ತ್ರಿವರ್ಣಧ್ವಜ ವಿಚಾರದಲ್ಲಿ ಮತ್ತೆ ಅಸಡ್ಡೆ ತೋರಿದ ಫಾರೂಖ್ ಅಬ್ದುಲ್ಲಾ ಪತ್ರಕರ್ತರ ಪ್ರಶ್ನೆಗೆ ಗರಂ ಆದ ಅಬ್ದುಲ್ಲಾ, ತಿರಂಗ ನಿನ್ನ ಮನೆಯಲ್ಲಿ ಹಾರಿಸು ಜಮ್ಮು ಕಾಶ್ಮೀರದಲ್ಲಿ ಫಾರೂಖ್ ಹೇಳಿಕೆ, ಭಾರಿ ವಿವಾದಕ್ಕೆ ವೇದಿಕೆ
ಜಮ್ಮು ಮತ್ತು ಕಾಶ್ಮೀರ(ಜು.06): ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪತ್ರಕರ್ತರ ಪ್ರಶ್ನೆ ಉತ್ತರಿಸುತ್ತಿದ್ದ ಫಾರೂಖ್ ಅಬ್ದುಲ್ಲಾ ತಿರಂಗ ಪ್ರಶ್ನೆಗೆ ಉರಿದು ಬಿದ್ದಿದ್ದಾರೆ. ಇಷ್ಟೇ ಅಲ್ಲ ತಿರಂಗ ನಿನ್ನ ಮನೆಯಲ್ಲಿ ಹಾರಿಸು ಎಂದು ಅಹಂಕಾರದ ಉತ್ತರ ನೀಡಿ ತೆರಳಿದ ಘಟನೆ ನಡೆದಿದೆ.
ಫಾರೂಖ್ ಅಬ್ದುಲ್ಲಾ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫೆರನ್ಸ್ ಪಕ್ಷದ ಮುಖಂಡ ಅಬ್ದುಲ್ಲಾ ಮತ್ತೆ ರಾಷ್ಟ್ರ ಧ್ವಜ ಹಾಗೂ ಭಾರತಕ್ಕೆ ಅವಮಾನ ಮಾಡಿದ್ದಾರೆ ಅನ್ನೋ ಆಕ್ರೋಶ ವ್ಯಕ್ತವಾಗಿದೆ.
ಹರ್ ಘರ್ ಮೇ ತಿರಂಗ ಅಂದೋಲನಕ್ಕೆ ನಿಮ್ಮ ಅಭಿಪ್ರಾಯವೇನು ಎಂದು ಪತ್ರಕರ್ತರು ಪ್ರಶ್ನೆ ಕೇಳಿದ್ದಾರೆ. ಆದರೆ ಈ ಪ್ರಶ್ನೆ ಫಾರೂಖ್ ಆಕ್ರೋಶಕ್ಕೆ ಕಾರಣವಾಗಿದೆ. ಕಾರು ಹತ್ತಲು ಹೋದ ಪಾರೂಖ್ ಅಬ್ದುಲ್ಲಾ ತಿರುಗಿ ತಿರಂಗ ನಿನ್ನ ಮನೆಯಲ್ಲಿ ಹಾರಿಸು ಎಂಬ ಉತ್ತರ ನೀಡಿದ್ದಾರೆ.
Jammu and Kashmir ಪಾಕ್ ಜೊತೆ ಮಾತುಕತೆ ನಡೆಸದೆ ಕಾಶ್ಮೀರದಲ್ಲಿ ಶಾಂತಿ ಸಾಧ್ಯವಿಲ್ಲ, ಫಾರೂಖ್ ಅಬ್ದುಲ್ಲಾ!
ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಆಗಮಿಸುತ್ತಿದ್ದಾರೆ. ಹೀಗಾಗಿ ಅವರನ್ನು ಸ್ವಾಗತಿಸಿದ ಬಳಿಕ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಎಲ್ಲಾ ಮಾಹಿತಿಗಳನ್ನು ಹಂಚಿಕೊಳ್ಳುತ್ತೇವೆ ಎಂದು ಪಾರೂಖ್ ಅಬ್ದುಲ್ಲಾ ಮಾಧ್ಯಮದ ಜೊತೆಗಿನ ಮಾತುಕತೆಯಲ್ಲಿ ಹೇಳಿದ್ದಾರೆ. ಇದೇ ವೇಳೆ ಪ್ರತಿಯೊಬ್ಬರ ಮನೆಯಲ್ಲಿ ತ್ರಿವರ್ಣ ಧ್ವಜ ಅಭಿಯಾನದ ಕುರಿತು ಪ್ರಶ್ನೆ ಕೇಳಿದಾಗ ಫಾರೂಖ್ ಗರಂ ಆಗಿದ್ದಾರೆ. ಅದನ್ನು(ತಿರಂಗ) ನಿಮ್ಮ ಮನೆಯಲ್ಲೇ ಹಾರಿಸು ಎಂದು ಉಡಾಫೆ ಉತ್ತರ ನೀಡಿದ್ದಾರೆ.
ಫಾರೂಖ್ ಅಬ್ದುಲ್ಲಾ ತ್ರಿವರ್ಣ ಧ್ವಜಕ್ಕೆ ಭಾರತಕ್ಕೆ ಅಪಮಾನ ಮಾಡಿದ್ದಾರೆ ಅನ್ನೋ ಆಕ್ರೋಶಗಳು ವ್ಯಕ್ತವಾಗಿದೆ. 75ನೇ ಅಜಾದಿಕಾ ಅಮೃತ ಮಹೋತ್ಸವ ಆಚರಣೆಯಲ್ಲಿರುವ ಭಾರತ ಪ್ರತಿಯೊಬ್ಬರ ಮನೆಯಲ್ಲಿ ತಿರಂಗ ಹಾರಿಸುವ ಅಭಿಯಾನ ಆರಂಭಿಸಿದೆ. ಈ ಮೂಲಕ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಪ್ರತಿ ಮನೆಯಲ್ಲೂ ತಿರಂಗ ಹಾರಬೇಕು ಅನ್ನೋದು ಈ ಅಭಿಯಾನದ ಉದ್ದೇಶವಾಗಿದೆ. ಆದರೆ ಈ ಅಭಿಯಾನಕ್ಕೆ ಫಾರೂಖ್ ಆಸಕ್ತಿ ತೋರಿಲ್ಲ.
ಕಾಶ್ಮೀರ ಜನತೆ ಭಾರತಕ್ಕಿಂತ ಚೀನಾ ಆಳ್ವಿಕೆ ಬಯಸುತ್ತಾರೆ: ಫಾರೂಖ್ ಅಬ್ದುಲ್ಲಾ !
ಭಾರತ ತ್ರಿವರ್ಣ ಧ್ವಜ ವಿಚಾರದಲ್ಲಿ ಫಾರೂಕ್ ಅಬ್ದುಲ್ಲಾ ಅಧಿಕಾರದಲ್ಲಿರುವಾಗಲು ಹೆಚ್ಚಿನ ಆಸಕ್ತಿ ತೋರಿರಲಿಲ್ಲ. ಲಾಲ್ ಚೌಕ್‌ನಲ್ಲಿ ಬಿಜೆಪಿ ನಾಯಕರು ತ್ರಿವರ್ಣ ಧ್ವಜ ಹಾರಿಸಲು ಹರಸಾಹಸ ಪಟ್ಟಿದ್ದ ಘಟನೆ ಇದೀಗ ಇತಿಹಾಸ. ಫಾರೂಖ್ ಅಬ್ದುಲ್ಲಾ ಸಿಎಂ ಆಗಿದ್ದಾಗಲೂ ಕಾಶ್ಮೀರದಲ್ಲಿ ತಿರಂಗ ಹಾರಿದ ಉದಾಹರಣೆಗಳು ತೀರಾ ವಿರಳ. 2017ರಲ್ಲಿ ಫಾರೂಖ್ ಅಬ್ದುಲ್ಲಾ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ತಿರಂಗ ಹಾರಿಸುವ ಬಿಜೆಪಿ ಕನಸು ಪಕ್ಕಕ್ಕೆ ಇಡಲಿ ಮೊದಲು ಲಾಲ್ ಚೌಕ್‌ನಲ್ಲಿ ಹಾರಿಸಲಿ ಎಂದಿದ್ದರು. ಆದರೆ ಇದೀಗ ಅದೇ ಲಾಲ್‌ಚೌಕ್‌ನಲ್ಲಿ ತಿರಂಗ ಹಾರಾಡುತ್ತಿದೆ.
