PM Modi In Mangaluru: ಪ್ರಧಾನಿ ಮೋದಿ ಸಮಾವೇಶದ ವೇಳೆ ಗೊಂದಲ ಸೃಷ್ಟಿಸುವ ಪ್ರಯತ್ನ, 2 ಕೇಸ್‌ ದಾಖಲು!

ಅಂದಾಜು 1 ಲಕ್ಷ ಜನರು ಸೇರುವ ನಿರೀಕ್ಷೆ ಇರುವ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.  ಸೆ. 2 ರಂದು ಮಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದ ವೇಳೆ, ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಸಿದ ಕಾರಣಕ್ಕೆ ಎರಡು ಪ್ರಕರಣವನ್ನು ಮಂಗಳೂರು ಪೊಲೀಸರು ದಾಖಲಿಸಿದ್ದಾರೆ.

Attempt to create confusion during PM Modi mass convention 2 cases registered in Mangaluru san

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ‌ಮಂಗಳೂರು
ಮಂಗಳೂರು (ಆ.31): ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸುವ ಸಾಧ್ಯತೆ ಸಂಬಂಧ ಮಂಗಳೂರು ಕಮೀಷನರೇಟ್‌ ವ್ಯಾಪ್ತಿಯಲ್ಲಿ ಎರಡು ಎಫ್ ಐಆರ್‌ ದಾಖಲಾಗಿದೆ. ಪ್ರಕರಣ ಸಂಬಂಧ ಮಂಗಳೂರು ಕಮಿಷನರ್ ಶಶಿಕುಮಾರ್ ಹೇಳಿಕೆ ನೀಡಿದ್ದಾರೆ. ಫೋಟೋ ಮಾರ್ಪ್ ಮಾಡಿ ಆಕ್ಷೇಪಾರ್ಹ ಹಂಚಿಕೆ, ಮೋದಿ ಕಾರ್ಯಕ್ರಮದಲ್ಲಿ ಗೊಂದಲ ಉಂಟುಮಾಡಲು ಸರ್ಕ್ಯೂಲೇಟ್ ಆಗ್ತಿದ್ದ ಪೋಸ್ಟ್ ಬಗ್ಗೆ ಎರಡು ಪ್ರಕರಣ ದಾಖಲಾಗಿದೆ.  ಕೆಲವು ವಾಟ್ಸಪ್ ಗ್ರೂಪ್ ಗಳಲ್ಲಿ ಗೊಂದಲ ನಿರ್ಮಿಸುವ ಕೆಲಸ ಆಗ್ತಿದೆ.  ಈ ಎಲ್ಲಾ ಗ್ರೂಪ್ ಗಳ ಪ್ರತಿಯೊಂದು ಚಟುವಟಿಕೆಗಳನ್ನು ಮಾನಿಟರ್ ಮಾಡಲಾಗ್ತಿದೆ.  ಎಲ್ಲಿ ಅಪರಾಧ ಅನಿಸುತ್ತೋ ಆಗ ಪ್ರಕರಣ ದಾಖಲಿಸ್ತೇವೆ.  ಅಪರಾಧ ಅನಿಸದೇ ಗೊಂದಲ ಅನಿಸಿದ್ರೆ ಸಿಆರ್ ಪಿಸಿ 107, 110 ಅಡಿಯಲ್ಲಿ ಕಾನೂನು ಕ್ರಮ ಕಗೊಳ್ಳಲಾಗುವುದು. ಲಕ್ಷ ರೂ. ಶೂರಿಟಿ ಬಾಂಡ್ ಪಡೆದು ಅವರಿಂದ ಮುಚ್ಚಳಿಕೆ ಪಡೆದಿದ್ದೇವೆ. ಕೆಲವರನ್ನು ವಶಕ್ಕೆ ಪಡೆಯುವ ಪ್ರಯತ್ನವೂ ಆಗಿದೆ. ಆದರೆ ಕೆಲವರು ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ತಲೆ ಮರೆಸಿಕೊಂಡಿದ್ದಾರೆ. ಇಂಥವರನ್ನ ವಶಕ್ಕೆ ಪಡೆದು ನಾವು ಪ್ರಕರಣ ದಾಖಲಿಸ್ತೇವೆ. ಮೋದಿಯವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗೊಂದಲ ನಿರ್ಮಿಸುವ ಪ್ರಯತ್ನದ ಬಗ್ಗೆ ಕೇಸ್ ದಾಖಲಾಗಿದೆ ಎಂದರು.

ಇದೊಂದು ಸರ್ಕಾರದ ಅಧಿಕೃತ ಕಾರ್ಯಕ್ರಮ: ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ
ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ  (Prime Minister Narendra Modi) ಆಗಮ‌ನ ಹಿನ್ನೆಲೆ ಮಂಗಳೂರಿನಲ್ಲಿ ದ.ಕ‌ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ (dakshina kannada district collector KV Rajendra) ಸುದ್ದಿಗೋಷ್ಠಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಅಧಿಕೃತ ಸರ್ಕಾರಿ ‌ಕಾರ್ಯಕ್ರಮಕ್ಕೆ‌ ಬರುತ್ತಿದ್ದಾರೆ. ಈ ಸಂಬಂಧ ಜಿಲ್ಲಾಡಳಿತ, ರಾಜ್ಯ ಸರ್ಕಾರ, ಎನ್.ಎಂಪಿಎ ನೇತೃತ್ವದಲ್ಲಿ ತಯಾರಿ ಆಗಿದೆ. ಎನ್ಎಂಪಿಎ ಸೇರಿ ಹಲವು ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ‌ನೆರವೇರಿಸಲಿದ್ದಾರೆ. ಕೊಚ್ಚಿನ್ ನಿಂದ ಮಂಗಳೂರಿಗೆ ಆಗಮಿಸಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶದಲ್ಲಿ ‌ಕೇಂದ್ರ ಮತ್ತು ರಾಜ್ಯ ಸರ್ಕಾರದ ಫಲಾನುಭವಿಗಳು ಇರ್ತಾರೆ. ಸುಮಾರು ಒಂದು ‌ಲಕ್ಷಕ್ಕೂ ಅಧಿಕ ಜನರು ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಸೇರ್ತಾರೆ. ಹಲವು ಭದ್ರತೆ ಹಿತದೃಷ್ಟಿಯಿಂದ ಹಲವು ಕ್ರಮಗಳನ್ನು ‌ಕೈಗೊಳ್ಳಲಾಗಿದೆ. ಫಲಾನುಭವಿಗಳನ್ನ ಕರೆ ತರಲು ಸರ್ಕಾರಿ ಬಸ್ ಗಳನ್ನ ಬಳಕೆ ಮಾಡಲಾಗ್ತಿದೆ. ಬಸ್ ಗಳ ಕಾರ್ಯನಿರ್ವಹಣೆ ಹಾಗೂ ಟ್ರಾಫಿಕ್ ನಲ್ಲಿ ಸಮಸ್ಯೆ ಆಗಬಹುದು. ಹೀಗಾಗಿ‌ ಕಮಿಷನರೇಟ್ ವ್ಯಾಪ್ತಿಯಲ್ಲಿ ಈಗಾಗಲೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಆಗಿದೆ. ಅಧಿಕೃತ ಸರ್ಕಾರಿ‌ ಕಾರ್ಯಕ್ರಮವಾದ ಕಾರಣ ಜಿಲ್ಲಾಡಳಿತ ಪೂರ್ಣ ಸಿದ್ದತೆ ಮಾಡಿದೆ ಎಂದಿದ್ದಾರೆ. 

ಮಂಗಳೂರಿನಲ್ಲಿ 3800 ಕೋಟಿ ರೂಪಾಯಿ ಯೋಜನೆ ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ!

ಯಾವುದೇ ಆಯುಧ ಅಥವಾ ಆಕ್ಷೇಪಾರ್ಹ ವಸ್ತುಗಳನ್ನು ಸಮಾವೇಶದ ಸ್ಥಳಕ್ಕೆ ತರಬಾರದು: ಕಮಿಷನರ್
ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮ‌ನ ಹಿನ್ನೆಲೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿಕೆ ನೀಡಿದ್ದಾರೆ. ‌ ಸೆ.2ರಂದು‌ ಮಧ್ಯಾಹ್ನದ ಹೊತ್ತಿಗೆ‌ ಪ್ರಧಾನಿಗಳು ಮಂಗಳೂರಿಗೆ‌ ಬರಲಿದ್ದಾರೆ. ಪ್ರಧಾನಿಯವರ ಚಲನವಲನದ ಎಲ್ಲಾ ಸ್ಥಳಗಳಲ್ಲೂ ಬಿಗಿ ಭದ್ರತೆ ಮಾಡಲಾಗಿದೆ. ಉಳಿದ ವಿಐಪಿಗಳು ಹಾಗೂ ಜನ ಸೇರುವ ಕಾರಣ ಬಂದೋಬಸ್ತ್ ‌ಹೆಚ್ಚಿಸಲಾಗಿದೆ. ಗಣೇಶೋತ್ಸವ ಇರುವ ಕಾರಣ ಆಯೋಜಕರ ಜೊತೆ ಚರ್ಚಿಸಿದ್ದೇವೆ. ಮೋದಿ ಕಾರ್ಯಕ್ರಮ ಮುಗಿದು ಜನ ಹೋದ ಬಳಿಕ ಗಣೇಶ ವಿಸರ್ಜನೆ ಮಾಡಲು ಸೂಚಿಸಿದ್ದೇವೆ.‌ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲೇ ಸಮಾವೇಶ ‌ನಡೆಯುವ ಕಾರಣ ಟ್ರಾಫಿಕ್ ಬದಲಾವಣೆ ಇರುತ್ತೆ. ನಂತೂರು-ಬಿಕರ್ನಕಟ್ಟೆ-ಕುಲಶೇಖರ, ವಾಮಂಜೂರು, ಕೈಕಂಬ, ಪೊರ್ಕೊಡಿ, ಮುಲ್ಕಿ ಭಾಗವಾಗಿ ವಾಹನ ಸಂಚಾರ ಬದಲಾವಣೆ ಮಾಡಲಾಗಿದೆ.

ನಮ್ಮ ಕುಡ್ಲದಲ್ಲಿ ನಮೋ, ಪ್ರಧಾನಿ ಸಮಾವೇಶಕ್ಕೆ 2 ಸಾವಿರ ಬಸ್‌ ವ್ಯವಸ್ಥೆ!

ನಂತೂರಿನಿಂದ ಸುರತ್ಕಲ್ ವರೆಗೆ ವಾಹನ ಸಂಚಾರ ಬಂದ್ ಮಾಡ್ತೇವೆ. ಸಮಾವೇಶಕ್ಕೆ ಬರುವ ವಾಹನಗಳ ನಿಲುಗಡೆಗೆ 11 ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಉಡುಪಿ ಭಾಗದ ಲಾರಿ, ಟ್ಯಾಂಕರ್ ಗಳನ್ನು ಪಡುಬಿದ್ರೆ ಭಾಗದಿಂದಲೇ ಡೈವರ್ಟ್ ಮಾಡ್ತೇವೆ. ಉಳಿದ ವಾಹನಗಳನ್ನು‌ ಮುಲ್ಕಿ ಮೂಲಕ ಸಂಚರಿಸಿ ನಂತೂರಿಗೆ ಬರಲಿ. ಒಟ್ಟು 9 ಕಡೆಗಳಲ್ಲಿ ಟ್ರಾಫಿಕ್ ಡೈವರ್ಟ್ ಮಾಡಲಿದ್ದೇವೆ. ಕೂಳೂರಿನಿಂದ ಕೆಪಿಟಿ ಸರ್ಕಲ್ ವರೆಗಿನ ರಾಷ್ಟ್ರೀಯ ‌ಹೆದ್ದಾರಿ ಝೀರೋ ಟ್ರಾಫಿಕ್ ಮಾಡ್ತೇವೆ.‌ 11 ರಿಂದ 12 ಗಂಟೆಗೆ ಒಳಗಡೆ ಎಲ್ಲರೂ ಸಮಾವೇಶಕ್ಕೆ ಬಂದು ಸೇರಬೇಕು. ಯಾವುದೇ ಆಯುಧ ಅಥವಾ ಆಕ್ಷೇಪಾರ್ಹ ವಸ್ತುಗಳನ್ನು ಸಮಾವೇಶದ ಸ್ಥಳಕ್ಕೆ ತರಬಾರದು. ಮಂಗಳೂರು ‌ಕಮಿಷನರೇಟ್ ಹಾಗೂ ರಾಜ್ಯದ ವಿವಿಧ ಭಾಗದ ಪೊಲೀಸ್ ‌ನೇಮಕವಾಗಿದೆ ಎಂದರು.

Latest Videos
Follow Us:
Download App:
  • android
  • ios