Asianet Suvarna News Asianet Suvarna News

ಪ್ಲಾಸ್ಮಾ ದಾನ ಮಾಡಲು ಜೊತೆಯಾದ್ರು ಕಾಶ್ಮೀರಿ ಪಂಡಿತ ಮತ್ತು ಮುಸ್ಲಿಂ ವ್ಯಕ್ತಿ

  • ಜಾತಿ, ಧರ್ಮವನ್ನು ಮೀರಿ ಪ್ಲಾಸ್ಮಾ ದಾನ ಮಾಡೋಕೆ ಜೊತೆಯಾದ್ರು
  • ಕಾಶ್ಮೀರಿ ಪಂಡಿತ ಮತ್ತು ಮುಸ್ಲಿಂ ವ್ಯಕ್ತಿಯ ಸೂಪರ್ ಕಾಂಬಿನೇಷನ್‌ನಲ್ಲಿ ಸಮಾಜಮುಖಿ ಕಾರ್ಯ
Kashmir Pandit And Muslim Join hands for Plasma Relief dpl
Author
Bangalore, First Published May 13, 2021, 10:37 AM IST

ದೆಹಲಿ(ಮೇ.13): ದೆಹಲಿಯಲ್ಲಿ ಕೊರೋನಾದಿಂದ ತತ್ತರಿಸುತ್ತಿರುವ ಜನರಿಗೆ ಪ್ಲಾಸ್ಮಾ ಒದಗಿಸಲು ಮುಸ್ಲಿಂ ಯುವಕ ಹಾಗು ಕಾಶ್ಮೀರ ಪಂಡಿತ ಒಂದಾಗಿದ್ದಾರೆ. ಹೊಟೇಲ್ ಉದ್ಯಮಿ ಸಂಜಯ್ ರೈನಾ ಮತ್ತು 19 ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ ಅನಾದ್ ಶಾ ಜಮ್ಮು ಕಾಶ್ಮೀರದಲ್ಲಿ ಒಂದಾಗಿದ್ದಾರೆ. ಇವರು ಜೊತೆಯಾಗಿ @PlasmaNCR ಟ್ವಿಟರ್ ಖಾತೆ ಮೂಲಕ ಅಗತ್ಯದಲ್ಲಿರುವ ಜನರಿಗೆ ನೆರವಾಗುತ್ತಿದ್ದಾರೆ.

ರೈನಾ ಮತ್ತು ಶಾ ಪ್ರತಿದಿನ 150 ಮ್ಯಾಚ್ ಪ್ಲಾಸ್ಮಾ ಒದಗಿಸುತ್ತಿದ್ದಾರೆ. ಏ.18ರಂದು ಈ ಕೆಲಸ ಆರಂಭಿಸಿದ್ದರು. ಪ್ರತಿದಿನ 250ರಿಂದ 300 ಬೇಡಿಕೆಗಳು ಬರುತ್ತವೆ. ಇವುಗಳು ದೆಹಲಿಯಿಂದ ತೊಡಗಿ ಆಗ್ರಾ, ಮೀರತ್, ಚಂಡೀಗಡ, ಕಾಶ್ಮೀರದಿಂದಲೂ ಇರುತ್ತದೆ ಎನ್ನುತ್ತಾರೆ ಶಾ. ರೋಗಿಯ ಹೆಸರು, ವಯಸ್ಸು, ರಕ್ತದ ಗುಂಪು, ಸಂಪರ್ಕ ಸಂಖ್ಯೆ, ಸ್ಥಳ ಇವುಗಳನ್ನು ನಮೂದಿಸಿ ಜನ ಬೇಡಿಕೆ ಕಳುಹಿಸುತ್ತಾರೆ.

ಸೋಂಕಿತರಿಗಾಗಿ ತೇಲುವ ಆಂಬುಲೆನ್ಸ್: ಎಲ್ಲ ವ್ಯವಸ್ಥೆಯೂ ಇದೆ

ನಾವು ಟ್ವಿಟರ್‌ನಲ್ಲಿ ಮಾತ್ರ ಇದನ್ನು ನಡೆಸುತ್ತೇವೆ. ಪ್ಲಾಸ್ಮಾ ದಾನ ಮಾಡುವವರು ನಮ್ಮದೇ ಕಾಂಟ್ಯಾಕ್ಟ್‌ನಲ್ಲಿರುವವರ ಲಿಸ್ಟ್ ಮಾಡುತ್ತೇವೆ. ಆಸುಪಾಸಿನ ಜನ, ಸ್ನೇಹಿತರು, ಸಹುದ್ಯೋಗಿಗಳು, ಸೋಷಿಯಲ್ ಮೀಡಿಯಾ ಕಾಂಟಾಕ್ಟ್ ಎಲ್ಲವನ್ನೂ ಬಳಸಿಕೊಳ್ಳುತ್ತೇವೆ ಎಂದು ಹೇಳುತ್ತಾರೆ ರೈನಾ.

ಶಾ ದೆಹಲಿಯಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದು ಇವರು ಕಾಶ್ಮೀರದ ಕುಪ್ವಾರ ಜಿಲ್ಲೆಯವರು. ಶಾ ಮತ್ತು ರೈನಾ ತಮ್ಮ ಕಾಮನ್‌ ಫ್ರೆಂಡ್‌ಗೆ ಕೊರೋನಾ ಸಂದರ್ಭ ಬೆಡ್ ಸಿಗಲು ನೆರವಾಗಿದ್ದರು. ಅಲ್ಲಿ ಬೆಡ್, ವೆಂಟಿಲೇಟರ್, ಆಕ್ಸಿಜನ್ ಎಲ್ಲದಕ್ಕೂ ಕೊರತೆ ಇತ್ತು. ಆ ಸಂದರ್ಭ ನಾವು ಪ್ಲಾಸ್ಮಾ ನೀಡುವ ಮೂಲಕ ನೆರವಾಗಲು ನಿರ್ಧರಿಸಿದೆವು ಎಂದಿದ್ದಾರೆ ಶಾ.

ಇದಕ್ಕಾಗಿ ಇಬ್ಬರೂ ದಿನದ 20 ಗಂಟೆಗೂ ಹೆಚ್ಚು ಕೆಲಸ ಮಾಡುತ್ತಾರೆ. ಆದರೆ ಸರಿಯಾದ ಮ್ಯಾಚ್ ಹುಡುಕುವುದು ನಿಜಕ್ಕೂ ಸವಾಲಾಗಿದೆ. ಕೆಲವೊಮ್ಮೆ ಪ್ಲಾಸ್ಮಾ ನೀಡೋಕೆ ಜನ ಮುಂದೆ ಬಂದ್ರೂ ಹೆಚ್ಚಿನ ಆಂಟಿಬಾಡಿಸ್ ಇರದ ಕಾರಣ ರಿಜೆಕ್ಟ್ ಆಗುತ್ತಿತ್ತು. ಬಹಳಷ್ಟು ಮ್ಯಾಚ್ ನೋಡಿ ಸೂಟ್ ಮಾಡಬೇಕಾಗುತ್ತದೆ ಎನ್ನುತ್ತಾರೆ ರೈನಾ. ಇದೀಗ ಇದೇ ಟ್ವಿಟರ್‌ನಲ್ಲಿ ಅಪೋಲೋ ಆಸ್ಪತ್ರೆಯ ಡಾ. ಸಮೀರ್ ಕೌಲ್ ಉಚಿತ ಸಮಾಲೋಚನೆಯನ್ನೂ ನೀಡುತ್ತಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios