Indian Army Help Kashmir Schools: ಕಾಶ್ಮೀರ ಸರ್ಕಾರಿ ಶಾಲೆಯ ಸುಧಾರಣೆಗೆ ಕಾರಣವಾದ ಭಾರತೀಯ ಸೇನೆ
*ಪೂಂಚ್ ಜಿಲ್ಲೆಯ ಮೇಂಧರ್ ಸೆಕ್ಟರ್‌ನ ಸರ್ಕಾರಿ ಶಾಲೆಯಲ್ಲಿ ಸೇನೆಯಿಂದ ಭಾರೀ ಸುಧಾರಣೆ
*ಸೇನೆಯ ನೆರವಿನಿಂದ ಈ ಸರ್ಕಾರಿ ಶಾಲೆ ಗುಣಮಟ್ಟದಲ್ಲಿ ಹೆಚ್ಚಳವಾಗಿ ಎನ್ನುತ್ತಿರುವ ಅಧಿಕಾರಿಗಳು
*ಲೈನ್ ಆಫ್ ಕಂಟ್ರೋಲ್ ಬಳಿ ಇರುವ ಶಾಲೆಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ
ಜಮ್ಮು-ಕಾಶ್ಮೀರ(ಜ.21): ಸೈನಿಕರು ಕೇವಲ ದೇಶ ಕಾಯುವ ಕೆಲಸವೊಂದೇ ಅಲ್ಲ, ಮನಸ್ಸು ಮಾಡಿದ್ರೆ ಅವರು ಏನು ಬೇಕಾದರೂ ಮಾಡಬಹುದು. ಭವಿಷ್ಯದ ಪ್ರಜೆಗಳು ಅಂತ ಕರೆಯಲ್ಪಡುವ ಮಕ್ಕಳಿಗೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಡಬಲ್ಲರು. ಇಂಥದೊಂದು ಅವಿಸ್ಮರಣೀಯ ಸಾಧನೆಗೆ ಸಾಕ್ಷಿಯಾಗಿದ್ದಾರೆ ಭಾರತೀಯ ಯೋಧರು. ಗಡಿ ನಿಯಂತ್ರಣ ರೇಖೆಯಿಂದ (LoC) ಕೇವಲ ಮೂರು ಕಿಲೋಮೀಟರ್ ದೂರದಲ್ಲಿ ಜಮ್ಮು ಮತ್ತು ಕಾಶ್ಮೀರ (Jammu and Kashmir)ದ ಪೂಂಚ್(Poonch) ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಸರ್ಕಾರಿ ಶಾಲೆಯು ಪ್ರಮುಖ ಸುಧಾರಣೆಗಳಿಗೆ ಸೇನಾ ಘಟಕವು ಸಾಕ್ಷಿಯಾಗಿದೆ.
ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಹೊಂದಿರುವ ಈ ಸರ್ಕಾರಿ ಶಾಲೆಯು ಹಲವು ವಿಶೇಷತೆಗಳನ್ನು ಒಳಗೊಂಡಿದ್ದು ಮಕ್ಕಳ ಶ್ರೇಯೋಭಿವೃದ್ದಿಗೆ ಸಹಕಾರಿಯಾಗಿದೆ. ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಮಕ್ಕಳಿಗೆ ಸಹಾಯ ಮಾಡಲು ಮುಂದೆ ಬಂದ ಸ್ಥಳೀಯ ಸೇನಾ ಘಟಕಕ್ಕೆ ಗ್ರಾಮಸ್ಥರು ಧನ್ಯವಾದಗಳನ್ನ ಅರ್ಪಿಸಿದ್ದಾರೆ. ವೈಟ್ ನೈಟ್ ಕಾರ್ಪ್ಸ್ ಆಶ್ರಯದಲ್ಲಿ ಮೆಂಧರ್ ಗನ್ನರ್‌ಗಳ ಪ್ರಯತ್ನದ ಫಲವಾಗಿ ಧರಣದ ಸರ್ಕಾರಿ ಪ್ರೌಢಶಾಲೆಯು ಎಲ್‌ಒಸಿಯಲ್ಲಿದ್ದರೂ, ರಾಷ್ಟ್ರೀಯ ಗುಣಮಟ್ಟವನ್ನು ಹೊಂದಿದೆ. ಕೋವಿಡ್ -19 ಶಾಲೆಯನ್ನು ರಾಷ್ಟ್ರೀಯ ಗುಣಮಟ್ಟಕ್ಕೆ ತರಲಾಗಿದೆ ಎಂದು ಜಮ್ಮು ಮೂಲದ ಆರ್ಮಿ ಪಿಆರ್‌ಒ ಲೆಫ್ಟಿನೆಂಟ್ ಕರ್ನಲ್ ದೇವೆಂದರ್ ಆನಂದ್ (Devender Anand) ತಿಳಿಸಿದ್ದಾರೆ.
ಮೆಂದಾರ್‌ನ ಪ್ರಶಾಂತ ಬೆಟ್ಟಗಳಲ್ಲಿರುವ ಧರಣಾ ಸರ್ಕಾರಿ ಪ್ರೌಢಶಾಲೆಯು ಪೂಂಚ್ ನಗರದ ಗಡಿಯಿಂದ ಕೇವಲ 3 ಕಿ.ಮೀ. ದೂರದಲ್ಲಿದೆ, ಅಲ್ಲಿ ಮಕ್ಕಳು ಸುಲಭವಾಗಿ ಜ್ಞಾನವನ್ನು ಪಡೆಯುತ್ತಿದ್ದು, ಜೀವನದ ಎಲ್ಲಾ ಹಂತಗಳಲ್ಲಿ ಬೆಳವಣಿಗೆ ಕಾಣುತ್ತಿದ್ದಾರೆ.
Surya Namaskara: ಗಣರಾಜ್ಯೋತ್ಸವಕ್ಕೆ ಶಿಕ್ಷಣ ಸಂಸ್ಥೆಗಳಲ್ಲಿ ಸೂರ್ಯ ನಮಸ್ಕಾರಕ್ಕೆ ಯುಜಿಸಿ ಸೂಚನೆ
ಅಂದಹಾಗೇ ಈ ಶಾಲೆಯ ವಿದ್ಯಾರ್ಥಿಗಳು, ದೈನಂದಿನ ದುಡಿಮೆಯನ್ನೇ ನಂಬಿ ಬದುಕುವ ಬಡ ಕುಟುಂಬಗಳಿಂದ ಬಂದವರು. ಇದು ಆಧುನಿಕ ಹೊರಗಿನ ಪ್ರಪಂಚಕ್ಕೆ ಒಡ್ಡಿಕೊಳ್ಳದಂತಹ ವಿದ್ಯಾರ್ಥಿಗಳ ಮೇಲೆ ವ್ಯಾಪಕ ಪರಿಣಾಮಗಳನ್ನು ಬೀರುತ್ತದೆ ಅಂತಾರೆ ಲೆಫ್ಟಿನೆಂಟ್ ಕರ್ನಲ್ ಆನಂದ್. ಸ್ಥಳೀಯ ಸೇನಾ ಘಟಕದ ಮೆಂಧರ್ ಗನ್ನರ್ಸ್ ಅವರು ಸ್ಥಳೀಯರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಯನ್ನು ಗ್ರಹಿಸಿದರು. ಬಳಿಕ ತಕ್ಷಣವೇ ಸಹಾಯ ಮಾಡಲು ಕ್ರಮ ಕೈಗೊಂಡರು.
ನಮ್ಮ ಶಾಲೆಯು ಎಲ್‌ಒಸಿಯ ಉದ್ದಕ್ಕೂ ಇದೆ. ಆದರೆ ಎಲ್ಲಾ ನಗರದ ಶಾಲೆಗಳಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ನಮಗೆ ಒದಗಿಸಲಾಗುತ್ತಿದೆ. ಉದಾಹರಣೆಗೆ ಈಗಾಗಲೇ ಎಲ್ಲಾ ರೀತಿಯ ಅಧ್ಯಯನ ಸಾಮಗ್ರಿಗಳನ್ನು ಒಳಗೊಂಡಿರುವ ಉತ್ತಮ ಗ್ರಂಥಾಲಯವನ್ನು ಹೊಂದಿದ್ದೇವೆ. ಇನ್ನು ನಮ್ಮ ಆಟಗಳನ್ನು ಆಡಲು ವಾಲಿಬಾಲ್ ಕೋರ್ಟ್ ನಿರ್ಮಾಣವಾಗುತ್ತಿದ್ದು, ನಾವೆಲ್ಲರೂ ಎದುರು ನೋಡುತ್ತಿದ್ದೇವೆ ಅಂತಾರೆ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಫಾತಿಮಾ.
ಶಾಲೆಯ (School) ವಾತಾವರಣವನ್ನು ಶಾಂತವಾಗಿ, ವಿಶಾಲವಾಗಿರಿಸಲಾಗಿದೆ. ಉತ್ತಮ ಸೌಕರ್ಯಗಳು ಮತ್ತು ಉಪಯುಕ್ತತೆಗಳೊಂದಿಗೆ ವಿಸ್ತಾರವಾದ ಶಾಲಾ ಕ್ಯಾಂಪಸ್ ಹಚ್ಚ ಹಸಿರಿನಿಂದ ಕೂಡಿದ್ದು ಸ್ವಾಗತಾರ್ಹವಾಗಿದೆ. ಬೋಧನೆ-ಕಲಿಕೆಯ ಪ್ರಕ್ರಿಯೆಯು ಚಿಟ್ಟೆಗಳು ಮತ್ತು ನವಿಲುಗಳ ದೃಶ್ಯದೊಂದಿಗೆ ಶುರುವಾಗುತ್ತದೆ. ವಿದ್ಯಾರ್ಥಿಗಳು ಕ್ಯಾಂಪಸ್ (Campus) ನ ಸುತ್ತಮುತ್ತಲಿನ ತೋಟಗಳಲ್ಲಿ ಸಣ್ಣ ಟ್ರೆಕ್‌ಗಳಲ್ಲಿ ಭಾಗವಹಿಸಬಹುದು. ಮೆಂಧರ್ ಗನ್ನರ್ಸ್ ತಂಡವು, ಶೈಕ್ಷಣಿಕ ವರ್ಣಚಿತ್ರಗಳು ಮತ್ತು ರಾಷ್ಟ್ರೀಯ ಹೆಮ್ಮೆಯ ಸಂಕೇತಗಳೊಂದಿಗೆ ಗೋಡೆಗಳನ್ನು ಚಿತ್ರಿಸುವ ಮೂಲಕ ಶಾಲೆಯ ಅಂದವನ್ನು ಸುಂದರೀಕರಣಗೊಳಿಸಿದ್ದಾರೆ.
IGNOU MACSR: ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಎಂಎ ಕೋರ್ಸ್ ಆರಂಭ
ಗುಡ್ಡಗಾಡು ಪ್ರದೇಶದ ವಿದ್ಯಾರ್ಥಿಗಳು ಗಟ್ಟಿಮುಟ್ಟಾದ ಮತ್ತು ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಸೇನೆಯು ಶಾಲೆಗೆ ವಾಲಿಬಾಲ್ (Volleyball), ಖೋ-ಖೋ (Kho-Kho) ಮತ್ತು ಬ್ಯಾಡ್ಮಿಂಟನ್ (Badmiton) ಅಂಕಣಗಳೊಂದಿಗೆ ಅಗತ್ಯ ಕ್ರೀಡಾ ಸಾಮಗ್ರಿಗಳೊಂದಿಗೆ ಸಹಾಯ ಮಾಡಿದೆ ಎಂದು ಲೆಫ್ಟಿನೆಂಟ್ ಕರ್ನಲ್ ಆನಂದ್ ಹೇಳಿದ್ದಾರೆ. ಸ್ಥಳೀಯ ಜನರಿಗೆ ಮೂಲ ವೈದ್ಯಕೀಯ ಸೌಲಭ್ಯಗಳು ಮತ್ತು ಉಚಿತ ಕೋವಿಡ್ ಲಸಿಕೆಯನ್ನು ಒದಗಿಸುವ ಉದ್ದೇಶದಿಂದ ಸೇನೆಯು ವೈದ್ಯಕೀಯ ಮತ್ತು ಕೋವಿಡ್-19 ಲಸಿಕೆ ಶಿಬಿರವನ್ನು ಸಹ ಆಯೋಜಿಸಿತ್ತು. ಸೇನೆಯು ತನ್ನ ನೀತಿ ಮತ್ತು ಸಂಪ್ರದಾಯವನ್ನು ಉಳಿಸಿಕೊಂಡು, ಜನರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ದೂರದ ಪ್ರದೇಶವನ್ನು ತಲುಪಿದೆ ಅಂತ ಸ್ಮರಿಸುತ್ತಾರೆ ಲೆಫ್ಟಿನೆಂಟ್ ಕರ್ನಲ್ ಆನಂದ್.