ನಮೀಬಿಯಾದಿಂದ ತಂದ ಚೀತಾಗಳನ್ನು ಕುನೋ ಉದ್ಯಾನವನಕ್ಕೆ ಬಿಟ್ಟ ಪ್ರಧಾನಿ
ಭೋಪಾಲ್: ಆಫ್ರಿಕಾದ ನಮೀಬಿಯಾದಿಂದ ಇಂದು ಮುಂಜಾನೆ ಭಾರತಕ್ಕೆ ಆಗಮಿಸಿದ ಆಫ್ರಿಕನ್ ಚೀತಾಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು.
ಭೋಪಾಲ್: ಆಫ್ರಿಕಾದ ನಮೀಬಿಯಾದಿಂದ ಇಂದು ಮುಂಜಾನೆ ಭಾರತಕ್ಕೆ ಆಗಮಿಸಿದ ಆಫ್ರಿಕನ್ ಚೀತಾಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು. ಅಳಿದು ಹೋದ/ಅಳಿವಿನ ಅಂಚಿನ ಪ್ರಾಣಿ ಪುನರುತ್ಥಾನ ಯೋಜನೆಯ ಅಂಗವಾಗಿ ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ವಿಶೇಷ ಕಾರ್ಗೋ ವಿಮಾನದಲ್ಲಿ ಭಾರತಕ್ಕೆ ಈ ಚೀತಾಗಳನ್ನು ಕರೆತರಲಾಗಿತ್ತು. ಇಂದು ಬೆಳಗ್ಗೆ ಮಧ್ಯಪ್ರದೇಶದ ಗ್ವಾಲಿಯರ್ ಏರ್‌ಪೋರ್ಟ್‌ನಲ್ಲಿ ಚಿರತೆಗಳಿದ್ದ ವಿಶೇಷ ವಿಮಾನ ಲ್ಯಾಂಡ್ ಆಗಿತ್ತು.
ಈ ಚೀತಾಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, (Prime MInister) ಈ ಚೀತಾಗಳೊಂದಿಗೆ ಭಾರತದ ಪರಿಸರ ಪ್ರೇಮ (Nature lOve) ಜಾಗೃತವಾಗಲಿದೆ. ಇವುಗಳಿಂದ ಭಾರತದ ಜೀವ ವೈವಿಧ್ಯತೆ (Biodiversity) ಇನ್ನಷ್ಟು ಹೆಚ್ಚಾಗಲಿದೆ. ಪರಿಸರ ಪ್ರವಾಸೋದ್ಯಮ (Tourism) ಹೆಚ್ಚಾಗಲಿದೆ. ಇದೆಲ್ಲವನ್ನು ನೋಡಲು ಕೆಲ ದಿನಗಳವರೆಗೆ ನೀವು ಕಾಯಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ಈ ಪ್ರಾಣಿಗಳು ಕೇವಲ ಭಾರತದ ಸುಸ್ಥಿರ ಅಭಿವೃದ್ಧಿಗೆ (sustainable development) ಮಾತ್ರವಲ್ಲ ಇದು ನಮ್ಮ ಪರಂಪರೆಯ ಸಂಕೇತ, ನಮ್ಮ ಪೂರ್ವಜರು (Ancestors) ನಮಗೆ ಸಣ್ಣ ಸಣ್ಣ ಜೀವಿಗಳ ಬಗ್ಗೆಯೂ ಕಾಳಜಿ ವಹಿಸುವುದನ್ನು ಹೇಳಿ ಕೊಟ್ಟಿದ್ದಾರೆ. ಪ್ರಾಣಿಗಳಲ್ಲೂ ದೈವತ್ವವನ್ನು ಕಾಣುವ ದೇಶ ನಮ್ಮದು ಎಂದು ಪ್ರಧಾನಿ ಅಭಿಪ್ರಾಯ ವ್ಯಕ್ತಪಡಿಸಿದರು. ಭಾರತದ ಮಣ್ಣಿಗೆ ಚೀತಾ ಮರಳಿ ಬಂದಿದೆ. ದೇಶದ ಸ್ವಾತಂತ್ರದ ಅಮೃತ ಮಹೋತ್ಸವದ ವೇಳೆ ಚೀತಾಗಳು ಬಂದಿರುವುದು ಹೆಮ್ಮೆಯ ವಿಚಾರ ಎಂದ ಪ್ರಧಾನಿ ಪರಿಸರ ಸಂರಕ್ಷಣೆ ವನ್ಯಜೀವಿ ಸಂಪತ್ತಿನ ಬಗ್ಗೆ ಜಾಗತಿಕವಾಗಿ ಎಲ್ಲರೂ ಕಾಳಜಿ ವಹಿಸಬೇಕು ಎಂಬ ಆಶಯ ವ್ಯಕ್ತಪಡಿಸಿದರು. ನಮ್ಮ ಜೀವನದಲ್ಲಿ ಮಾಡುವ ಸಣ್ಣ ಬದಲಾವಣೆಗಳು ಭೂಮಿಯ ಭವಿಷ್ಯವನ್ನು ಬದಲಿಸಬಹುದು ಎಂದು ಪ್ರಧಾನಿ ಹೇಳಿದರು.
ದಶಕಗಳ ಹಿಂದೆ ಭಾರತದಲ್ಲಿ ಸಾವಿರಾರು ಚೀತಾಗಳು (Cheeta) ಅರಣ್ಯದಲ್ಲಿ ಸ್ವಚ್ಛಂದವಾಗಿ ವಿಹರಿಸಿಕೊಂಡಿದ್ದವು. ಆದರೆ ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಅವುಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿಯಿತು ಅತಿಯಾದ ಬೇಟೆ, ಅವುಗಳ ನೈಸರ್ಗಿಕ ಆವಾಸಸ್ಥಾನದ ನಾಶದಿಂದ ದೇಶದಲ್ಲಿ ಚೀತಾ ಸಂತತಿ ಅಳಿಯಿತು. ಮಧ್ಯಪ್ರದೇಶದ ಮಹಾರಾಜ ರಾಮಾನುಜ ಪ್ರತಾಪ್ ಸಿಂಗ್ ದೇವ್ (Maharaja Ramanuja Pratap Singh Dev) ಅವರು 1947ರಲ್ಲಿ ಕೊನೆಯ ಚೀತಾವನ್ನು ಕೊಂದಿದ್ದರು. 1952ರಲ್ಲಿ ಭಾರತದಿಂದ ಚೀತಾ ನಾಮಾವಶೇಷವಾಗಿದೆ ಎಂದು ಘೋಷಿಸಲಾಗಿತ್ತು.
Project Cheetah: ವೈಲ್ಡ್‌ಲೈಫ್ ತಜ್ಞರು ಕುತೂಹಲದಿಂದ ನೋಡುತ್ತಿರುವ ಪ್ರಯೋಗ
ತಜ್ಞರ ಪ್ರಕಾರ ‘ಚೀತಾ’ ಪದವು ಸಂಸ್ಕೃತದ ‘ಚಿತ್ರಕಾ’ ಎಂಬ ಪದದಿಂದ ಬಂದಿದೆ. ಇದರ ಅರ್ಥ ‘ಚುಕ್ಕೆಗಳಿರುವಂತಹದ್ದು’ ಎಂದಾಗಿದೆ. ಚೀತಾ, ಚಿರತೆ, ಜಾಗ್ವಾರ್... ಇವು ಮೇಲ್ನೋಟಕ್ಕೆ ನೋಡಲು ಒಂದೇ ಎನ್ನಿಸಿದರೂ ಬೇರೆ ಬೇರೆ ಪ್ರಾಣಿಗಳು. ಜಾಗ್ವಾರ್, ಚೀತಾಗೆ ಹೋಲಿಸಿದರೆ ಚೀತಾ ಸಪೂರವಾಗಿದೆ. ಚೀತಾ ಮುಖದ ಮೇಲೆ 2 ಗೆರೆ ಇರುತ್ತವೆ ಹಾಗೂ ಚುಕ್ಕೆ ಕಮ್ಮಿ ಇರುತ್ತವೆ. ಚಿರತೆ ಮುಖದ ಮೇಲೆ ಗೆರೆ ಇರಲ್ಲ. ಚುಕ್ಕೆಗಳಲ್ಲೂ ವ್ಯತ್ಯಾಸವಿದೆ. ಚೀತಾಗಿಂತ ಚಿರತೆ ಬಲಿಷ್ಠ ಎನ್ನಲಾಗಿದೆ.
ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ (Kuno National Park) ಈಗಾಗಲೇ ಅಳಿವಿನಂಚಿನಲ್ಲಿರುವ ಪ್ರಭೇದ ಎನಿಸಿದ ಏಷಿಯಾಟಿಕ್ ಸಿಂಹಗಳಿದ್ದು(Asiatic lions), ಅವುಗಳ ವಾಸಕ್ಕೆ ಅನುಕೂಲಕರ ಪರಿಸರವಿದೆ. ಇದು ಚೀತಾ ವಾಸಕ್ಕೂ ಯೋಗ್ಯವೆನಿಸಿದ ಕಾರಣ ಇಲ್ಲಿಯೇ ಚೀತಾಗಳನ್ನು ಇರಿಸಲಾಗುವುದು. ಚೀತಾಗಳ ಬೇಟೆಗಾಗಿ ಚಿಂಕಾರ, ಜಿಂಕೆ ಹಾಗೂ ಕೃಷ್ಣಮೃಗಗಳು ಇಲ್ಲಿ ವ್ಯಾಪಕ ಸಂಖ್ಯೆಯಲ್ಲಿ ಇವೆ.
ಏಳು ದಶಕಗಳ ಬಳಿಕ ಮರಳಿ ಬಂತು ಚೀತಾ!