Asianet Suvarna News Asianet Suvarna News

ನರೋಡಾ ಗಲಭೆ, ಬಿಜೆಪಿ ಮಾಜಿ ಶಾಸಕಿ ಮಾಯಾ ಕೊಡ್ನಾನಿ ಸೇರಿದಂತೆ 68 ಮಂದಿ ಖುಲಾಸೆ!

ಮಹತ್ವದ ಬೆಳವಣಿಗೆಯಲ್ಲಿ 2002ರ ನರೋಡಾ ಗಲಭೆ ಕೇಸ್‌ನಲ್ಲಿ ಬಿಜೆಪಿ ಮಾಜಿ ಶಾಸಕಿ ಮಾಯಾ ಕೊಡ್ನಾನಿ ಸೇರಿದಂತೆ 68 ಮಂದಿಯನ್ನು ಗುಜರಾತ್‌ ಕೋರ್ಟ್‌ ಗುರುವಾರ ಖುಲಾಸೆಗೊಳಿಸಿದೆ.
 

Naroda Gam roit case Ex BJP MLA Maya Kodnani among 68 accused acquitted san
Author
First Published Apr 20, 2023, 6:51 PM IST

ಅಹಮದಾಬಾದ್‌ (ಏ.20): ದೇಶದ ಗಮನಸೆಳೆದಿದ್ದ, 11 ಜನ ಮುಸ್ಲಿಮರ ಸಾವಿಗೆ ಕಾರಣವಾಗಿದ್ದ 2002ರ ನರೋಡಾ ಕೋಮುಗಲಭೆ ಕೇಸ್‌ನಲ್ಲಿ ಬಿಜೆಪಿ ಮಾಜಿ ಶಾಸಕಿ ಮಾಯಾ ಕೊಡ್ನಾನಿ, ಭಜರಂಗದಳದ ಮಾಜಿ ನಾಯಕ ಬಾಬು ಭಜರಂಗಿ ಸೇರಿದಂತೆ 68 ಮಂದಿಯನ್ನು ಗುಜರಾತ್‌ನ ಅಹಮದಾಬಾದ್‌ನ ವಿಶೇಷ ಕೋರ್ಟ್‌ ಗುರುವಾರ ಖುಲಾಸೆಗೊಳಿಸಿದೆ. ಪ್ರಕರಣದಲ್ಲಿ ಒಟ್ಟು 86 ಮಂದಿಯನ್ನು ಆರೋಪಿಗಳು ಎಂದು ಹೇಳಲಾಗಿತ್ತು. ವಿಚಾರಣೆಯ ಅವಧಿಯಲ್ಲಿ ಇದರಲ್ಲಿ 18 ಮಂದಿ ಸಾವು ಕಂಡಿದ್ದಾರೆ. ಆರೋಪಿಗಳ ವಿರುದ್ಧ ಭಾರೀಯ ದಂಡ ಸಂಹಿತೆ 302 (ಕೊಲೆ), 307 (ಕೊಲೆ ಯತ್ನ) 142 (ಕಾನೂನಿನ ವಿರುದ್ಧವಾಗಿ ಗುಂಪುಗೂಡುವಿಕೆ), 147 (ಗಲಭೆ), 148 (ಮಾರಾಕಾಸ್ತ್ರಗಳನ್ನು ಬಳಸಿಕೊಮಡು ಗಲಭೆ), 120 (ಬಿ) (ಕ್ರಿಮಿಯಲ್‌ ಪಿತೂರಿ) ಮತ್ತು 153 (ಗಲಭೆಗೆ ಪ್ರೇರಣೆ) ಅಡಿಯಲ್ಲಿ ಕೇಸ್‌ ದಾಖಲು ಮಾಡಲಾಗಿತ್ತು. ಅಹಮದಾಬಾದ್ ನಗರದ ನರೋಡಾ ಗಾಮ್ ಪ್ರದೇಶದಲ್ಲಿ ನಡೆದ ಗಲಭೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ 11 ಜನರು ಸಾವನ್ನಪ್ಪಿದರು.  ಒಂದು ದಿನದ ಹಿಂದೆ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿರುವುದನ್ನು ಪ್ರತಿಭಟಿಸಿ ಬಂದ್‌ಗೆ ಕರೆ ನೀಡಲಾಗಿತ್ತು. ಗೋಧ್ರಾ ಹತ್ಯಾಕಾಂಡದಲ್ಲಿ ಅಯೋಧ್ಯೆಯಿಂದ ವಾಪಾಸ್‌ ಬರುತ್ತಿದ್ದ 58 ಕರಸೇವಕರನ್ನು ಜೀವಂತವಾಗಿ ಸುಟ್ಟುಹಾಕಲಾಗಿತ್ತು.

ಗಲಭೆಗಳ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) 2008 ರಲ್ಲಿ ನರೋಡಾ ಪಾಟಿಯಾ ಮತ್ತು ನರೋಡಾ ಗಾಮ್ ಗಲಭೆ ಪ್ರಕರಣಗಳಲ್ಲಿ ಮಾಯಾ ಕೊಡ್ನಾನಿ ಅವರನ್ನು ಆರೋಪಿಯನ್ನಾಗಿ ಮಾಡಿತ್ತು. ಆಗಸ್ಟ್ 2012 ರಲ್ಲಿ, ವಿಶೇಷ ಎಸ್‌ಐಟಿ ನ್ಯಾಯಾಲಯವು ನರೋಡಾ ಪಾಟಿಯಾ ಪ್ರಕರಣದಲ್ಲಿ ಆಕೆಯ ಪಾತ್ರಕ್ಕಾಗಿ 28 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು.

 

ನರೋಡಾ ಹತ್ಯಾಕಾಂಡ: ಮಾಯಾ ಕೋಡ್ನಾನಿ ನಿರ್ದೋಷಿ ಎಂದು ಕೋರ್ಟ್ ತೀರ್ಪು

ಆದಾಗ್ಯೂ, ಗುಜರಾತ್ ಹೈಕೋರ್ಟ್, ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ 2018 ರ ಏಪ್ರಿಲ್‌ನಲ್ಲಿ ಮಾಜಿ ಬಿಜೆಪಿ ಸಚಿವೆಯನ್ನು ಖುಲಾಸೆಗೊಳಿಸಿತು. ಸೆಪ್ಟೆಂಬರ್ 2017 ರಲ್ಲಿ, ಹಿರಿಯ ಬಿಜೆಪಿ ನಾಯಕ (ಈಗ ಕೇಂದ್ರ ಗೃಹ ಸಚಿವ) ಅಮಿತ್ ಶಾ ಅವರು ಮಾಯಾ ಕೊಡ್ನಾನಿ ಅವರ ಪರ ಸಾಕ್ಷಿಯಾಗಿ ಹಾಜರಾಗಿದ್ದರು, ನಂತರ ಅವರು ತಮ್ಮ ಅಲಿಬಿಯನ್ನು ಸಾಬೀತುಪಡಿಸಲು ನ್ಯಾಯಾಲಯಕ್ಕೆ ಸಮನ್ಸ್ ನೀಡುವಂತೆ ಮನವಿ ಮಾಡಿದ್ದರು.

2002 ನರೋಡಾ ಗಾಮ್ ನರಮೇಧ: 6 ತಿಂಗಳಿನೊಳಗೆ ತನಿಖೆ ಪೂರ್ತಿಗೊಳಿಸುವಂತೆ ಸು.ಕೋ ಆದೇಶ

Follow Us:
Download App:
  • android
  • ios