Asianet Suvarna News Asianet Suvarna News

Modi In Kerala: 700 ಕೋಟಿ ವೆಚ್ಚದ ಕೊಚ್ಚಿ ಮೆಟ್ರೋ ರೈಲು ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ

ಕೊಚ್ಚಿ ಮೆಟ್ರೋ ರೈಲು ಯೋಜನೆಯ ಮೊದಲ ಹಂತದ ವಿಸ್ತರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಇದರೊಂದಿಗೆ ಎರಡನೇ ಹಂತದ ಕಾಮಗಾರಿಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರಧಾನಿ ಕೊಚ್ಚಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಈ ವೇಳೆ ಮಾತನಾಡಲಿದ್ದಾರೆ.

Narendra Modi will inaugurate the expansion of the first phase of Kochi Metro Rail Project has cost 700 crores sam
Author
First Published Sep 1, 2022, 3:01 PM IST

ಕೊಚ್ಚಿ (ಸೆ.1): ಕೊಚ್ಚಿ ಮೆಟ್ರೋ ರೈಲು ಯೋಜನೆಯ ಮೊದಲ ಹಂತದ ವಿಸ್ತರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಲಿದ್ದಾರೆ. ಇದನ್ನು ಪೆಟ್ಟಾದಿಂದ ಎಸ್‌ಎನ್ ಜಂಕ್ಷನ್‌ವರೆಗೆ ನಿರ್ಮಿಸಲಾಗಿದೆ. ಈ ವಿಸ್ತರಣೆಗಾಗಿ ಈವರೆಗೂ 700 ಕೋಟಿಗೂ ಹೆಚ್ಚು ವೆಚ್ಚವಾಗಿದೆ. ಕೊಚ್ಚಿ ಮೆಟ್ರೋ ರೈಲು ಯೋಜನೆಯ ಸುಮಾರು 55% ನಷ್ಟು ಶಕ್ತಿಯ ಅಗತ್ಯಗಳನ್ನು ಸೌರಶಕ್ತಿಯಿಂದ ಪೂರೈಸಲಾಗುತ್ತದೆ. ಜೆಎಲ್‌ಎನ್ ಸ್ಟೇಡಿಯಂನಿಂದ ಇನ್ಫೋಪಾರ್ಕ್‌ವರೆಗೆ ಎರಡನೇ ಹಂತದ ಕೊಚ್ಚಿ ಮೆಟ್ರೋ ರೈಲು ಯೋಜನೆಗೆ ಪ್ರಧಾನಿ ಇದೇ ವೇಳೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರ ಉದ್ದ 11.2 ಕಿಲೋಮೀಟರ್. ಇದು 11 ನಿಲ್ದಾಣಗಳನ್ನು ಒಳಗೊಂಡಿದೆ. ಈ ಯೋಜನೆಯ ಒಟ್ಟು ಅಂದಾಜು ವೆಚ್ಚ ಸುಮಾರು 1,950 ಕೋಟಿ ರೂಪಾಯಿ ಆಗಿದೆ. ಮೆಟ್ರೋ ರೈಲು ಯೋಜನೆಯು ಮೋದಿ ಸರ್ಕಾರವು ಪ್ರಾರಂಭಿಸಿದ ಮೆಟ್ರೋ ಕ್ರಾಂತಿಯ ಒಂದು ಭಾಗವಾಗಿದೆ. 2014ರಲ್ಲಿ ದೇಶದ ಐದು ನಗರಗಳು ಮಾತ್ರ ಮೆಟ್ರೊ ಜಾಲವನ್ನು ಹೊಂದಿದ್ದವು. ಇಂದು 20 ನಗರಗಳು ಮೆಟ್ರೋ ಜಾಲವನ್ನು ಹೊಂದಿವೆ. 2014ರಲ್ಲಿ ದೇಶದ ಒಟ್ಟು ಮೆಟ್ರೋ ಜಾಲದ ಉದ್ದ ಕೇವಲ 248 ಕಿ.ಮೀ. ಇಂದು ಮೆಟ್ರೋ ಜಾಲದ ಉದ್ದ 775 ಕಿ.ಮೀ.ಗೆ ಏರಿಕೆಯಾಗಿದೆ. ಇದರೊಂದಿಗೆ 1000 ಕಿ.ಮೀ ಉದ್ದದ ಮೆಟ್ರೋ ಜಾಲ ನಿರ್ಮಾಣ ಕಾರ್ಯ ಕೂಡ ನಡೆಯುತ್ತಿದೆ.

ಪ್ರಧಾನಿ ಮೋದಿ ಸಮಾವೇಶ:  ಪ್ರಧಾನಿ ಕೊಚ್ಚಿಯಲ್ಲಿ ಸಾರ್ವಜನಿಕ ಸಭೆಯನ್ನು(public meeting in Kochi)  ಉದ್ದೇಶಿಸಿ ಮಾತನಾಡಲಿದ್ದಾರೆ. ಕಾಲಡಿ ಗ್ರಾಮದಲ್ಲಿರುವ ಆದಿಶಂಕರ ಜನ್ಮಭೂಮಿ ಕ್ಷೇತ್ರವನ್ನು( Adi Shankar Janmabhoomi ) ನೋಡಲು ಕೂಡ ತೆರಳಲಿದ್ದಾರೆ. ಸಂಜೆ ಕೊಚ್ಚಿಯಲ್ಲಿ ಮೆಟ್ರೋ  (Kochi Metro Rail Project) ಮತ್ತು ರೈಲಿಗೆ ಸಂಬಂಧಿಸಿದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ. ಪ್ರಧಾನಮಂತ್ರಿ ಅವರು ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಅನ್ನು ಶುಕ್ರವಾರ ನೌಕಾಪಡೆಗೆ ನಿಯೋಜನೆ ಮಾಡಲಿದ್ದಾರೆ. ರಕ್ಷಣಾ ವಲಯದಲ್ಲಿ ಸ್ವಾವಲಂಬಿಯಾಗಲು ಭಾರತದ ಪ್ರಯತ್ನಗಳಿಗೆ ಸೆಪ್ಟೆಂಬರ್ 2 ಐತಿಹಾಸಿಕ ದಿನವಾಗಿದೆ ಎಂದು ಪ್ರಧಾನಿ ಮೋದಿ ಈಗಾಗಲೇ ಟ್ವೀಟ್ ಮಾಡಿದ್ದಾರೆ. ಮೊದಲ ಸ್ವದೇಶಿ ವಿಮಾನವಾಹಕ ನೌಕೆ INS ವಿಕ್ರಾಂತ್ ನೌಕಾಪಡೆಗೆ ನಿಯೋಜನೆ ಆಗುವುದರೊಂದಿಗೆ, ಅದೇ ಸಮಯದಲ್ಲಿ, ಹೊಸ ನೌಕಾ ಧ್ವಜವನ್ನು ಸಹ ಅನಾವರಣ ಮಾಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಸಚಿವರು ಮತ್ತು ಇತರ ಉನ್ನತ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ.

Misleading Report: ಭಜನೆ, ಭಕ್ತಿಗೀತೆ ಹಾಡೋದ್ರಿಂದ ಅಪೌಷ್ಟಿಕತೆಯನ್ನು ಕಡಿಮೆ ಮಾಡಬಹುದು ಎಂದು ಪ್ರಧಾನಿ ಮೋದಿ ಹೇಳಿಲ್ಲ!

ಇದಲ್ಲದೇ ಮಧುರೈ ವಿಭಾಗದ ವ್ಯಾಪ್ತಿಯಲ್ಲಿ ಕೇರಳ ರಾಜ್ಯದ ಪುನಲೂರ್-ಕೊಲ್ಲಂ ಬ್ರಾಡ್ ಗೇಜ್ ರೈಲು ಮಾರ್ಗವನ್ನು 76 ಕೋಟಿ ರೂಪಾಯಿ ವೆಚ್ಚದಲ್ಲಿ ವಿದ್ಯುದ್ದೀಕರಿಸಲಾಗಿದೆ. ಪ್ರಧಾನಿ ಮೋದಿಯವರು ಈ ಹೊಸ ವಿದ್ಯುದ್ದೀಕೃತ ರೈಲುಮಾರ್ಗವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಇದಲ್ಲದೇ ಕೊಟ್ಟಾಯಂ-ಎರ್ನಾಕುಲಂ ಮತ್ತು ಕೊಲ್ಲಂ-ಪುನಲೂರ್ ನಡುವೆ ವಿಶೇಷ ರೈಲು ಸೇವೆಗೂ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

PM Modi In Mangaluru: ಪ್ರಧಾನಿ ಮೋದಿ ಸಮಾವೇಶದ ವೇಳೆ ಗೊಂದಲ ಸೃಷ್ಟಿಸುವ ಪ್ರಯತ್ನ, 2 ಕೇಸ್‌ ದಾಖಲು

ಕೊಚ್ಚಿ ಮೆಟ್ರೋ 1 ಯೋಜನೆಯು 27 ಕಿಮೀ ಉದ್ದ ಮತ್ತು 24 ನಿಲ್ದಾಣಗಳನ್ನು ಹೊಂದಿದೆ. ಪ್ರಧಾನಿ ಮೋದಿ ಉದ್ಘಾಟನೆ ಬಳಿಕ ಎರಡೂ ಮಾರ್ಗಗಳಲ್ಲಿ ರೈಲು ಸಂಚಾರ ಆರಂಭವಾಗಲಿದೆ. ಎಸ್‌ಎನ್ ಜಂಕ್ಷನ್ ಮತ್ತು ವಡಕೆಕೋಟಾ ನಿಲ್ದಾಣಗಳು ಪ್ರತಿದಿನ ಒಂದು ಲಕ್ಷ ಪ್ರಯಾಣಿಕರನ್ನು ನಿಭಾಯಿಸುತ್ತವೆ ಎಂದು ಅಂದಾಜಿಸಲಾಗಿದೆ. ಈ ಯೋಜನೆ ಅಲ್ಲದೆ 1059 ಕೋಟಿ ರೂ.ವೆಚ್ಚದಲ್ಲಿ 3 ರೈಲು ನಿಲ್ದಾಣಗಳ ಅಭಿವೃದ್ಧಿಗೂ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಅಲ್ಲದೆ, ರೂ.750 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿರುವ ಕುರುಪಂದಾರ-ಕೊಟ್ಟಾಯಂ-ಸಿಂಗವನಂ ವಿಭಾಗದಲ್ಲಿ 27 ಕಿ.ಮೀ ಉದ್ದದ ದ್ವಿಪಥ ಕಾಮಗಾರಿ ಪೂರ್ಣಗೊಂಡಿದೆ. ಅದನ್ನು ಪ್ರಧಾನಿ ಮೋದಿ ಕೂಡ ದೇಶಕ್ಕೆ ಅರ್ಪಿಸಲಿದ್ದಾರೆ.

Follow Us:
Download App:
  • android
  • ios