100 ಕ್ಕೂ ಹೆಚ್ಚು ಮಂದಿ ಪತ್ನಿಯನ್ನು ಅರೆ ಬೆತ್ತಲೆಗೊಳಿಸಿ ದಾಳಿ ನಡೆಸಿದ್ದಾರೆ: ಭಾರತೀಯ ಯೋಧನ ವಿಡಿಯೋ ವೈರಲ್!

ಯೋಧನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ತಮಿಳುನಾಡಿನಲ್ಲಿ 100ಕ್ಕೂ ಹೆಚ್ಚು ಮಂದಿ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ.

My wife was stripped half-naked Soldier video from Kashmir creates tremors in Tamil Nadu kannada news gow

ಚೆನ್ನೈ (ಜೂ.11): ಕಾಶ್ಮೀರದಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೇನೆಯ (Indian Army) ಯೋಧನ ಆಘಾತಕಾರಿ ವಿಡಿಯೋ ಹೊರಬಿದ್ದಿದ್ದು, ತಮಿಳುನಾಡಿನ ತಿರುವಣ್ಣಾ ಮಲೈನಲ್ಲಿರುವ ತನ್ನ ಪತ್ನಿಯ ಮೇಲೆ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿದೆ ಎಂದು ಆರೋಪಿಸಿದ್ದಾನೆ. ಯೋಧನ ಕುಟುಂಬವನ್ನು ರಕ್ಷಿಸುವಲ್ಲಿ ವಿಫಲವಾಗಿರುವ ಡಿಎಂಕೆ (DMK) ಸರ್ಕಾರವನ್ನು ಬಿಜೆಪಿ  ಟಾರ್ಗೆಟ್ ಮಾಡಿದೆ.

ಕಾಶ್ಮೀರದ ಭಾರತೀಯ ಸೇನೆಯ (Indian Army) ಯೋಧ  ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ತಮಿಳುನಾಡಿನಲ್ಲಿ 120ಕ್ಕೂ ಹೆಚ್ಚು ಮಂದಿ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದು, ಪುರುಷರ ಗುಂಪು ತನ್ನ ಹೆಂಡತಿಯ ಮೇಲೆ ಅವಳ ಅಂಗಡಿಯಲ್ಲಿ ದಾಳಿ ಮಾಡಿದರು ಮತ್ತು ನಂತರ ಅವಳನ್ನು ಅರೆಬೆತ್ತಲೆಯಾಗಿ ವಿವಸ್ತ್ರಗೊಳಿಸಿದರು. ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ದಯಮಾಡಿ ಕಾಪಾಡಿ ಎಂದು ಹೇಳಿಕೊಂಡಿದ್ದಾರೆ. ಈ  ವೀಡಿಯೊದಲ್ಲಿ ಯಾವ ದಿನಾಂಕದ್ದು ಎಂದು ತಿಳಿದುಬಂದಿಲ್ಲ ಜೊತೆಗೆ ಅದರ ಸತ್ಯಾಸತ್ಯತೆ ಇನ್ನೂ ಖಚಿತವಾಗಿಲ್ಲ, ಹವಾಲ್ದಾರ್ ಪ್ರಭಾಕರ್ ಎಂದು ಗುರುತಿಸಲಾದ ಯೋಧನು ತನ್ನ ಹೆಂಡತಿಯನ್ನು ಅರೆಬೆತ್ತಲೆಯಾಗಿ ವಿವಸ್ತ್ರಗೊಳಿಸಿ ತುಂಬಾ ಕೆಟ್ಟದಾಗಿ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. 

ಯೋಧನ ಮನವಿಗೆ ಪ್ರತಿಕ್ರಿಯಿಸಿದ ತಮಿಳುನಾಡು ಬಿಜೆಪಿ (BJP) ಅಧ್ಯಕ್ಷ ಕೆ ಅಣ್ಣಾಮಲೈ ()K Annamalai ಅವರನ್ನು ಭೇಟಿ ಮಾಡಿ ಅವರ ಪತ್ನಿಗೆ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದರು. ಈ ಬಗ್ಗೆ ಟ್ವೀಟ್ ಮಾಡಿರುವ ಅಣ್ಣಾಮಲೈ ಅವರು ತಿರುವಣ್ಣಾಮಲೈ ಮೂಲದ  ಹವಾಲ್ದಾರ್ ಮತ್ತು ಅವರ ಪತ್ನಿಯೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದೇನೆ. ಅವರ ಕಥೆಯನ್ನು ಕೇಳಿ ನಿಜವಾಗಿಯೂ ಧೈರ್ಯ ಎನಿಸಿತು ಮತ್ತು  ಈ ಘಟನೆ ಸಂಭವಿಸಿರುವುದಕ್ಕೆ ನಾಚಿಕೆ ಪಡುತ್ತೇನೆ. ನಮ್ಮ ತಮಿಳು ನೆಲವೇ!, ನಮ್ಮ ಪಕ್ಷದ ಜನರು ವೆಲ್ಲೂರಿನ ಆಸ್ಪತ್ರೆಗೆ ದಾಖಲಾಗಿರುವ ಆಕೆಯನ್ನು ಭೇಟಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಯೋಧನ ವಿಡಿಯೋ ನೋಡಿ ಹಲವು ಜನ ಆತಂಕ ವ್ಯಕ್ತಪಡಿಸಿದ್ದಾರೆ.

ಮದುವೆಯಾಗಿ ವಿದೇಶಕ್ಕೆ ಹನಿಮೂನ್‌ ಹೋದ ಚೆನ್ನೈ ವೈದ್ಯ ದಂಪತಿ ಫೋಟೋಶೂಟ್

ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಎನ್ ತ್ಯಾಗರಾಜನ್ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿ, ಇದು ಯಾವ ಜಗತ್ತಿನಲ್ಲಿ ನ್ಯಾಯಯುತವಾಗಿದೆ? ಕಾಶ್ಮೀರದಲ್ಲಿ ಕರ್ತವ್ಯದಲ್ಲಿರುವ ಸೇನಾ ಯೋಧ ತಮಿಳುನಾಡಿನಲ್ಲಿರುವ ತನ್ನ ಹೆಂಡತಿಯನ್ನು ರಕ್ಷಿಸಲು ಮಂಡಿಯೂರಿ ಕುಳಿತಿರುವ ದಯನೀಯ ಸ್ಥಿತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಒಬ್ಬ ಸೈನಿಕನು ದೇಶವನ್ನು ರಕ್ಷಿಸಲು ಹೊರಟಾಗ, ಸೈನಿಕನ ಸಂಗಾತಿ ಮತ್ತು ಕುಟುಂಬವನ್ನು ನೋಡಿಕೊಳ್ಳುವುದು ಸರ್ಕಾರದ ಅತ್ಯುನ್ನತ ಜವಾಬ್ದಾರಿಯಾಗಿದೆ. ತಮಿಳುನಾಡಿನಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿರುವುದು ಕಾನೂನು ಬಾಹಿರ ಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ನನ್ನ ವಿದ್ಯಾರ್ಹತೆ ಮಾಹಿತಿ ಬೇಕಾ ಅಫಿಡವಿಟ್‌ ನೋಡ್ಕೊಳಿ: ಸಚಿವ ಪ್ರಿಯಾಂಕ ಖರ್ಗೆ ತಿರುಗೇಟು

ತಮಿಳುನಾಡು (Tamil Nadu) ರಾಜ್ಯಪಾಲರು, ರಾಜ್ಯ ಪೊಲೀಸರು ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸೂಕ್ತ ಕ್ರಮ ಕೈಗೊಂಡು ಮಹಿಳೆಯರ ಘನತೆ ಕಾಪಾಡುವಂತೆ ಮನವಿ ತ್ಯಾಗರಾಜನ್  ಮಾಡಿದ್ದಾರೆ. 

ವಿಡಿಯೋ ವೈರಲ್ ಆಗುತ್ತಿದ್ದಂತೆ ತಿರುವಣ್ಣಾಮಲೈ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕೇಯನ್ ಸ್ಪಷ್ಟನೆ ನೀಡಿದ್ದಾರೆ. ಯೋಧನ ಪತ್ನಿ ಮೇಲೆ ಹಲ್ಲೆ ನಡೆದಿರುವುದನ್ನು ಅಲ್ಲಗಳೆದಿರುವ ಅವರು, ಜಮೀನಿನ ವಿಚಾರದಲ್ಲಿ ವೈಯಕ್ತಿಕ ವಿವಾದವಿತ್ತು. ಯೋಧನಿಗೆ ತಪ್ಪು ಮಾಹಿತಿ ನೀಡಲಾಗಿದೆ, ನಾವು ಆಕೆಗೆ ರಕ್ಷಣೆ ನೀಡುತ್ತಿದ್ದೇವೆ ಎಂದು ಹೇಳಿದರು.

 

Latest Videos
Follow Us:
Download App:
  • android
  • ios