android
  • ios