ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿರುದ್ಧ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿ (ಜು.25): ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿರುದ್ಧ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿದ್ಯಾರ್ಥಿಗಳನ್ನ ದೇಶದ ಶತ್ರುಗಳಂತೆ ಕಾಣಲಾಗುತ್ತೆ
ದಿ ಹಿಂದೂ ದಿನಪತ್ರಿಕೆಯಲ್ಲಿ ಪ್ರಕಟವಾದ ‘ಶಿಕ್ಷಣ ವ್ಯವಸ್ಥೆ ಕುಸಿತ, ಯುವ ಭಾರತಕ್ಕೆ ಆಘಾತ’ ಎಂದು ಲೇಖನದಲ್ಲಿ ಹೀಗೆ ಹೇಳಿದ್ದಾರೆ.
‘ನೀಟ್ ಅಕ್ರಮದ ವಿರುದ್ಧ ವಿದ್ಯಾರ್ಥಿಗಳು ಹೊಣೆಗಾರಿಕೆ ಮತ್ತು ಶೈಕ್ಷಣಿಕ ಸುಧಾರಣೆ ಬಯಸಿದ್ದಾರೆ. ಆದರೆ ಪ್ರಸಕ್ತ ಕೇಂದ್ರದ ಆಡಳಿತ ‘ಹೇಡಿತನ ಮತ್ತು ವಿವೇಚನಾರಹಿತ ಕ್ರೌರ್ಯದ ಮೂಲಕ ತನ್ನ ಧೈರ್ಯ ಪ್ರದರ್ಶಿಸಿದೆ. ಅಲ್ಲದೆ ಅವರು ಭವಿಷ್ಯದ ಉತ್ತರಾಧಿಕಾರಿಗಳೆಂದು ಭಾವಿಸದೆ ದೇಶದ ಶತ್ರುಗಳ ರೀತಿ ಕಾಣುತ್ತಿದೆ’ ಎಂದು ಮೂದಲಿಸಿದ್ದಾರೆ.
ಮೋದಿಗೆ ತಾನೇ ಶ್ರೇಷ್ಠ ಎಂಬ ಭ್ರಮೆ
‘ಈಗಿನ ಶಿಕ್ಷಣ ಕ್ಷೇತ್ರದ ನಿಸ್ತೇಜಕ್ಕೆ ಮೋದಿ ಸರ್ಕಾರದ ಒಣ ಹಮ್ಮು ಕಾರಣ. ಅಲ್ಲದೆ ತಾನೇ ಶ್ರೇಷ್ಠ ಎಂಬ ಭ್ರಮೆ, ಸಂವೇದನೆರಹಿತವಅಗಿ ವರ್ತಿಸುವುದು ಅಭ್ಯಾಸವಾಗಿಸಿಕೊಂಡಿದೆ’ ಎಂದು ಕುಟುಕಿದ್ದಾರೆ. ಅಲ್ಲದೆ ಮೋದಿ ಸರ್ಕಾರದ ವೈಫಲ್ಯಗಳ ಕುರಿತು ಲೇಖನದಲ್ಲಿ ಸೋನಿಯಾ ಗಾಂಧಿ ಟೀಕಿಸಿದ್ದಾರೆ.


