ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಇದೀಗ ಮೈತ್ರಿ ಪಕ್ಷಗಳ ಜೊತೆ ಸೀಟು ಹಂಚಿಕೆ ಚರ್ಚೆ ನಡೆಸುತ್ತಿದೆ. ಇದರ ನಡುವೆ ಕೇರಳದಲ್ಲಿ ಮುಸ್ಲಿಂ ಲೀಗ್ ಪಕ್ಷ ರಾಹುಲ್ ಗಾಂಧಿಯ ವಯನಾಡು ಕ್ಷೇತ್ರವನ್ನೇ ಕಳಿದೆ.
ವಯನಾಡು(ಸೆ.04) ಲೋಕಸಭಾ ಚುನಾವಣೆ ಕಣ ರಂಗೇರುತ್ತಿದೆ. ಇಂಡಿಯಾ ಮೈತ್ರಿ ಕೂಡದಿಂದ ಒಂದೊಂದೆ ಪಕ್ಷಗಳು ಹೊರನಡೆಯುತ್ತಿದೆ. ಬಾಕಿ ಉಳಿದಿರುವ ಪಕ್ಷಗಳೊಂದಿಗೆ ಕಾಂಗ್ರೆಸ್ ಸೀಟು ಹಂಚಿಕೆ ಮಾತುಕತೆ ನಡೆಸುತ್ತಿದೆ. ಕೇರಳದಲ್ಲಿ ಇಂಡಿಯಾ ಮೈತ್ರಿಯ ಪ್ರಮುಖ ಪಾಲುದಾರಿಕೆ ಪಕ್ಷ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್(UDF) ಕೇರಳದಲ್ಲಿ ಸೀಟು ಹಂಚಿಕೆ ಮಾತುತೆ ನಡೆಸುತ್ತಿದೆ. UDF ಅಡಿಯಲ್ಲಿರು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(IUML) ಪಕ್ಷ ಇದೀಗ ವಯನಾಡು ಕ್ಷೇತ್ರವನ್ನು ತಮಗೆ ನೀಡುವಂತೆ ಕೇಳಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ವಯನಾಡು ಕ್ಷೇತ್ರವನ್ನು ತಮಗೆ ನೀಡುವಂತೆ ಕೇಳಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಯನಾಡು ಕ್ಷೇತ್ರದಿಂದ ಸ್ಪರ್ಧಿಸುತ್ತಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ. ರಾಹುಲ್ ಗಾಂಧಿ ಸ್ಪರ್ಧಿಸದಿದ್ದರೆ ಈ ಕ್ಷೇತ್ರವನ್ನು ತಮಗೆ ಬಿಟ್ಟುಕೊಡುವಂತೆ IUML ಕೇಳಿದೆ. ವಯನಾಡು ಮುಸ್ಲಿಮ್ ಪ್ರಾಬಲ್ಯದ ಕ್ಷೇತ್ರವಾಗಿದೆ. ಮುಸ್ಲಿಮ್ ಸಮುದಾಯದ ಪ್ರಾಬಲ್ಯ ಇರುವ ಕಡೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸ್ಪರ್ಧಿಸಿದರೆ ಒಟ್ಟಾರೆ ಲಾಭ ಸಿಗಲಿದೆ. ಇಷ್ಟೇ ಅಲ್ಲ ಸಮುದಾಯಕ್ಕೆ ಸಂದೇಶ ರವಾನೆಯಾಗಲಿದೆ ಎಂದಿದೆ.
ಲೋಕಸಭೆಯಲ್ಲಿ ಕಾಂಗ್ರೆಸ್ 40 ಸ್ಥಾನ ಗೆಲ್ಲುವುದು ಅನುಮಾನ, ಭವಿಷ್ಯ ನುಡಿದ ಸಿಎಂ ಮಮತಾ!
ಒಂದು ವೇಳೆ ಈ ಬಾರಿಯೂ ರಾಹುಲ್ ಗಾಂಧಿ ವಯನಾಡು ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಚಿಸಿದರೆ, ಕಾಸರಗೋಡು, ಕಣ್ಣೂರು ಅಥವಾ ವಟಕರ ಕ್ಷೇತ್ರಗಳನ್ನು ತಮಗೆ ಬಿಟ್ಟುಕೊಡುವಂತೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸೀಟು ಹಂಚಿಕೆ ಮಾತುಕತೆಯಲ್ಲಿ ಪ್ರಸ್ತಾಪ ಇಟ್ಟಿದೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಇದುವರೆಗೆ ಕೇರಳದಲ್ಲಿ 2 ಸ್ಥಾನಕ್ಕೆ ಸ್ಪರ್ಧಿಸುತ್ತಿದೆ. ಮಲಪ್ಪುರಂ ಹಾಗೂ ಪೊನ್ನಾಣಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಇದೀಗ 3ನೇ ಕ್ಷೇತ್ರ ನೀಡುವಂತೆ ಪಟ್ಟು ಹಿಡಿದಿದೆ.
ನಾವು ಎಲ್ಲಾ ಪಕ್ಷಗಳಂತೆ ಹೆಚ್ಚಿನ ಸೀಟು ಕೇಳುತ್ತಿಲ್ಲ. ನಾವು 3ನೇ ಸೀಟು ಪಡೆಯಲು ಅರ್ಹರಾಗಿದ್ದೇವೆ. ನಮ್ಮ ಸಂಘಟನೆ ಪ್ರಾಬಲ್ಯವಿರುವ 4 ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರ ನೀಡಲು ನಾವು ಮನವಿ ಮಾಡಿದ್ದೇವೆ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿ ಪಿಕೆ ಕುನ್ಹಾಲಿಕುಟ್ಟಿ ಹೇಳಿದ್ದಾರೆ. ಸೀಟು ಹಂಚಿಕೆ ಕುರಿತು ಮೊದಲ ಸುತ್ತಿನ ಮಾತುಕತೆ ನಡೆದಿದೆ. ನಮ್ಮ ಪ್ರಸ್ತಾಪ ಮುಂದಿಟ್ಟಿದ್ದೇವೆ. ಹಿರಿಯ ನಾಯಕರು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ನಾವು 3ನೇ ಸೀಟಿನ ನಿರೀಕ್ಷೆಯಲ್ಲಿದ್ದೇವೆ ಎಂದು ಕುನ್ಹಾಲಿಕುಟ್ಟಿ ಹೇಳಿದ್ದಾರೆ.
ಮನಸ್ತಾಪದ ನಡುವೆ ಇಂಡಿಯಾ ಮೈತ್ರಿಯನ್ನು ಲೋಕಸಭೆ ಚುನಾವಣೆಗೆ ಸೀಮಿತಗೊಳಿಸಿದ ಕಾಂಗ್ರೆಸ್!
