ನವದೆಹಲಿ (ಸೆ.25)): ಇತ್ತೀಚೆಗಷ್ಟೇ ಉತ್ತರಾಖಂಡದ ಲಿಪುಲೇಖ್‌, ಲಿಂಪಿಯಾಧುರ ಹಾಗೂ ಕಾಲಾಪಾನಿ ಪ್ರದೇಶಗಳು ತನ್ನವು ಎಂದು ಹೇಳಿಕೊಂಡು ಈ ಊರುಗಳನ್ನು ತನ್ನ ನಕ್ಷೆ ಹಾಗೂ ಶಾಲಾ ಪಠ್ಯದಲ್ಲೂ ಸೇರಿಸಿಕೊಂಡಿರುವ ನೇಪಾಳ ಇದೀಗ ಈ ಊರುಗಳಲ್ಲಿ ಜನಗಣತಿ ನಡೆಸಲು ಸಿದ್ಧತೆ ಮಾಡಿಕೊಂಡಿದೆ.

ನೇಪಾಳದಲ್ಲಿ ಪ್ರತಿ 10 ವರ್ಷಕ್ಕೊಮ್ಮೆ ರಾಷ್ಟ್ರೀಯ ಜನಗಣತಿ ನಡೆಯುತ್ತದೆ. ಈ ಬಾರಿಯ ಗಣತಿ ಮುಂದಿನ ವರ್ಷದ ಮೇ ವೇಳೆ ನಡೆಯಲಿದೆ. ಆಗ ಲಿಪುಲೇಖ್‌, ಲಿಂಪಿಯಾಧುರ ಹಾಗೂ ಕಾಲಾಪಾನಿಯಲ್ಲೂ ಗಣತಿ ನಡೆಸಲು ನೇಪಾಳದ ರಾಷ್ಟ್ರೀಯ ಯೋಜನಾ ಆಯೋಗ ಹಾಗೂ ಕೇಂದ್ರ ಅಂಕಿಅಂಶ ಸಂಸ್ಥೆ ನಿರ್ಧರಿಸಿವೆ. ಮನೆಮನೆಗೆ ಭೇಟಿ ನೀಡಿ ನಡೆಸುವ ಗಣತಿ ಇದಾಗಿದ್ದು, ಒಂದು ವೇಳೆ ಈ ಊರುಗಳಲ್ಲಿ ಮನೆಮನೆ ಗಣತಿ ನಡೆಸಲು ಸಾಧ್ಯವಾಗದಿದ್ದರೆ ಬೇರೆ ಮಾರ್ಗಗಳಲ್ಲಿ ಗಣತಿ ನಡೆಸುವುದಕ್ಕೂ ಚಿಂತನೆ ನಡೆದಿದೆ. ಗಣತಿಗಾಗಿ ಈಗಾಗಲೇ ಪ್ರಶ್ನಾವಳಿಗಳು ಸಿದ್ಧಗೊಂಡಿವೆ ಎಂದು ಮೂಲಗಳು ತಿಳಿಸಿವೆ.

ಆದರೆ, ನೇಪಾಳದ ಈ ನಿರ್ಧಾರದ ಕುರಿತು ತಮಗೆ ಮಾಹಿತಿ ಇಲ್ಲ ಎಂದಿರುವ ಈ ಮೂರು ಊರುಗಳು ಇರುವ ಪಿತೋರ್‌ಗಢ ಜಿಲ್ಲೆಯ ಜಿಲ್ಲಾಧಿಕಾರಿ, ಒಂದು ವೇಳೆ ನೇಪಾಳವೇನಾದರೂ ಜನಗಣತಿಗೆ ಮುಂದಾದರೆ ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಕಾಶ್ಮೀರಿಗರು ಚೀನಾ ಆಡಳಿತ ಬಯಸುತ್ತಾರೆ

ಇನ್ನು, ಈ ಊರುಗಳ ಜನರು ಕೂಡ ನೇಪಾಳದ ಜನಗಣತಿಯಲ್ಲಿ ತಾವು ಪಾಲ್ಗೊಳ್ಳುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ. ‘ನಾವು ಭಾರತೀಯರು. ನಾವೇಕೆ ನೇಪಾಳ ಸರ್ಕಾರದ ಗಣತಿಯಲ್ಲಿ ಪಾಲ್ಗೊಳ್ಳಬೇಕು’ ಎಂದು ಅವರು ಪ್ರಶ್ನಿಸಿದ್ದಾರೆ.

ಚೀನಾ ಅಣ​ತಿ​ಯಂತೆ ನೇಪಾ​ಳದ ಈ ಕಿತಾ​ಪ​ತಿ?
ಭಾರ​ತದ ಪರ​ಮ​ವೈರಿ ಚೀನಾ ತಾಳಕ್ಕೆ ತಕ್ಕಂತೆ ಕುಣಿ​ಯು​ತ್ತಿ​ರುವ ನೇಪಾಳ, ಈಗ ಭಾರ​ತ​ವನ್ನು ಕೆರ​ಳಿ​ಸುವ ಮತ್ತೊಂದು ಹೆಜ್ಜೆ ಇರಿ​ಸಿ​ದೆ. ತನ್ನ ದೇಶ​ವನ್ನು ‘ಗ್ರೇ​ಟರ್‌ ನೇಪಾಳ’ ಎಂದು ಕರೆ​ಯ​ಬೇಕು. ಈ ಗ್ರೇಟರ್‌ ನೇಪಾ​ಳ​ದಲ್ಲಿ ಭಾರ​ತ​ದ​ಲ್ಲಿ​ರುವ ಡೆಹ್ರಾ​ಡೂನ್‌ ಹಾಗೂ ನೈನಿ​ತಾಲ್‌ ಕೂಡ ತನ್ನವು ಎಂಬ ಹೊಸ ಆಂದೋ​ಲನ ಆರಂಭಿ​ಸಿ​ದೆ.

ನೇಪಾ​ಳದ ಆಡ​ಳಿ​ತಾ​ರೂಢ ಕಮ್ಯು​ನಿಸ್ಟ್‌ ಪಕ್ಷವು ಸಂಯುಕ್ತ ನೇಪಾಳ ರಾಷ್ಟ್ರೀಯ ರಂಗ​ದೊಂದಿಗೆ ಸೇರಿ​ಕೊಂಡು ಈ ವಿವಾ​ದಾ​ತ್ಮಕ ಆಂದೋ​ಲನ ಆರಂಭಿ​ಸಿ​ದೆ. ಇದ​ಲ್ಲದೆ, ಕಮ್ಯು​ನಿಸ್ಟ್‌ ಪಕ್ಷವ ಉತ್ತ​ರಾ​ಖಂಡ, ಹಿಮಾ​ಚಲ ಪ್ರದೇಶ, ಉತ್ತರ ಪ್ರದೇಶ, ಬಿಹಾರ ಹಾಗೂ ಸಿಕ್ಕಿಂನ ಕೆಲವು ಭಾಗ​ಗಳೂ ತನ್ನದು ಎಂದು ಹೇಳಿ​ಕೊ​ಳ್ಳು​ತ್ತಿ​ದೆ.

ಇತ್ತೀ​ಚೆಗೆ ಭಾರ​ತದ ವಿರುದ್ಧ ಕತ್ತಿ ಮಸೆ​ಯು​ತ್ತಿ​ರುವ ಚೀನಾ ಜತೆ ಕೈಜೋ​ಡಿ​ಸಿ​ರುವ ನೇಪಾಳ, ಸಿಕ್ಕಿಂ, ಕುಮಾ​ವುನ್‌, ಗಢ​ವಾಲ್‌ ಹಾಗೂ ಕಾಂಗ್ರಾ ಪ್ರದೇ​ಶ​ಗ​ಳಲ್ಲಿ ತನ್ನ ವ್ಯಾಪ್ತಿ​ಯನ್ನು ವಿಸ್ತ​ರಿ​ಸುವ ಹುನ್ನಾರ ನಡೆ​ಸಿದೆ ಎಂದು ಮಾಧ್ಯಮ ವರ​ದಿ​ಯೊಂದು ಹೇಳಿ​ದೆ.

ಬಾಹ್ಯಾಕಾಶದಲ್ಲಿ ಭಾರತದ ಮೇಲೆ ದಾಳಿಗೆ ಚೀನಾ ವಿಫಲ ಯತ್ನ

ನೇಪಾಳದಲ್ಲೂ ಚೀನಾ ಅತಿಕ್ರಮಣ
ಭಾರತದ ವಿರುದ್ದ ನೇಪಾಳವನ್ನು ಎತ್ತಿ ಕಟ್ಟಿದ್ದ ಚೀನಾ, ನೇಪಾಳದ ಕೆನ್ನೆ ಸವರುತ್ತಲೇ, ಬೆನ್ನಿಗೆ ಚೂರಿ ಹಾಕಿದೆ. ನೇಪಾಳದ ಹುಮ್ಲಾ ಜಿಲ್ಲೆಯಲ್ಲಿ ಚೀನಾ ಅಕ್ರಮ ಮನೆಗಳನ್ನು ನಿರ್ಮಿಸಿ, ಅಲ್ಲಿಗೆ ನೇಪಾಳಿಯರ ಪ್ರವೇಶ ನಿಷೇಧಿಸಿದೆ. ಈ ವಿಚಾರವನ್ನು ಖುದ್ದು ನೇಪಾಳ ಸರ್ಕಾರವೇ ಬಹಿರಂಗ ಪಡಿಸಿದ್ದು, ಇದಾದ ಬೆನ್ನಲ್ಲೇ ಕಾಠ್ಮಂಡುವಿನಲ್ಲಿರುವ ಚೀನಾ ರಾಯಭಾರ ಕಚೇರಿ ಮುಂದೆ ನೇಪಾಳಿಯರು ಪ್ರತಿಭಟನೆ ನಡೆಸಿತ್ತು. ಕೈಲಾಸ ಪರ್ವತ ಸಮೀಪದಲ್ಲಿ ನೇಪಾಳ ಸರ್ಕಾರದ ಅನುಮತಿ ಪಡೆಯದೇ ಚೀನಾ ರಹಸ್ಯವಾಗಿ 9-11 ಮನೆಗಳನ್ನು ನಿರ್ಮಿಸಿದೆ. ಕೆಲ ತಿಂಗಳ ಹಿಂದಷ್ಟೇ ಪೂರ್ವ ಲಡಾಖ್‌ನಲ್ಲಿ ಭಾರತದ ಪ್ರದೇಶಗಳಿಗೆ ನುಗ್ಗಿ ಚೀನಾ ಕ್ಯಾತೆ ತೆಗೆದಿತ್ತು.