Asianet Suvarna News Asianet Suvarna News

14 ದಿನಗಳ ನ್ಯಾಯಾಂಗ ವಶಕ್ಕೆ ವಿವಾದಿತ ಸಿನಿಮಾ ವಿಮರ್ಶಕ ಕಮಲ್ ಖಾನ್

ಮುಂಬೈ: ಸ್ವಯಂಘೋಷಿತ ಚಲನಚಿತ್ರ ವಿಮರ್ಶಕ ಕಮಲ್ ರಶೀದ್ ಖಾನ್‌ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 2020ರ ವಿವಾದಿತ ಟ್ವಿಟ್ಟೊಂದಕ್ಕೆ ಸಂಬಂಧಿಸಿದಂತೆ ಕಮಲ್ ಖಾನ್ ಬಂಧನವಾಗಿದೆ.

Mumbai police arrested self-proclaimed film critic Kamal Rashid Khan in Mumbai airport akb
Author
First Published Aug 30, 2022, 12:06 PM IST

ಮುಂಬೈ: ಸ್ವಯಂಘೋಷಿತ ಚಲನಚಿತ್ರ ವಿಮರ್ಶಕ ಕಮಲ್ ರಶೀದ್ ಖಾನ್‌ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 2020ರ ವಿವಾದಿತ ಟ್ವಿಟ್ಟೊಂದಕ್ಕೆ ಸಂಬಂಧಿಸಿದಂತೆ ಕಮಲ್ ಖಾನ್ ಬಂಧನವಾಗಿದೆ. ಕಮಲ್ ರಶೀದ್‌ ಖಾನ್‌ ಬಾಲಿವುಡ್‌ ಮಂದಿಯ ಬಗ್ಗೆ ವಿವಾದಿತ ಹೇಳಿಕೆಗಳನ್ನು ನೀಡುವ ಮೂಲ ಸದಾ ವಿವಾದದ ಕೇಂದ್ರಬಿಂದುವಾಗಿರುತ್ತಾರೆ. ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಅವರು ಬಾಲಿವುಡ್‌ ಸಿನಿಮಾ ತಾರೆಯರು ಹಾಗೂ ಅವರ ಸಿನಿಮಾಗಳ ಬಗ್ಗೆ ವಿಮರ್ಶೆಯ ಜೊತೆ ವಿವಾದಿತ ಹೇಳಿಕೆಗಳನ್ನು ನೀಡುತ್ತಿರುತ್ತಾರೆ.

ಇಷ್ಟು ದಿನ ದುಬೈನಲ್ಲಿ ವಾಸವಿದ್ದ ಕಮಲ್ ರಶೀದ್ ಖಾನ್‌ ಮುಂಬೈ ಏರ್‌ಪೋರ್ಟ್‌ಗೆ ಬಂಧಿಳಿಯುತ್ತಿದ್ದಂತೆ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಅಲ್ಲದೇ ಅವರನ್ನು ಬೊರಿವಿಲ್ಲೆಯಲ್ಲಿರುವ ಕೋರ್ಟ್‌ಗೆ ಪೊಲೀಸರು ಹಾಜರುಪಡಿಸಿದ್ದಾರೆ.  ಬೊರಿವಿಲ್ಲೆ  ಕೋರ್ಟ್ ಕಮಲ್ ರಶೀದ್ ಖಾನ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. 

 

ಇತ್ತೀಚೆಗೆ ಈ ರಶೀದ್ ಖಾನ್, ವಿರಾಟ್‌ ಕೊಹ್ಲಿ ಖಿನ್ನತೆಗೆ ಅನುಷ್ಕಾ ಕಾರಣ ಎಂಬ ಹೇಳಿಕೆ ನೀಡುವ ಮೂಲಕ ಮಾಧ್ಯಮಗಳ ಹೆಡ್‌ಲೈನ್ ಆಗಿದ್ದರು. ಟ್ವಿಟ್ಟೊಂದರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಉಂಟಾಗಿರುವ ಖಿನ್ನತೆ ಹಿಂದೆ ಪತ್ನಿ ಹಾಗೂ ಬಾಲಿವುಡ್‌ ನಟಿ ಅನುಷ್ಕಾ ಇದ್ದಾರೆ ಎಂದು ಟ್ವಿಟ್ ಮಾಡಿದ್ದರು. ಆಕೆ ಖಂಡಿತವಾಗಿ ಆತನ ತಲೆಯನ್ನು ಹಿಡಿದಿರಬೇಕು ಎಂದು ಹೇಳಿದ್ದರು. ವಿರಾಟ್ ಕೊಹ್ಲಿ ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಖಿನ್ನತೆ ಬಗ್ಗೆ ಹೇಳಿಕೊಂಡಿದ್ದರು. ಆದರಿಂದ ಹೇಗೆ ತಾವು ಹೊರ ಬಂದೆ ಎಂಬುದನ್ನು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಇದಾದ ಬಳಿಕ ಕಬೀರ್ ಖಾನ್ ಈ ವಿವಾದಿತ ಹೇಳಿಕೆ ನೀಡಿದ್ದಾರೆ. 

ದಿನಾ ಕಾಡೋ ಖಿನ್ನತೆ ಹೋಗಲಾಡಿಸಲು ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ

ಇದೇ ವರ್ಷದ ಆರಂಭದಲ್ಲಿ ಕಮಲ್ ಖಾನ್, ತಮ್ಮ ದೇಶದ್ರೋಹಿ 2 ಸಿನಿಮಾದ ಬಿಡುಗಡೆ ಬಗ್ಗೆ ಘೊಷಣೆ ಮಾಡಿದ್ದರು. ಇದು ಬಾಹುಬಲಿಗಿಂತ ದೊಡ್ಡ  ಬ್ಲಾಕ್‌ಬಸ್ಟರ್ ಸಿನಿಮಾ ಎಂದು ಅವರು ಹೇಳಿಕೊಂಡಿದ್ದರು. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದರು. ಮೊದಲ ದೇಶದ್ರೋಹಿ ಸಿನಿಮಾವೂ 14 ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು. ಇನ್ನು ದೇಶದ್ರೋಹದ 2 ಸಿನಿಮಾದ ಪೋಸ್ಟರ್‌ಗಳ ಕಮಲ್ ಖಾನ್ ಹಾಗೂ ಅವರೆಲ್ಲ ವೈಭವವನ್ನು ಒಳಗೊಂಡಿತ್ತು. ಪೋಸ್ಟರ್‌ನಲ್ಲಿ ಸಿನಿಮಾದ ನಿರ್ದೇಶಕ ನಿರ್ಮಾಪಕ ನಟ ಎಲ್ಲವೂ ಕಮಲ್ ಖಾನ್ ಆಗಿದ್ದರು.

ಮೊದಲ ದೇಶದ್ರೋಹಿ ಸಿನಿಮಾವನ್ನು ಜಗದೀಶ್ ಎ. ಶರ್ಮಾ ನಿರ್ಮಿಸಿದ್ದರು. ಕಮಲ್ ಖಾನ್ ನಿರ್ದೇಶಿಸಿದ್ದರು. ಚಿತ್ರದ ನಾಯಕ ನಟನ ಜೊತೆ ಮನೋಜ್ ತಿವಾರಿ ಹರ್ಷಿತಾ ಭಟ್‌, ಗ್ರೇಸಿ ಸಿಂಗ್ ಹಾಗೂ ಜುಲ್ಫಿ ಸೈಯದ್ ನಟಿಸಿದ್ದರು. ಈ ಸಿನಿಮಾವೂ ಮುಂಬೈನಲ್ಲಿ ವಲಸಿಗರು ಅನುಭವಿಸುವ ಸಂಕಷ್ಟದ ಕತೆ ಹೇಳಿತ್ತು.

ಪಾಕ್ ಮಾಜಿ ಕ್ರಿಕೆಟಿಗನ ತಬ್ಬಿ ಸಂತಸ ಹಂಚಿಕೊಂಡ ವಿರಾಟ್ ಕೊಹ್ಲಿ, ಫೋಟೋ ವೈರಲ್!

ಇತ್ತೀಚೆಗೆ ವಿರಾಟ್ ಕೊಹ್ಲಿ ಇತ್ತೀಚಿನ ಮಾನಸಿಕ ಆರೋಗ್ಯದ ಬಗ್ಗೆ ತಮ್ಮ  ಹೋರಾಟಗಳ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಿದ್ದರು. ಮಾನಸಿಕ ಖಿನ್ನತೆ ಅವರನ್ನು ಹೇಗೆ ಹಾನಿಗೊಳಿಸಿತು. ಎಷ್ಟರಮಟ್ಟಿಗೆ ಅವರು ಇಡೀ ತಿಂಗಳು ಆಟದಿಂದ ಸಂಪೂರ್ಣವಾಗಿ ದೂರವಿದ್ದರು ಎಂಬುದನ್ನು ಅವರು ಹೇಳಿಕೊಂಡಿದ್ದಾರೆ. 10 ವರ್ಷಗಳಲ್ಲಿ ಮೊದಲ ಬಾರಿಗೆ, ನಾನು ಒಂದು ತಿಂಗಳ ಕಾಲ ನನ್ನ ಬ್ಯಾಟ್ ಅನ್ನು ಮುಟ್ಟಲಿಲ್ಲ ಎಂದು ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಮಾತನಾಡುತ್ತಾ ಕೊಹ್ಲಿ ಹೇಳಿದ್ದರು. ನಾನು ಅದರ ಬಗ್ಗೆ ಕುಳಿತು ಯೋಚಿಸಿದಾಗ, 'ವಾವ್‌ 30 ದಿನಗಳ ಕಾಲ ನಾನು ಬ್ಯಾಟ್ ಮುಟ್ಟಿಲ್ಲ ಎಂದೆನಿಸುತ್ತಿದೆ. ಈ ರೀತಿ ನಾನು ನನ್ನ ಜೀವನದಲ್ಲಿ ಎಂದು ಯೋಚಿಸಿರಲಿಲ್ಲ ಎಂದು ಕೊಹ್ಲಿ ಹೇಳಿದ್ದರು. 

Follow Us:
Download App:
  • android
  • ios