ನವದೆಹಲಿ (ಸೆ.19): 2002 ಗುಜರಾತ್ ಹತ್ಯಾಕಾಂಡ ಸಂದರ್ಭದಲ್ಲಿ ನಡೆದ ನರೋಡಾ ಗಾಮ್ ನರಮೇಧ ಪ್ರಕರಣದ ತನಿಖೆಯನ್ನು ಆರು ತಿಂಗಳಿನೊಳಗೆ ಪೂರ್ಣಗೊಳಿಸುವಂತೆ ಇಂದು ಸುಪ್ರೀಮ್ ಕೋರ್ಟ್ ಸ್ಥಳೀಯ ನ್ಯಾಯಾಲಕ್ಕೆ ಆದೇಶಿಸಿದೆ.

ನರೋಡಾ ಗಾಮ್ ನರಮೇಧ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಕ್ಷ್ಯ ನಾಶ ಮಾಡಿದ ಆರೋಪದಲ್ಲಿ ಮಾಜಿ ಪೊಲೀಸ್ ಅಧಿಕಾರಿ ರಾಹುಲ್ ಶರ್ಮಾ ಹಾಗೂ ಮಾಜಿ ತನಿಖಾಧಿಕಾರಿ ಪಿ.ಎಲ್.ಮಾಲ್ ಅವರನ್ನು ತನಿಖೆ ನಡೆಸಬೇಕೆಮದು ಕೊರಿ ಆರೋಪಿಯೊಬ್ಬರು ದಾವೆ ಹೂಡಿದ್ದರು. ಆದರೆ ಪ್ರಕರಣವನ್ನು ಆಲಿಸುತ್ತಿರುವ ಅಹಮದಾಬಾದ್ ವಿಶೇಷ ನ್ಯಾಯಾಲಯವು ಜೂನ್ 2015ರಲ್ಲಿ ಆದೇಶವನ್ನು ತಡೆದಿರಿಸಿತ್ತು.

ಫೆಬ್ರವರಿ 28, 2002ರಂದು ನಡೆದ ನರೋಡಾ ಪಾಟಿಯಾ ದಂಗೆಯಲ್ಲಿ 11 ಮಂದಿ ಮೃತಪಟ್ಟಿದ್ದರು.

(ಸಾಂದರ್ಭಿಕ ಚಿತ್ರ)