Asianet Suvarna News Asianet Suvarna News

ವನ್ಯಜೀವಿಗಳನ್ನು ಸಂರಕ್ಷಿಸುವ Modi Government ಪ್ರಯತ್ನಗಳು ಹೇಗೆ ಉತ್ತಮ ಫಲಿತಾಂಶಗಳನ್ನು ನೀಡಿವೆ ನೋಡಿ..

ಭಾರತದ ಪರಿಸರ ಮತ್ತು ಅರಣ್ಯ ನೀತಿಗಳು ಮತ್ತು ಅದರ ಸರೋವರಗಳು ಮತ್ತು ನದಿಗಳು, ಅದರ ಜೀವವೈವಿಧ್ಯತೆ, ಅರಣ್ಯಗಳು ಮತ್ತು ವನ್ಯಜೀವಿಗಳ ಸಂರಕ್ಷಣೆ, ಪ್ರಾಣಿಗಳ ಕಲ್ಯಾಣವನ್ನು ಖಾತ್ರಿಪಡಿಸುವ ದೇಶದ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಅನುಷ್ಠಾನವನ್ನು ಯೋಜಿಸಲು, ಉತ್ತೇಜಿಸಲು, ಸಮನ್ವಯಗೊಳಿಸಲು ಮತ್ತು ಮೇಲ್ವಿಚಾರಣೆ ಮಾಡಲು ಹಾಗೂ ಮಾಲಿನ್ಯದ ತಡೆಗಟ್ಟುವಿಕೆ ಮತ್ತು ತಗ್ಗಿಸುವಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರವು ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದೆ.

narendra modi birthday here is how efforts of modi government to conserve wildlife have brought great results ash
Author
First Published Sep 17, 2022, 1:00 PM IST

ಪ್ರಧಾನಿ ಮೋದಿ ಹಟ್ಟುಹಬ್ಬವಾದ ಇಂದು, ಸೆಪ್ಟೆಂಬರ್ 17, 2022 ರಂದು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 8 ಚಿರತೆಗಳನ್ನು ಸ್ವಾಗತಿಸಲಾಗಿದೆ. ಈ ಮೂಲಕ 1950 ರ ದಶಕದ ಆರಂಭದಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿ ಎಂದು ಚೀತಾವನ್ನು ಘೋಷಿಸಿದ 70 ವರ್ಷಗಳ ಅವಧಿಯ ನಂತರ ಭೂಮಿ ಮೇಲೆ ವೇಗವಾಗಿ ಓಡುವ ಪ್ರಾಣಿ ಮತ್ತೊಮ್ಮೆ ಭಾರತೀಯ ಕಾಡಿನಲ್ಲಿ ಸಂಚರಿಸುತ್ತದೆ. ಇನ್ನು, ವನ್ಯಜೀವಿಗಳನ್ನು ಸಂರಕ್ಷಿಸಲು ಪ್ರಧಾನಿ ಮೋದಿ ಸರ್ಕಾರ ನಾನಾ ಪ್ರಯತ್ನಗಳನ್ನು ಮಾಡಿದ್ದು, ಸಾಕಷ್ಟು ಯಶಸ್ವಿಯೂ ಆಗಿದೆ.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ದೃಷ್ಟಿಯು ಭಾರತದ ನಾಗರಿಕರಿಗೆ ಜನರ ಸಹಭಾಗಿತ್ವದೊಂದಿಗೆ ಸ್ವಚ್ಛ, ಹಸಿರು ಮತ್ತು ಆರೋಗ್ಯಕರ ವಾತಾವರಣವನ್ನು ಒದಗಿಸುವುದು ಮತ್ತು ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ಬಳಕೆಯ ಮೂಲಕ ಉನ್ನತ ಹಾಗೂ ಅಂತರ್ಗತ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುವುದು.


ಇನ್ನು, ಭಾರತದ ಪರಿಸರ ಮತ್ತು ಅರಣ್ಯ ನೀತಿಗಳು ಮತ್ತು ಅದರ ಸರೋವರಗಳು ಮತ್ತು ನದಿಗಳು, ಅದರ ಜೀವವೈವಿಧ್ಯತೆ, ಅರಣ್ಯಗಳು ಮತ್ತು ವನ್ಯಜೀವಿಗಳ ಸಂರಕ್ಷಣೆ, ಪ್ರಾಣಿಗಳ ಕಲ್ಯಾಣವನ್ನು ಖಾತ್ರಿಪಡಿಸುವ ದೇಶದ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಅನುಷ್ಠಾನವನ್ನು ಯೋಜಿಸಲು, ಉತ್ತೇಜಿಸಲು, ಸಮನ್ವಯಗೊಳಿಸಲು ಮತ್ತು ಮೇಲ್ವಿಚಾರಣೆ ಮಾಡಲು ಹಾಗೂ ಮಾಲಿನ್ಯದ ತಡೆಗಟ್ಟುವಿಕೆ ಮತ್ತು ತಗ್ಗಿಸುವಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರವು ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದೆ. ಇದರೊಂದಿಗೆ, ವನ್ಯಜೀವಿಗಳನ್ನು ಸಂರಕ್ಷಿಸಲು ಮೋದಿ ಸರ್ಕಾರ ಮಾಡಿದ ಕೆಲವು ಸಾಧನೆಗಳನ್ನು ನೋಡೋಣ..

ನಮೀಬಿಯಾದಿಂದ ತಂದ ಚೀತಾಗಳನ್ನು ಕುನೋ ಉದ್ಯಾನವನಕ್ಕೆ ಬಿಟ್ಟ ಪ್ರಧಾನಿ

1) ಕಳೆದ ನಾಲ್ಕು ವರ್ಷಗಳಲ್ಲಿ ಅರಣ್ಯ ಮತ್ತು ಮರಗಳ ವ್ಯಾಪ್ತಿಯು 16,000 ಚದರ ಕಿ.ಮೀ.ಗಳಷ್ಟು ಹೆಚ್ಚಾಗಿದೆ. ಅರಣ್ಯ ಪ್ರದೇಶವು ನಿರಂತರವಾಗಿ ಹೆಚ್ಚುತ್ತಿರುವ ವಿಶ್ವದ ಕೆಲವೇ ದೇಶಗಳಲ್ಲಿ ಭಾರತವೂ ಒಂದು.

2) ಸಮುದಾಯ ಮೀಸಲು ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. 2014 ರಲ್ಲಿ ಕೇವಲ 43 ರಿಂದ ಅವರ ಸಂಖ್ಯೆ 2019 ರಲ್ಲಿ 100 ಕ್ಕಿಂತ ಹೆಚ್ಚಿದೆ.

3) ಭಾರತವು ತನ್ನ 18 ರಾಜ್ಯಗಳಲ್ಲಿ ಸರಿಸುಮಾರು 75,000 ಚದರ ಕಿ.ಮೀ ಪ್ರದೇಶವನ್ನು ಒಳಗೊಂಡಿರುವ 52 ಹುಲಿ ಸಂರಕ್ಷಿತ ಪ್ರದೇಶಗಳಿಗೆ ನೆಲೆಯಾಗಿದೆ ಮತ್ತು ಜಾಗತಿಕ ಮಟ್ಟದಲ್ಲಿ ಹುಲಿಯ ಸರಿಸುಮಾರು 75% ಜನಸಂಖ್ಯೆಯನ್ನು ಹೊಂದಿದೆ. ಭಾರತವು 2022 ರೊಳಗೆ ಹುಲಿ ಸಂಖ್ಯೆ ದ್ವಿಗುಣಗೊಳಿಸುವ ಗುರಿಯನ್ನು ಇಟ್ಟುಕೊಂಡಿತ್ತಾದರೂ, 4 ವರ್ಷಗಳ ಮುನ್ನವೇ ಅಂದರೆ, 2018 ರಲ್ಲೇ ಇದನ್ನು ಸಾಧಿಸಿದೆ. ಇನ್ನು, ಭಾರತದಲ್ಲಿ ಹುಲಿ ಜನಸಂಖ್ಯೆಯು 2014 ರಲ್ಲಿ 2,226 ರಿಂದ 2018 ರಲ್ಲಿ 2,967 ಕ್ಕೆ ಏರಿದೆ.

4) ಹುಲಿ ಸಂರಕ್ಷಣೆಗಾಗಿ ದೇಶದ ಬಜೆಟ್ ಹಂಚಿಕೆ ಸಹ 2014 ರಲ್ಲಿ 185 ಕೋಟಿ ರೂಪಾಯಿಗಳಿಂದ 2022 ರಲ್ಲಿ 300 ಕೋಟಿ ರೂಪಾಯಿಗಳಿಗೆ ಹೆಚ್ಚಾಗಿದೆ.

PM Modi Birthday ಸೆ.17ಕ್ಕೆ ದೇಶವನ್ನುದ್ದೇಶಿ ಪ್ರಧಾನಿ ಮೋದಿ ಭಾಷಣ, ನಾಲ್ಕು ಕಾರ್ಯಕ್ರಮ!

5) ಏಷ್ಯಾಟಿಕ್ ಸಿಂಹಗಳ ಜನಸಂಖ್ಯೆಯು 2015 ರಲ್ಲಿ 523 ಸಿಂಹಗಳಿಂದ ಈಗ ಶೇಕಡಾ 28.87 ರಷ್ಟು ಸ್ಥಿರವಾದ ಹೆಚ್ಚಳವನ್ನು ತೋರಿಸಿದ್ದು, ಸದ್ಯ 674 ಜನಸಂಖ್ಯ ಹೊಂದಿದೆ. ಇದು, ಈವರೆಗಿನ ಅತ್ಯಧಿಕ ಬೆಳವಣಿಗೆಯ ದರಗಳಲ್ಲಿ ಒಂದಾಗಿದೆ.

6) ಭಾರತವು 2020ರ ಮಾಹಿತಿ ಪ್ರಕಾರ 12,852 ಚಿರತೆಗಳನ್ನು ಹೊಂದಿದೆ. ಇದು 2014 ರಲ್ಲಿ ನಡೆಸಿದ ಹಿಂದಿನ ಅಂದಾಜಿನ 7910 ಗೆ ಹೋಲಿಸಿದರೆ, ಜನಸಂಖ್ಯೆಯಲ್ಲಿ 60% ಕ್ಕಿಂತ ಅಧಿಕ ಹೆಚ್ಚಳ ದಾಖಲಾಗಿದೆ.

Follow Us:
Download App:
  • android
  • ios