Namaz at Bengaluru airport: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಮುಸ್ಲಿಂ ಸಮುದಾಯದವರು ನಮಾಜ್ ಮಾಡಿದ ವೀಡಿಯೋ ವೈರಲ್ ಆಗಿದೆ. ಅತ್ಯಂತ ಭದ್ರತೆಯ ಪ್ರದೇಶದಲ್ಲಿ ಇದಕ್ಕೆ ಹೇಗೆ ಅವಕಾಶ ನೀಡಲಾಯಿತು ಎಂದು ಬಿಜೆಪಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ನಮಾಜ್‌ಗೆ ಕುಳಿತ ಮುಸ್ಲಿಂ ಗುಂಪು

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಮುಸ್ಲಿಂ ಸಮುದಾಯದ ಗುಂಪೊಂದು ನಮಾಜ್ ಮಾಡಿದ್ದಾರೆ. ಈ ಘಟನೆಯ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ವಿವಾದ ಸೃಷ್ಟಿಸಿದೆ. ಈ ಘಟನೆಗೆ ಸಂಬಂಧಿಸಿದಂತೆವ ವಿರೋಧ ಪಕ್ಷ ಬಿಜೆಪಿ ರಾಜ್ಯ ಸರ್ಕಾರದಿಂದ ಸ್ಪಷ್ಟನೆ ಕೇಳಿದೆ. ಅತ್ಯಂತ ಭದ್ರತೆಯ ಈ ಪ್ರದೇಶದಲ್ಲಿ ನಮಾಜ್ ಮಾಡುವುದಕ್ಕೆ ಹೇಗೆ ಅವಕಾಶ ನೀಡಲಾಯ್ತು ಎಂದು ಬಿಜೆಪಿ ಪ್ರಶ್ನೆ ಮಾಡಿದೆ. ಅಲ್ಲದೇ ರಾಜ್ಯದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ವಿರೋಧ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ ಅತ್ಯಂತ ಭದ್ರತೆ ಇರುವ ವಿಮಾನ ನಿಲ್ದಾಣದೊಳಗೆ ನಮಾಜ್ ಮಾಡುವುದಕ್ಕೆ ಮುಸ್ಲಿಂ ಸಮುದಾಯಕ್ಕೆ ಹೇಗೆ ಅವಕಾಶ ನೀಡಿತ್ತು. ಇದಕ್ಕೆ ಅನುಮತಿ ಇದೆಯೇ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದೆ.

ಆರ್‌ಎಸ್‌ಎಸ್‌ಗೆ ಅನುಮತಿ ಇಲ್ಲ, ಇದಕ್ಕೆ ಅನುಮತಿ ಇದೆಯೇ: ಬಿಜೆಪಿ

ವೈರಲ್ ಆದ ವೀಡಿಯೋದಲ್ಲಿ ಏರ್‌ಪೋರ್ಟ್‌ನ ಭದ್ರತಾ ಸಿಬ್ಬಂದಿ ಈ ನಮಾಜ್ ಮಾಡುತ್ತಿರುವುದನ್ನು ಹತ್ತಿರದಿಂದ ನೋಡುವುದನ್ನು ಕಾಣಬಹುದು. ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ವಕ್ತಾರ, ವಿಜಯ್ ಪ್ರಸಾದ್, ಎಕ್ಸ್‌ನಲ್ಲಿ ವೀಡಿಯೋ ಪೋಸ್ಟ್ ಮಾಡಿದ್ದು, ಹೀಗೆ ಬರೆದಿದ್ದಾರೆ.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ T2 ಟರ್ಮಿನಲ್ ಒಳಗೆ ಇದನ್ನು ಹೇಗೆ ಅನುಮತಿಸಲಾಗಿದೆ? ಮಾನ್ಯ ಮುಖ್ಯಮಂತ್ರಿ

@siddaramaiah ಮತ್ತು ಸಚಿವ @PriyankKharge ನೀವು ಇದನ್ನು ಅನುಮೋದಿಸುತ್ತೀರಾ? ಈ ವ್ಯಕ್ತಿಗಳು ಹೆಚ್ಚಿನ ಭದ್ರತೆಯ ವಿಮಾನ ನಿಲ್ದಾಣ ವಲಯದಲ್ಲಿ ನಮಾಜ್ ಮಾಡಲು ಪೂರ್ವಾನುಮತಿ ಪಡೆದಿದ್ದಾರೆಯೇ? ಸಂಬಂಧಪಟ್ಟ ಅಧಿಕಾರಿಗಳಿಂದ ಸೂಕ್ತ ಅನುಮತಿ ಪಡೆದ ನಂತರ ಆರ್‌ಎಸ್‌ಎಸ್‌ ಪಥಸಂಚಲನ ನಡೆಸಿದಾಗ ಸರ್ಕಾರ ಏಕೆ ಆಕ್ಷೇಪಿಸುತ್ತದೆ. ಆದರೆ ನಿರ್ಬಂಧಿತ ಸಾರ್ವಜನಿಕ ಪ್ರದೇಶದಲ್ಲಿ ಅಂತಹ ಚಟುವಟಿಕೆಗಳಿಗೆ ಕಣ್ಣು ಮುಚ್ಚು ಕುಳಿತಿರುತ್ತದೆ. ಇದು ಅಂತಹ ಸೂಕ್ಷ್ಮ ವಲಯದಲ್ಲಿ ಗಂಭೀರ ಭದ್ರತಾ ಕಾಳಜಿಯನ್ನು ಉಂಟುಮಾಡುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಆದರೆ ರಾಜ್ಯ ಸರ್ಕಾರ ಮಾತ್ರ ಈ ಘಟನೆಗೆ ಸಂಬಂಧಿಸಿದಂತೆ ಇನ್ನೂ ಪ್ರತಿಕ್ರಿಯಿಸಿಲ್ಲ.

ಇದನ್ನೂ ಓದಿ: ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿ ಮತ್ತೊಬ್ಬ ಡಾಕ್ಟರ್ ಅಂದರ್: ಒಂದೇ ವಾರದಲ್ಲಿ ಇಬ್ಬರು ವೈದ್ಯರ ಬಂಧನ

ಇದನ್ನೂ ಓದಿ: ಡಿವೋರ್ಸ್‌ ಪ್ರಕರಣದಲ್ಲಿ ತಿಂಗಳಿಗೆ 6 ಲಕ್ಷ ಪರಿಹಾರ ಕೇಳಿದ ಪತ್ನಿ: ಅರ್ಜಿ ತಿರಸ್ಕರಿಸಿ ನ್ಯಾಯಾಧೀಶರು ಹೇಳಿದ್ದೇನು?

Scroll to load tweet…