ವೈರಲ್ ವೀಡಿಯೊದಲ್ಲಿ,  ಲಕ್ನೋದ ಬೀದಿಗಳಲ್ಲಿ ಚಲಿಸುತ್ತಿರುವ ಸ್ಕೂಟಿಯ ಮುಂಭಾಗದಲ್ಲಿ ಯುವತಿ ಕುಳಿತುಕೊಂಡಿದ್ದು, ಸ್ಕೂಟಿ ಓಡುತ್ತಿರುವ ಯುವಕನನ್ನು ತಬ್ಬಿಕೊಂಡಿದ್ದಾಳೆ. 

ನವದೆಹಲಿ (ಜ.18): ಲಕ್ನೋದ ಹಜರತ್‌ಗಂಜ್ ಪ್ರದೇಶದ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಚಲಿಸುವ ಸ್ಕೂಟಿಯಲ್ಲಿ ಪ್ರೇಮಿಗಳು ರೊಮ್ಯಾನ್ಸ್ ಮಾಡುತ್ತಿರುವುದನ್ನು ತೋರಿಸುತ್ತದೆ. ಲಕ್ನೋ ಪೊಲೀಸರು ಈ ಪ್ರೇಮಿಗಳ ವಿರುದ್ಧ ಕ್ರಮ ಕೈಗೊಳ್ಳಲು ತೀವ್ರ ಹುಡುಕಾಟ ನಡೆಸಿದ್ದಾರೆ. ವಿಡಿಯೋ ವೈರಲ್ ಆದ ತಕ್ಷಣ ಪೊಲೀಸರು ದೃಶ್ಯಾವಳಿಗಳನ್ನು ಪರಿಶೀಲಿಸಲು ಆರಂಭಿಸಿದ್ದಾರೆ. ಲಕ್ನೋ ಕೇಂದ್ರ ವಲಯದ ಉಪ ಪೊಲೀಸ್ ಆಯುಕ್ತ ಅಪರ್ಣಾ ರಜತ್ ಕೌಶಿಕ್, ಈ ವಿಡಿಯೋ ಲಕ್ನೋದಿಂದ ಬಂದಿದ್ದು, ಹಜರತ್‌ಗಂಜ್ ಪ್ರದೇಶದಲ್ಲಿ ತೆಗೆದದ್ದು ಎಂದು ಖಚಿತಪಡಿಸಿದ್ದಾರೆ. ಪ್ರೇಮಿಗಳ ಪತ್ತೆಗೆ ಎರಡು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ. ಅವರನ್ನು ಹಿಡಿಯಲು ಪೊಲೀಸರು ಹತ್ತಿರದ ಕ್ಯಾಮೆರಾಗಳಲ್ಲಿನ ಸಿಸಿಟಿವಿ ದೃಶ್ಯಗಳನ್ನು ಸಹ ಪರಿಶೀಲಿಸುತ್ತಿದ್ದಾರೆ. ಮೋಟಾರು ವಾಹನ ಕಾಯ್ದೆಯಡಿ ಮತ್ತು ಅಶ್ಲೀಲತೆಯನ್ನು ಹರಡಿದ ಪ್ರೇಮಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Scroll to load tweet…

ಹಾಗಂತ ಚಲಿಸುವ ಸ್ಕೂಟಿ ಅಥವಾ ಬೈಕ್‌ನ ಮುಂಭಾಗದಲ್ಲಿ ಹುಡುಗಿಯನ್ನು ಕೂರಿಸಿಕೊಂಡು ರೋಮ್ಯಾನ್ಸ್ ಮಾಡಿದ್ದು ಇದು ಮೊದಲೇನಲ್ಲ. ಚಲಿಸುವ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯೊಬ್ಬಳನ್ನು ಕೂರಿಸಿಕೊಂಡು ರೊಮ್ಯಾನ್ಸ್ ಮಾಡುತ್ತಿದ್ದ ಜೋಡಿಯನ್ನು ಆಂಧ್ರಪ್ರದೇಶದ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಈ ಘಟನೆ ನಡೆದಿತ್ತು. ಯುವ ಜೋಡಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದಲ್ಲದೇ ಜೀವವನ್ನು ಅಪಾಯಕ್ಕಿಟ್ಟು ಸಾರ್ವಜನಿಕ ರಸ್ತೆಯಲ್ಲಿ ರೊಮ್ಯಾನ್ಸ್ ಮಾಡಿದ ಈ ಜೋಡಿಯ ಬಗ್ಗೆ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು. ಹೀಗೆ ನಡುರಸ್ತೆಯಲ್ಲಿ ರೊಮ್ಯಾನ್ಸ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಜೋಡಿಯನ್ನು ಪೊಲೀಸರು ಬಂಧಿಸಿದ್ದರು.

ಚಲಿಸುವ ಬೈಕ್ ಮೇಲೆ ರೊಮ್ಯಾನ್ಸ್ ಮಾಡಿ ವೈರಲ್ ಆದ ಜೋಡಿಯ ಬಂಧನ

ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣದಲ್ಲಿರುವ (Visakhapatnam ) ಸ್ಟೀಲ್ ಪ್ಲಾಂಟ್ (steel plant) ರಸ್ತೆಯಲ್ಲಿ ಈ ವಿಡಿಯೋ ಸೆರೆ ಆಗಿತ್ತು. ಈ ಬೈಕ್‌ ಹಿಂದೆ ಕಾರಿನಲ್ಲಿದ್ದವರು ಈ ಯುವಜೋಡಿಯ ಪಬ್ಲಿಕ್ ರೊಮ್ಯಾನ್ಸ್ ಅನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ವಿಡಿಯೋದಲ್ಲಿ ಹುಡುಗಿ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತಿದ್ದರೆ ಯುವಕ ಆಕೆಯನ್ನೇ ತಬ್ಬಿಕೊಂಡೆ ಬೈಕ್ ಚಾಲನೆ ಮಾಡುತ್ತಿದ್ದ.

ಏನು ಮಾಯೆಯೋ.. 19ರ ತರುಣಿ ಮದ್ವೆ ಆಗಿ ರೊಮ್ಯಾನ್ಸ್‌ಗೆ ವಯಸ್ಸು ಮುಖ್ಯವಲ್ಲ ಎಂದ 70ರ ತಾತ

ಲಕ್ನೋದ ವಿಡಿಯೋದಲ್ಲಿ ಯುವಕ ಯುವತಿಯನ್ನು ಸ್ಕೂಟಿಯ ಮುಂಭಾಗದಲ್ಲಿ ಕೂರಿಸಿಕೊಂಡು ರೋಮ್ಯಾನ್ಸ್‌ ಮಾಡಿದ್ದಾನೆ. ಇದನ್ನು ಹಿಂದಿರುವ ಒಬ್ಬರು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.