ಆರೋಪಿಯನ್ನು 20 ವರ್ಷಗಳಿಂದ ಪತ್ತೆಹಚ್ಚಲು ಮುಂಬೈ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಈ ಆರೋಪಿಯು ಮತ್ತೊಂದು ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ 5 ವರ್ಷಗಳ ಕಾಲ ಜೈಲಿನಲ್ಲೇ ಇದ್ದರು ಎಂದು ಬಯಲಾಗಿದೆ.

ಮುಂಬೈ (ಫೆಬ್ರವರಿ 13, 2023): ಅತ್ಯಾಚಾರ, ಕೊಲೆ, ಕಳ್ಳತನ ಮುಂತಾದ ಪ್ರಕರಣದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸೋದು ಸಾಮಾನ್ಯ. ಆದರೆ, ಇಲ್ಲಿ ಜೈಲಿನಲ್ಲೇ ಇದ್ದ ಆರೋಪಿಗಾಗಿ ಪೊಲೀಸರು 20 ವರ್ಷಗಳ ಕಾಲ ಹುಡುಕಾಟ ನಡೆಸಿದ್ದಾರಂತೆ. ಈ ಹಿನ್ನೆಲೆ, ಇದು ಬಯಲಾಗದ ರಹಸ್ಯ ಎಂದು ನ್ಯಾಯಾಲಯ ಪರೋಕ್ಷವಾಗಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. 1999 ರ ಕೊಲೆ ಪ್ರಕರಣದಲ್ಲಿ ಛೋಟಾ ಶಕೀಲ್ ಗ್ಯಾಂಗ್‌ನ ಶಾರ್ಪ್ ಶೂಟರ್ ಎಂದು ಹೇಳಲಾದ ಆರೋಪಿಯನ್ನು 20 ವರ್ಷಗಳಿಂದ ಪತ್ತೆಹಚ್ಚಲು ಮುಂಬೈ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಈ ಆರೋಪಿಯು 5 ವರ್ಷಗಳ ಕಾಲ ಮತ್ತೊಂದು ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲೇ ಇದ್ದರು ಎಂದು ಬಯಲಾಗಿದೆ.

Add Asianetnews Kannada as a Preferred SourcegooglePreferred

ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (Maharashtra Control of Organised Crime Act) (ಎಂಸಿಒಸಿಎ) (MCOCA) ಪ್ರಕರಣಗಳ ವಿಶೇಷ ನ್ಯಾಯಾಧೀಶ (Judge) ಎ.ಎಂ. ಪಾಟೀಲ್ ಅವರು 1999 ರಲ್ಲಿ ಬಾಂಬೆ ಅಮಾನ್ ಸಮಿತಿಯ ಅಧ್ಯಕ್ಷ ವಾಹಿದ್ ಅಲಿ ಖಾನ್ ಅವರನ್ನು ಹತ್ಯೆಗೈದ ಆರೋಪಿ ಮಹಿರ್ ಸಿದ್ದಿಕಿಯನ್ನು ಖುಲಾಸೆಗೊಳಿಸಿದ್ದು, ಫೆಬ್ರವರಿ 3 ರಂದು ನೀಡಿದ ಆದೇಶದಲ್ಲಿ ಇದನ್ನು ಗಮನಿಸಿದ್ದಾರೆ. ಪ್ರಾಸಿಕ್ಯೂಷನ್ ವಾದದಲ್ಲಿ ನ್ಯಾಯಾಲಯವು ಅನೇಕ ವ್ಯತ್ಯಾಸಗಳನ್ನು ಉಲ್ಲೇಖಿಸಿದ್ದು, ಈ ಹಿನ್ನೆಲೆ ಖುಲಾಸೆಗೊಳಿಸಿದೆ. 

ಇದನ್ನು ಓದಿ: ಚಲಿಸುವ ಸ್ಕೂಟಿ ಮೇಲೆ ಪ್ರೇಮಿಗಳ ರೊಮ್ಯಾನ್ಸ್, ಹುಡುಕಾಟ ಆರಂಭಿಸಿದ ಪೊಲೀಸ್‌!

ಜುಲೈ 1999 ರಲ್ಲಿ ಮುಂಬೈನ ಎಲ್ ಟಿ ಮಾರ್ಗ್ ಪ್ರದೇಶದಲ್ಲಿ ವಾಹಿದ್ ಅಲಿ ಖಾನ್ (Wahid Ali Khan) ಅವರ ಮನೆಯ ಸಮೀಪದಲ್ಲಿ ಸಿದ್ದಿಕಿ ಮತ್ತು ಸಹ-ಆರೋಪಿಗಳು ವಾಹಿದ್ ಅಲಿ ಖಾನ್ ಅವರನ್ನು ಗುಂಡಿಕ್ಕಿ ಕೊಂದಿದ್ದರು. ನಂತರ ಇಬ್ಬರೂ ಅಪರಾಧ ಮಾಡಿದ ನಂತರ ಸ್ಥಳದಿಂದ ಪರಾರಿಯಾಗಿದ್ದರು ಎಂದು ಪ್ರಾಸಿಕ್ಯೂಷನ್ (Prosecution) ವಾದ ಮಾಡಿತ್ತು.

ಮೇ 2019 ರಲ್ಲಿ, ಪೊಲೀಸರು ಮಹಿರ್ ಸಿದ್ದಿಕಿಯನ್ನು (Mahir Siddiqui) ಪತ್ತೆಹಚ್ಚಿ ಬಂಧಿಸಿದರು. ಅವರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳನ್ನು ದೊರೆತ ನಂತರ ಆರೋಪಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ತನಿಖೆಯ ವೇಳೆ, ಸಿದ್ದಿಕಿ ಮತ್ತು ಛೋಟಾ ಶಕೀಲ್ ಸೇರಿದಂತೆ ಆರು ಮಂದಿ ಭಾಗಿಯಾಗಿರುವುದು ಪೊಲೀಸರಿಗೆ ಕಂಡುಬಂದಿದೆ. ಅಲ್ಲದೆ, ಛೋಟಾ ಶಕೀಲ್‌ನ ನಿರ್ದೇಶನದ ಮೇರೆಗೆ ಈ ಅಪರಾಧ ನಡೆದಿದೆ ಎಂದು ಅವರು ಕಂಡುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Madhya Pradesh: ಹಾಡಹಗಲೇ ಬಿಜೆಪಿ ನಾಯಕನ ಮೇಲೆ ಗುಂಡಿನ ದಾಳಿ: ಆರೋಪಿಗಳಿಗಾಗಿ ಹುಡುಕಾಟ

ನ್ಯಾಯಾಲಯವು ತನ್ನ ಆದೇಶದಲ್ಲಿ ಮಹಿರ್ ಸಿದ್ದಿಕಿ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಸುವ ಸಮಯದಲ್ಲಿ, ಘಟನೆಯ ದಿನಾಂಕದಿಂದ ಬಂಧಿಸುವವರೆಗೂ ಆರೋಪ ತಲೆಮರೆಸಿಕೊಂಡಿದ್ದ ಎಂದು ಪ್ರಾಸಿಕ್ಯೂಷನ್ ವಾದ ಮಾಡಿದ್ದ ಬಗ್ಗೆ ಪ್ರಸ್ತಾಪಿಸಿದೆ. 
ಆದರೆ ಆರೋಪಿ 2014 ಮತ್ತು 2019 ರ ನಡುವೆ ಮತ್ತೊಂದು ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿದ್ದು, ಅವರನ್ನು ಸಿಐಡಿ ಬಂಧಿಸಿತ್ತು ಎಂದು ತಿಳಿದುಬಂದಿದೆ. ಹಾಗಾದರೆ ಜೈಲಿನಲ್ಲಿದ್ದ ಆತನನ್ನು ಪತ್ತೆ ಹಚ್ಚಲು ಪೊಲೀಸರು ಹೇಗೆ ವಿಫಲರಾದರು ಎಂದು ಕೋರ್ಟ್‌ ಪ್ರಶ್ನೆ ಮಾಡಿದೆ.

ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿ ಮತ್ತು ವಿಚಾರಣಾಧೀನ ಕೈದಿಯ ದಾಖಲೆಯನ್ನು ನಿರ್ವಹಿಸುತ್ತಿದ್ದರೂ, ಆತನನ್ನು ಹುಡುಕುವಲ್ಲಿ ವಿಫಲರಾಗಿದ್ದಾರೆ. ಪೊಲೀಸ್ ಏಜೆನ್ಸಿಗೆ ತಿಳಿದಿರುವ ಕಾರಣಕ್ಕಾಗಿ ಇದು ಬಯಲಾಗದ ರಹಸ್ಯವಾಗಿದೆ ಎಂದು ನ್ಯಾಯಾಧೀಶರು ಹೇಳಿದರು. ಅಲ್ಲದೆ, ಕೊಲೆಯಾದವರ ಮೇಲೆ ಗುಂಡು ಹಾರಿಸುವ ಸಮಯದಲ್ಲಿ ಆರೋಪಿಯನ್ನು ನೋಡಿರುವುದಾಗಿ ಯಾವುದೇ ಪ್ರತ್ಯಕ್ಷದರ್ಶಿಗಳು ಹೇಳಿಕೊಂಡಿಲ್ಲ ಎಂದೂ ನ್ಯಾಯಾಲಯ ಹೇಳಿದ್ದು, ಪ್ರಾಸಿಕ್ಯೂಷನ್ ಪ್ರಕರಣದಲ್ಲಿನ ವ್ಯತ್ಯಾಸಗಳನ್ನು ಮತ್ತಷ್ಟು ಹೇಳಿದೆ.

ಬೆಂಗಳೂರು: ಚಿರತೆ ಹುಡುಕಾಟದಲ್ಲಿ ಸಿಬ್ಬಂದಿ ಜೊತೆ ಜನಜಾತ್ರೆ..!

ಅಲ್ಲದೆ, ಮಾಹಿತಿದಾರರ ಸಾಕ್ಷ್ಯವು ಅನೇಕ ಅನುಮಾನಗಳಿಂದ ಸುತ್ತುವರಿದಿದೆ ಮತ್ತು ಇತರ ಸಾಕ್ಷಿಗಳೊಂದಿಗೆ ದೃಢೀಕರಿಸುವುದಿಲ್ಲ ಎಂದೂ ನ್ಯಾಯಾಧೀಶರು ಗಮನಿಸಿದರು. ಹಾಗೂ, ವಾಹಿದ್ ಅಲಿ ಖಾನ್‌ಗೆ ಗುಂಡು ಹಾರಿಸಿದ ಪಿಸ್ತೂಲ್ ವಶಪಡಿಸಿಕೊಳ್ಳುವುದನ್ನು ಸಾಬೀತುಪಡಿಸಲು ಪೊಲೀಸರು ವಿಫಲರಾಗಿದ್ದಾರೆ ಮತ್ತು ಅಪರಾಧ ಮಾಡಿದ ನಂತರ ಆರೋಪಿಗಳು ಓಡಿಹೋದ ಮೋಟಾರ್‌ ಸೈಕಲ್ ಅನ್ನು ವಶಪಡಿಸಿಕೊಳ್ಳಲಿಲ್ಲ ಎಂದು ನ್ಯಾಯಾಲಯ ಹೇಳಿದೆ.