ನರೋಡಾ ಹತ್ಯಾಕಾಂಡ: ಮಾಯಾ ಕೋಡ್ನಾನಿ ನಿರ್ದೋಷಿ ಎಂದು ಕೋರ್ಟ್ ತೀರ್ಪು

First Published 20, Apr 2018, 5:23 PM IST
BJP's Maya Kodnani Cleared Of Charges In Worst Massacre In 2002 Riots
Highlights

ತೀವ್ರ ಕುತೂಹಲ ಮೂಡಿಸಿರುವ 2002ರ ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವೆ ಮಾಯಾ ಕೊಡ್ನಾನಿ ನಿರ್ದೋಷಿಯಾಗಿದ್ದಾರೆ . 

ನವದೆಹಲಿ : ತೀವ್ರ ಕುತೂಹಲ ಮೂಡಿಸಿರುವ 2002ರ ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವೆ ಮಾಯಾ ಕೊಡ್ನಾನಿ ನಿರ್ದೋಷಿಯಾಗಿದ್ದಾರೆ . ನರೋಡಾ ಗಾಮ್ ಹತ್ಯಾಕಾಂಡದಲ್ಲಿ 97ಕ್ಕೂ ಹೆಚ್ಚು ಮುಸ್ಲಿಮರ ಹತ್ಯೆಯಾಗಿದ್ದು, ಹತ್ಯಾಕಾಂಡಕ್ಕೆ ಅಂದಿನ ಗುಜರಾತ್ ರಾಜ್ಯ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಇತರರ ಗುಂಪುಗಳೇ ಹೊಣೆಯೆಂದು ಆರೋಪಿಸಲಾಗಿತ್ತು. 
ಹಿಂಸಾಚಾರ ಪ್ರಕರಣದಲ್ಲಿ ಮಾಜಿ ಬಿಜೆಪಿ ಸಚಿವೆ ಮಾಯಾ ಕೊಡ್ನಾನಿಯವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಇತರೆ 13 ಮಂದಿಗೆ ಸಮನ್ಸ್ ಜಾರಿ ಮಾಡುವಂತೆ ಮಾಯಾ ಅವರು ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡಿದ್ದರು.. ಭಜರಂಗ ದಳದ ಮುಖಂಡ ಬಾಬು ಬಜರಂಗಿ, ಸ್ಥಳೀಯ ಬಿಜೆಪಿ ನಾಯಕರಾದ ಬಿಪಿನ್ ಪಂಚಾಲ್, ಕಿಶನ್ ಕೊರಾನಿ, ಅಶೋಕ್ ಸಿಂಧಿ ಮತ್ತು ರಾಜು ಕುಮಾರ್ ಸೇರಿದಂತೆ ಒಟ್ಟು 82 ಮಂದಿ ವಿಚಾರಣೆ ಎದುರಿಸುತ್ತಿದ್ದಾರೆ. ಬಾಬು ಭಜರಂಗಿ ಜೀವಾವಧಿ ಶಿಕ್ಷೆಎತ್ತಿ ಹಿಡಿದ ಗುಜರಾತ್ ಕೋರ್ಟ ಇಂದು ​ಮಾಜಿ ಸಚಿವೆ ಮಾಯಾ ಕೊಡ್ನಾನಿ ನಿರ್ದೋಷಿ ಎಂದು ತೀರ್ಪು ನೀಡಿದೆ. 
 

loader