Asianet Suvarna News Asianet Suvarna News

Jharkhand : ಬಿಪಿಎಲ್‌ ಕುಟುಂಬಕ್ಕೆ ತಿಂಗಳಿಗೆ 250 ರು. ಪೆಟ್ರೋಲ್‌ ಸಬ್ಸಿಡಿ!

ರಾಷ್ಟ್ರದ ಪ್ರಮುಖ ಸುದ್ದಿಗಳ ಸಮಗ್ರನೋಟ
ಮಧ್ಯ ಏಷ್ಯಾದೇಶಗಳ ಅಧ್ಯಕ್ಷರ ಜೊತೆ ಇಂದು ಮೋದಿ ಸಭೆ
ಐಎಎಸ್ ಅಧಿಕಾರಿ ನಿಯೋಜನೆ ನೀತಿಗೆ ಕಿಡಿ
 

National News Petrol subsidy scheme started in the Jharkhand state one lakh people will get direct benefit Andhra PM Modi Lal Chowk IAS san
Author
Bengaluru, First Published Jan 27, 2022, 4:45 AM IST

ಡುಮ್ಕಾ (ಜ.27): ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಬುಧವಾರದಿಂದ ತಿಂಗಳಿಗೆ 10 ಲೀ. ಪೆಟ್ರೋಲ್‌ಗೆ (Petrol) 250 ರು. ಸಹಾಯ ಧನ ನೀಡುವುದಾಗಿ ಜಾರ್ಖಂಡ್‌ ಮುಖ್ಯಮಂತ್ರಿ (Jharkhand CM )ಹೇಮಂತ್‌ ಸೊರೇನ್‌ (Hemant Soren) ಘೋಷಿಸಿದ್ದಾರೆ. 73ನೇ ಗಣರಾಜ್ಯೋತ್ಸವದ ಅಂಗವಾಗಿ ದ್ವಜಾರೋಹಣ ನೆರವೇರಿಸಿದ ಅವರು, ಸರ್ಕಾರಕ್ಕೆ 2 ವರ್ಷ ತುಂಬಿರುವ ಹಿನ್ನಲೆಯಲ್ಲಿ ಈ ಕೊಡುಗೆ ನೀಡಿದ್ದಾರೆ. ‘ಬಿಪಿಎಲ್‌ (BPL) ಪಡಿತರ ಚೀಟಿ ಹೊಂದಿರುವ ಕುಟುಂಬಗಳು ಈ ಸೌಲಭ್ಯ ಪಡೆದುಕೊಳ್ಳು ಸಿಎಂ ಸಪೋಟ್ಸ್‌ರ್‍ ಆ್ಯಪ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಈಗಾಗಲೇ 73 ಸಾವಿರ ಕಾರ್ಡ್‌ಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಮತ್ತೆ 13 ಹೊಸ ಜಿಲ್ಲೆ ರಚನೆಗೆ ಆಂಧ್ರಪ್ರದೇಶ ಸಂಪುಟ ಅನುಮೋದನೆ
ಅಮರಾವತಿ:
ಹಾಲಿ ಇರುವ 13 ಜಿಲ್ಲೆಗಳನ್ನು 26ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ (Jagan Mohan Reddy) ನೇತೃತ್ವದ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಕುರಿತ ಗೆಜೆಟ್‌ ಅಧಿಸೂಚನೆಗೆ ರಾಜ್ಯ ಸರ್ಕಾರ ಅಂಗೀಕಾರ ನೀಡಿದ್ದು, 26 ಜಿಲ್ಲೆಗಳ ಪ್ರಕ್ರಿಯೆಯು ತೆಲುಗು ಹೊಸ ವರ್ಷವಾದ ಯುಗಾದಿ ಹಬ್ಬ(ಏಪ್ರಿಲ್‌)ದ ವೇಳೆಗೆ ಪೂರ್ಣಗೊಳ್ಳಲಿದೆ ಎನ್ನಲಾಗಿದೆ. ಅಲ್ಲದೆ ಜಿಲ್ಲೆಗಳನ್ನು 24 ಲೋಕಸಭೆ ಕ್ಷೇತ್ರಗಳನ್ನಾಗಿ ವಿಂಗಡಿಸಲಾಗುತ್ತದೆ. ಹೊಸ ಜಿಲ್ಲೆಗಳಿಗೆ ಸಂಬಂಧಿಸಿದ ಕರಡು ಅಧಿಸೂಚನೆಯನ್ನು ಭೂ ಆಡಳಿತದ ಮುಖ್ಯ ಆಯುಕ್ತ ಬಿಡುಗಡೆ ಮಾಡಲಿದ್ದು, ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪ್ರತ್ಯೇಕವಾಗಿ ಬಿಡುಗಡೆ ಮಾಡಲಿದ್ದಾರೆ.
ಮಧ್ಯ ಏಷ್ಯಾದೇಶಗಳ ಅಧ್ಯಕ್ಷರ ಜೊತೆ ಇಂದು ಪ್ರಧಾನಿ ಮೋದಿ ಸಭೆ
ನವದೆಹಲಿ:
ಮಧ್ಯಏಷ್ಯಾ ರಾಷ್ಟ್ರಗಳ ಅಧ್ಯಕ್ಷರೊಂದಿಗೆ ಗುರುವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ವಚ್ರ್ಯುವಲ್‌ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಕಜಕಿಸ್ತಾನ್‌, ಕಿರ್ಗಿಸ್ತಾನ್‌, ತಜಕಿಸ್ತಾನ್‌, ತುರ್ಕಮೇನಿಸ್ತಾನ್‌ ಮತ್ತು ಉಜ್ಬೇಕಿಸ್ತಾನ್‌ ದೇಶಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ. ಇದು ಮಧ್ಯ ಏಷ್ಯಾ ರಾಷ್ಟ್ರಗಳ ನಾಯಕರೊಂದಿಗೆ ಭಾರತ ನಡೆಸುತ್ತಿರುವ ಮೊದಲ ಸಭೆಯಾಗಿದೆ. 2015ರಲ್ಲಿ ಮೋದಿ ಅವರು ಮಧ್ಯ ಏಷ್ಯಾ ರಾಷ್ಟ್ರಗಳಿಗೆ ಐತಿಹಾಸಿಕ ಭೇಟಿ ನೀಡಿದ್ದರು. ಈ 5 ದೇಶಗಳ ಅಧ್ಯಕ್ಷರನ್ನು ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸುವ ಉದ್ದೇಶ ಇತ್ತಾದರೂ ಕೋವಿಡ್‌ ಹಿನ್ನೆಲೆಯಲ್ಲಿ ಪ್ರಸ್ತಾಪ ಕೈಬಿಡಲಾಗಿತ್ತು.

Indian Army Help Kashmir Schools: ಕಾಶ್ಮೀರ ಸರ್ಕಾರಿ ಶಾಲೆಯ ಸುಧಾರಣೆಗೆ ಕಾರಣವಾದ ಭಾರತೀಯ ಸೇನೆ
ಶ್ರೀನಗರದ ಲಾಲ್‌ಚೌಕ್‌ ಮೇಲೆ ಮೊದಲ ಬಾರಿ ತ್ರಿವರ್ಣ ಧ್ವಜ!
ಶ್ರೀನಗರ:
ಗಣರಾಜ್ಯೋತ್ಸದ ಅಂಗವಾಗಿ ಇದೇ ಮೊದಲ ಬಾರಿಗೆ ಜಮ್ಮು ಕಾಶ್ಮೀರದ ಶ್ರೀನಗರದ (Sri Nagar)ಪ್ರಸಿದ್ಧ ಲಾಲ್‌ಚೌಕ್‌ನಲ್ಲಿರುವ ಗಡಿಯಾರ ಗೋಪುರದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ. ಸಾಮಾಜಿಕ ಕಾರ್ಯಕರ್ತರಾದ ಸಾಜಿದ್‌ ಯೂಸುಫ್‌ ಮತ್ತು ಸಾಹಿಲ್‌ ಬಶೀರ್‌ ಭಟ್‌ ಅವರು ಧ್ವಜಾರೋಹಣ ಮಾಡಿದ್ದಾರೆ. ಈ ಹಿಂದೆಲ್ಲೇ ಗಣರಾಜ್ಯೋತ್ಸವ ದಿನ ಇಲ್ಲಿ ಪ್ರತ್ಯೇಕವಾದಿಗಳು ಪಾಕ್‌ ಧ್ವಜ ಹಾರಿಸುತ್ತಿದ್ದರು. ಹೀಗಾಗಿ ಈ ಸ್ಥಳದಲ್ಲಿ ಪ್ರಮುಖ ದಿನಗಳಂದು ನಿಷೇಧಾಜ್ಞೆ ಹೇರಲಾಗುತ್ತಿತ್ತು. ಆದರೆ ಇದೀಗ ಸ್ಥಳೀಯ ಆಡಳಿತದ ಅನುಮತಿ ಪಡೆದೇ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ. ಇಲ್ಲಿ ರಾಷ್ಟ್ರಧ್ವಜ ಹಾರಿದ್ದು ಇದೇ ಮೊದಲು.

UPSC Success Story: 10 ವರ್ಷ ಕಂಪನಿಯಲ್ಲಿ ಕೆಲಸ ಮಾಡಿ, IAS ಅಧಿಕಾರಿಯಾದ ಪ್ರೇಮ್ ಪ್ರಕಾಶ್ ಮೀನಾ
ಹೊಸ ಐಎಎಸ್‌ ಅಧಿಕಾರಿ ನಿಯೋಜನೆ ನೀತಿಗೆ 9 ಬಿಜೆಪಿಯೇತರ ರಾಜ್ಯಆಕ್ಷೇಪ
ನವದೆಹಲಿ:
ಕೇಂದ್ರ ಸರ್ಕಾರ ಐಎಎಸ್‌ (IAS)ಅಧಿಕಾರಿಗಳ ನಿಯೋಜನೆಯ ಅಧಿಕಾರವನ್ನು ಪಡೆಯಲು ಮಂಡಿಸಿದ ಪ್ರಸ್ತಾವನೆಯನ್ನು ಒಡಿಶಾ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಜಾರ್ಖಂಡ್‌ ಸೇರಿದಂತೆ ಬಿಜೆಪಿಯೇತರ ಆಡಳಿತವಿರುವ ಒಂಬತ್ತು ರಾಜ್ಯಗಳು ವಿರೋಧಿಸಿವೆ. ಕೇಂದ್ರವು ರಾಜ್ಯಗಳ ಅಧಿಕಾರಗಳ ಮೇಲೆ ಅತಿಕ್ರಮಣ ಮಾಡುತ್ತಿದ್ದು, ದೇಶದ ಸಂಯುಕ್ತ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಕಿಡಿಕಾರಿವೆ. ಅದೇ ಕೇಂದ್ರ ಸರ್ಕಾರವು ರಾಜ್ಯಗಳು ಅಗತ್ಯ ಪ್ರಮಾಣದಲ್ಲಿ ಕೇಂದ್ರ ಆಡಳಿತದ ಸೇವೆಗಳಿಗೆ ಐಎಸ್‌ಎಸ್‌ ಅಧಿಕಾರಿಗಳನ್ನು ನಿಯೋಜಿಸುತ್ತಿಲ್ಲ ಎಂದು ಆರೋಪಿಸಿದೆ.

Follow Us:
Download App:
  • android
  • ios