ಪುಣೆ(ಮೇ.13): ಕೊರೋನಾ ವಿರುದ್ಧದ ಹೋರಾಟದಲ್ಲಿ ಪ್ಲಾಸ್ಮ ದಾನ ಮಾಡುವುದು ಅತೀ ಅಗತ್ಯ. ಲಸಿಕೆ, ಆಕ್ಸಿಜನ್, ವೆಂಟಿಲೇರಟ್‌ನಂತೆಯೇ ಕೊರೋನಾ ಹೋರಾಟಕ್ಕೆ ಶಕ್ತಿ ತುಂಬುವ ವಿಚಾರವಾಗಿದೆ ಪ್ಲಾಸ್ಮಾ. ನನಗೆ ನಾನೆಂದೂ ದುರ್ಬಲ ಎಂದು ಅನಿಸಿಲ್ಲ. ನಾನೀಗ ಹೆಚ್ಚು ಸಿದ್ಧನಾಗಿದ್ದೇನೆ ಎನ್ನುತ್ತಾರೆ ಪ್ಲಾಸ್ಮಾವನ್ನು 14 ಬಾರಿ ದಾನ ಮಾಡಿದ ಪುಣೆಯ ವ್ಯಕ್ತಿ.

ಪುಣೆಯ 50 ವರ್ಷದ ಅಜಯ್ ಮುನೊಟ್ ಅವರು ಈವರೆಗೆ 14 ಬಾರಿ ಪ್ಲಾಸ್ಮಾ ದಾನ ಮಾಡಿದ್ದಾರೆ ಎಂದು ಹೇಳಿದ್ದಾರೆ. "ನಾನು ಜುಲೈನಲ್ಲಿ (ಕಳೆದ ವರ್ಷ) ಚೇತರಿಸಿಕೊಂಡ 28 ದಿನಗಳ ನಂತರ ಮೊದಲ ಬಾರಿ ಪ್ಲಾಸ್ಮಾ ದಾನ ಮಾಡಿದೆ ಎಂದಿದ್ದಾರೆ.

ಪ್ಲಾಸ್ಮಾ ದಾನ ಮಾಡಲು ಜೊತೆಯಾದ್ರು ಕಾಶ್ಮೀರಿ ಪಂಡಿತ ಮತ್ತು ಮುಸ್ಲಿಂ ವ್ಯಕ್ತಿ

ಸೋಂಕಿತರ ಕುಟುಂಬವು ದಾನಿಗಾಗಿ ಹುಡುಕುತ್ತಿರುವಾಗ ಇದು ತುರ್ತು ಪರಿಸ್ಥಿತಿ ಎಂದು ಅವರು ಹೇಳಿದ್ದಾರೆ. ನಾನು ಪ್ಲಾಸ್ಮಾವನ್ನು 14 ಬಾರಿ ದಾನ ಮಾಡಿದ್ದರೂ, ನಾನು ಎಂದಿಗೂ ದುರ್ಬಲನಾಗಿರಲಿಲ್ಲ ಎಂದು ಮುನೊಟ್ ಹೇಳಿದ್ದಾರೆ..