ಪೂಜಾರಿ ವೇಷದಲ್ಲಿ ಬಂದು ಕತ್ತಿಯಿಂದ ದಾಳಿ ನಡೆಸಿದ ದುಷ್ಕರ್ಮಿ
ಪೂಜಾರಿ ವೇಷದಲ್ಲಿ ಬಂದ ವ್ಯಕ್ತಿಯೊಬ್ಬ ಆಂಧ್ರಪ್ರದೇಶದ ಟಿಡಿಪಿ ನಾಯಕನ ಮೇಲೆ ಕತ್ತಿಯಿಂದ ದಿಢೀರ್ ಹತ್ಯೆಗೆ ಯತ್ನಿಸಿದ್ದಾನೆ. ಆಂಧ್ರಪ್ರದೇಶದ ಕಾಕಿನಾಡಲ್ಲಿ(Kakinada) ಈ ಘಟನೆ ನಡೆದಿದ್ದು, ಘಟನೆಯಲ್ಲಿ ಟಿಡಿಪಿ ನಾಯಕ ಮಾಜಿ ಸಂಸದ ಶೇಷಗಿರಿ ರಾವ್ ಪೊಲ್ನಟಿ ಅವರಿಗೆ ಗಾಯಗಳಾಗಿವೆ
ಆಂಧ್ರಪ್ರದೇಶ: ದೇಶದ ಜನರಿನ್ನೂ ದೆಹಲಿಯಲ್ಲಿ ನಡೆದ ಶ್ರದ್ಧಾ ಭೀಕರ ಹತ್ಯೆ ಪ್ರಕರಣದ ಆಘಾತಕಾರಿ ಘಟನಾವಳಿಯಿಂದ ಹೊರಗೆ ಬಂದಿಲ್ಲ. ಅಂತಹದರಲ್ಲಿ ಈಗ ನೆರೆಯ ಆಂಧ್ರಪ್ರದೇಶದಲ್ಲಿ ಭೀಕರ ಹತ್ಯೆ ಯತ್ನ ಪ್ರಕರಣದ ದೃಶ್ಯವೊಂದು ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸುವಂತಿದೆ. ಪೂಜಾರಿ ವೇಷದಲ್ಲಿ ಬಂದ ವ್ಯಕ್ತಿಯೊಬ್ಬ ಆಂಧ್ರಪ್ರದೇಶದ ಟಿಡಿಪಿ ನಾಯಕನ ಮೇಲೆ ಕತ್ತಿಯಿಂದ ದಿಢೀರ್ ಹತ್ಯೆಗೆ ಯತ್ನಿಸಿದ್ದಾನೆ. ಆಂಧ್ರಪ್ರದೇಶದ ಕಾಕಿನಾಡಲ್ಲಿ(Kakinada) ಈ ಘಟನೆ ನಡೆದಿದ್ದು, ಘಟನೆಯಲ್ಲಿ ಟಿಡಿಪಿ ನಾಯಕ ಮಾಜಿ ಸಂಸದ ಶೇಷಗಿರಿ ರಾವ್ ಪೊಲ್ನಟಿ ಅವರಿಗೆ ಗಾಯಗಳಾಗಿವೆ. ಘಟನೆಯ ಬಳಿಕ ಆರೋಪಿ ಪರಾರಿಯಾಗಿದ್ದು, ಈ ಆಘಾತಕಾರಿ ದೃಶ್ಯದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.
ಶೇಷಗಿರಿ ರಾವ್ (Seshagiri Rao Polnati) ಅವರ ಮನೆಯ ಆವರಣದಲ್ಲೇ ಈ ಅನಾಹುತ ನಡೆದಿದೆ. ಪುರೋಹಿತ (priest) ವೇಷದಲ್ಲಿ ಬಂದು ಏನೋ ತೋರಿಸುವಂತೆ ಮಾಡಿದ್ದೇನೆ. ಆತ ತೋರಿಸಿದ್ದನ್ನು ನೋಡುವುದರಲ್ಲಿ ಮಗ್ನರಾಗಿದ್ದ ಶೇಷಗಿರಿ ರಾವ್ ಅವರ ಮೇಲೆ ಕೂಡಲೇ ತನ್ನ ಅಡಗಿಸಿಟ್ಟ ಹರಿತವಾದ ಕತ್ತಿಯನ್ನು ತೆಗೆದು ದಾಳಿಗೆ ಮುಂದಾಗಿದ್ದಾನೆ. ಇಂದು ಮುಂಜಾನೆ ಆರು ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಶೇಷಗಿರಿ ರಾವ್ ಮೇಲೆ ಕತ್ತಿ ಝಳಪಿಸಿ ಆತ ಸ್ಥಳದಿಂದ ಪರಾರಿಯಾಗಿದ್ದು, ಯಾವ ಕಾರಣಕ್ಕೆ ಈ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿಲ್ಲ.ಪೋಲಿಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಾಗಿ ಬಲೆ ಬೀಸಿದ್ದಾರೆ.
Delhi Crime: ಶ್ರದ್ದಾ ಬರ್ಬರ ಹತ್ಯೆ ಪ್ರಕರಣ: ಗ್ಯಾಸ್ ಸಿಲಿಂಡರ್ ಬಳಿ ದೊರೆತ ಸಾಕ್ಷ್ಯ..!
ಇತ್ತ ಗಾಯಗೊಂಡ ಮಾಜಿ ಸಂಸದ ಶೇಷಗಿರಿ ರಾವ್ ಪೊಲ್ನಟಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಡ್ಯದ ದೇವಾಲಯದಲ್ಲಿ ವಿಸ್ಮಯ: ಕಳ್ಳತನ ತಪ್ಪಿಸಿದ ಸರ್ಪ: ಸಿಸಿಟಿವಿಯಲ್ಲಿ ದೃಶ್ಯ ಸೆರೆ