2009ರಲ್ಲಿ ಕೊಲೆ ಯತ್ನ ಪ್ರಕರಣದ ತೀರ್ಪು ಹೊರಬಿದ್ದಿದೆ. ಸಂಸದನ ಮೇಲಿದ್ದ ಆರೋಪ ಸಾಬೀತಾಗಿದ್ದು 10 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.

ಲಕ್ಷದ್ವೀಪ(ಜ.11): ದೇಶದಲ್ಲಿ ಚುನಾವಣೆ ಕಾವು ಹೆಚ್ಚಾಗುತ್ತಿದೆ. ಒಂದೊಂದೆ ರಾಜ್ಯಗಳು ಮಹಾ ಕದನಕ್ಕೆ ಸಜ್ಜಾಗುತ್ತಿದೆ. ಇದರ ನಡುವೆ ದೂರದ ಲಕ್ಷದ್ವೀಪದಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಲಕ್ಷದ್ವೀಪದ ಸಂಸದ ಮೊಹಮ್ಮದ್ ಫೈಜಲ್ ಜೈಲು ಸೇರಿದ್ದಾರೆ. 2009ರಲ್ಲಿನ ಕೊಲೆ ಯತ್ನ ಪ್ರಕರಣದ ಆರೋಪಿ ಮೊಹಮ್ಮದ್ ಫೈಜಲ್ ಮೇಲಿನ ಆರೋಪಗಳು ಸಾಬೀತಾಗಿದೆ. ಈ ಕುರಿತು ವಿಚಾರಣೆ ನಡೆಸಿದ ಲಕ್ಷದ್ವೀಪದ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ. 2009ರಲ್ಲಿ ಮೊಹಮ್ಮದ್ ಫೈಜಲ್ ತಮ್ಮ ಸಂಬಂಧಿ ಮೊಹಮ್ಮದ್ ಸಲೀಹ್ ಕೊಲೆಗೆ ಯತ್ನಿಸಿದ್ದ. ಲಕ್ಷದ್ವೀಪ ನ್ಯಾಯಾಲಯದಲ್ಲಿ ಸಾಕ್ಷ್ಯಗಳು ತನಗೆ ವಿರುದ್ಧವಾಗಿದೆ ಎಂಬುದನ್ನು ಅರಿತದ ಮೊಹಮ್ಮದ ಫೈಜಲ್, ಪ್ರಕರಣವನ್ನು ಕೇರಳ ಹೈಕೋರ್ಟ್‌ಗೆ ವರ್ಗಾಯಿಸಲು ಮನವಿ ಮಾಡಿದ್ದ. ಆದರೆ ಈ ಮನವಿ ತಿರಸ್ಕರಿಸಿದ ಲಕ್ಷದ್ವೀಪ ಹೈಕೋರ್ಟ್, 10 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿದೆ.

2014ರಿಂದ ಮೊಹಮ್ಮದ್ ಫೈಜಲ್ ಲಕ್ಷದ್ವೀಪದ ಸಂಸದನಾಗಿ ಆಯ್ಕೆಯಾಗುತ್ತಿದ್ದಾರೆ. 2 ಬಾರಿ ಸಂಸದನಾಗಿರುವ ಮೊಹಮ್ಮದ್ ಫೈಜಲ್, ಚುನಾವಣಾ ಅಖಾಡಕ್ಕೆ ಸ್ಪರ್ಧಿಸುವ ಮೊದಲು ಕೊಲೆ ಯತ್ನ ಪ್ರಕರಣದ ಆರೋಪಿಯಾಗಿದ್ದರು. ಲಕ್ಷದ್ವೀಪದಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಪ್ರಮುಖ ನಾಯಕನಾಗಿರುವ ಮೊಹಮ್ಮದ್ ಫೈಜಲ್, ಇದೀಗ ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.

ಫೇಸ್‌ಬುಕ್‌ ಫ್ರೆಂಡ್‌ನಿಂದ ಮೆಟ್ರೋ ಸ್ಟೇಷನ್ ಬಳಿ ಯುವತಿ ಮೇಲೆ ಗ್ಲಾಸ್‌ ಬಾಟಲ್‌ನಿಂದ ಹಲ್ಲೆ

ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಲಕ್ಷದ್ವೀಪ ಕೋರ್ಟ್, ಶಿಕ್ಷೆ ಪ್ರಕಟಿಸಿದೆ. 2009ರಲ್ಲಿ ನಡೆದ ಕೊಲೆ ಯತ್ನ ಪ್ರಕರಣದಲ್ಲಿ 23 ಮಂದಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಮೊಹಮ್ಮದ್ ಫೈಜಲ್ ಸೇರಿ ನಾಲ್ವರ ಮೇಲಿನ ಆರೋಪ ಸಾಬೀತಾಗಿದೆ. ಈ ನಾಲ್ವರ ಪೈಕಿ ಮೂವರು ಜಾಮಿನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಮೂವರ ಅರ್ಜಿಯನ್ನು ಕೋರ್ಟ್ ತರಿಸ್ಕರಿಸಿದೆ.

ಗುಂಪು ಹಲ್ಲೆ, ಯುವ ಕಾಂಗ್ರೆಸ್‌ ಮುಖಂಡ ಸೆರೆ
ಇತ್ತೀಚೆಗೆ ನಡೆದ ಗುಂಪು ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹೇಲ್‌ ಕಂದಕ್‌ ಅವರನ್ನು ಗುರುವಾರ ಮಂಗಳೂರಿನ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಮುಕ್ಕಾಚೇರಿಯ ಸುಹೇಲ್‌ ಕಂದಕ್‌ ಮತ್ತು ಸಲ್ಮಾನ್‌ ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಘರ್ಷಣೆ ಸಮಯದಲ್ಲಿ ಸುಹೇಲ್‌ ಕಂದಕ್‌ ತನ್ನ ಪರವಾನಗಿ ಹೊಂದಿದ್ದ ಪಿಸ್ತೂಲ್‌ ಬಳಸಿದ್ದು, ಇದರಿಂದ ಇನ್ನೊಂದು ಗುಂಪಿನ ಇರ್ಷಾದ್‌ ಗಾಯಗೊಂಡಿದ್ದ. ಇದೇ ವೇಳೆ ಇನ್ನೊಂದು ಗುಂಪಿನವರು ಸುಹೇಲ್‌ ಮೇಲೆ ಹಲ್ಲೆ ನಡೆಸಿ ಅವರ ವಾಹನಕ್ಕೆ ಹಾನಿ ಮಾಡಿದ್ದರು. ಇರ್ಷಾದ್‌ ಮತ್ತು ಸುಹೇಲ್‌ ಇಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪೂಜಾರಿ ವೇಷದಲ್ಲಿ ಬಂದು ಕತ್ತಿಯಿಂದ ದಾಳಿ ನಡೆಸಿದ ದುಷ್ಕರ್ಮಿ

ಈ ಕುರಿತು ಉಳ್ಳಾಲ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಉಳ್ಳಾಲ ಪೊಲೀಸರು ಬಂದೂಕನ್ನು ಬಳಸಿದ್ದಕ್ಕಾಗಿ ಸುಹೇಲ್‌ ಕಂದಕ್‌ ಅವರನ್ನು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 14 ಮಂದಿಯನ್ನು ಬಂಧಿಸಲಾಗಿದೆ. ಸುಹೇಲ್‌ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಉಳ್ಳಾಲ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸುಹೇಲ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.