ಮುಂಬೈ(ಜು.01): ಟಿಕ್‌ ಟಾಕ್‌ ಸಹಿತ 59 ಚೀನಾ ನಿರ್ಮಿತ ಆ್ಯಪ್‌ ಅನ್ನು ನಿಷೇಧ ಮಾಡಿದ ಬೆನ್ನಲ್ಲೇ, ನರೇಂದ್ರ ಮೋದಿ ಆ್ಯಪ್‌ ಅನ್ನು ಕೂಡ ರದ್ದು ಮಾಡಬೇಕು ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್‌ ಚವಾಣ್‌ ಆಗ್ರಹಿಸಿದ್ದಾರೆ.

ಈ ಆ್ಯಪ್‌ ಜನರ ಖಾಸಗಿ ತನಕ್ಕೆ ಧಕ್ಕೆ ಉಂಟು ಮಾಡುತ್ತಿದ್ದು, ಬಳಕೆದಾರರ ಮೊಬೈಲ್‌ನ ಖಾಸಗಿ ಮಾಹಿತಿಯ ಸಂಯೋಜನೆಯನ್ನು ಬದಲಿಸಿ ಅವುಗಳನ್ನು ಅಮೆರಿಕದ ಕಂಪನಿಗೆ ಕಳುಹಿಸಿಕೊಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ‘59 ಚೀನಾ ಆ್ಯಪ್‌ಗಳನ್ನು ನಿಷೇಧ ಮಾಡಿ 130 ಕೋಟಿ ಭಾರತೀಯರ ಖಾಸಗಿ ಮಾಹಿತಿ ರಕ್ಷಣೆ ಮಾಡಿದ ಮೋದಿ ಸರ್ಕಾರ ನಡೆ ಶ್ಲಾಘನೀಯ.

ಟಿಕ್‌ಟಾಕ್ ನಿಷೇಧದ ಬಳಿಕ ಮೇಡ್ ಇನ್ ಇಂಡಿಯಾ ರೊಪೋಸೋ ಆ್ಯಪ್ ಜನಪ್ರಿಯ!

22 ಅಂಶಗಳ ಮಾಹಿತಿಯನ್ನು ಪಡೆಯುವ ಮೂಲಕ ನಮೋ ಆ್ಯಪ್‌ ಖಾಸಗಿ ಮಾಹಿತಿಯ ಸಂಯೋಜನೆಯನ್ನು ಬದಲಿಸಿ ಅವುಗಳನ್ನು ಅಮೆರಿಕದ ಕಂಪನಿಗೆ ಕಳುಹಿಸಿಕೊಡುತ್ತಿದೆ’ ಎಂದು ಚವಾಣ್‌ ಟ್ವೀಟ್‌ ಮಾಡಿದ್ದಾರೆ.