ಮುಂಬೈನಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಬೆಂಕಿ ಬಿದ್ದಿದ್ದು, ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಯಾವುದೇ ಸಾವುನೋವುಗಳಾಗಿಲ್ಲ, ಬೆಂಕಿಗೆ ಕಾರಣವೇನೆಂಬುದು ಇನ್ನೂ ತಿಳಿದು ಬಂದಿಲ್ಲ.

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿರುವ ಇಡಿ ಕಚೇರಿಗೆ ಬೆಂಕಿ ಬಿದ್ದಿದೆ. ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿವೆ. ಜಾರಿ ನಿರ್ದೇಶನಾಲಯದ ಕಚೇರಿ ಇರುವ ಬಹುಮಹಡಿ ಕಟ್ಟಡ ಕೈಸರ್-ಐ-ಹಿಂದ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬಗ್ಗೆ ಮಾಹಿತಿ ಬಂದ ಕೂಡಲೇ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದರು. ದಕ್ಷಿಣ ಮುಂಬೈನ ಬಲ್ಲಾರ್ಡ್ ಪ್ರದೇಶದ ಕರಿಂಬೋಯ್ ರಸ್ತೆಯಲ್ಲಿರುವ ಗ್ರ್ಯಾಂಡ್ ಹೋಟೆಲ್ ಬಳಿ ಮಧ್ಯರಾತ್ರಿ ಈ ಘಟನೆ ನಡೆದಿದೆ. ಕೂಡಲೇ 12 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ.

ರಾತ್ರಿ ಎರಡೂವರೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು. 3.30ರ ಸುಮಾರಿಗೆ ಇದು ಎರಡನೇ ಹಂತದ ಬೆಂಕಿ (Level-II fire) ಅನಾಹುತ ಇದು ಎಂದು ಪರಿಗಣಿಸಲಾಯ್ತು. ಈ ಘಟನೆಯನ್ನು ಕೆಲವರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ದಟ್ಟವಾದ ಹೊಗೆ ಕಟ್ಟಡದಿಂದ ಹೊರ ಹೋಗುವುದನ್ನು ನೋಡಬಹುದು. ಐದು ಅಂತಸ್ತಿನ ಕಟ್ಟಡದ ನಾಲ್ಕನೇ ಮಹಡಿಗೆ ಬೆಂಕಿ ಸೀಮಿತವಾಗಿತ್ತು ಎಂದು ನಾಗರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಗ್ನಿಶಾಮಕ ಯಂತ್ರಗಳು, ಆರು ಜಂಬೋ ಟ್ಯಾಂಕರ್‌ಗಳು, ಒಂದು ವೈಮಾನಿಕ ನೀರಿನ ಗೋಪುರ, ಒಂದು ಉಸಿರಾಟದ ಉಪಕರಣದ ವ್ಯಾನ್, ಒಂದು ರಕ್ಷಣಾ ವ್ಯಾನ್, ಒಂದು ತ್ವರಿತ ಪ್ರತಿಕ್ರಿಯೆ ವಾಹನ ಮತ್ತು ಆಂಬ್ಯುಲೆನ್ಸ್ ಅನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಯಿತು. ಆದರೆ ಈ ಬೆಂಕಿಗೆ ಕಾರಣ ಏನು ಎಂಬ ಬಗ್ಗೆ ಇನ್ನೂ ಸರಿಯಾದ ಮಾಹಿತಿ ಇಲ್ಲ ಎಂದು ಮುಂಬೈ ಅಗ್ನಿ ಶಾಮಕ ಸಿಬ್ಬಂದಿ ಹೇಳಿದ್ದಾರೆ. 

Scroll to load tweet…


ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ಆರು ಪೌರ ಕಾರ್ಮಿಕರು ಸಾವು
ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಶನಿವಾರ ಬೆಳಗ್ಗೆ ನಡೆದ ಭೀಕರ ಅಪಘಾತವೊಂದರಲ್ಲಿ ಆರು ಜನ ಸಾವನ್ನಪ್ಪಿದ್ದಾರೆ. ಹರಿಯಾಣದ ನುಹ್ ಜಿಲ್ಲೆಯ ಫಿರೋಜ್‌ಪುರ್ ಝಿರ್ಕಾದ ಇಬ್ರಾಹಿಂ ಬಾಸ್ ಗ್ರಾಮದ ಬಳಿ ವೇಗವಾಗಿ ಬಂದ ಪಿಕಪ್ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಆರು ಜನ ಪೌರ ಕಾರ್ಮಿಕರು ದುರಂತವಾಗಿ ಸಾವನ್ನಪ್ಪಿದ್ದು, ಇತರ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಕ್ಸ್‌ಪ್ರೆಸ್ ವೇ ಸ್ವಚ್ಛಗೊಳಿಸುತ್ತಿದ್ದಾಗ ಈ ದುರಂತ ನಡೆದಿದೆ. ಬೆಳಗ್ಗೆ 10:00 ಗಂಟೆಯ ಸುಮಾರಿಗೆ ಹೈ-ಸ್ಪೀಡ್ ಕಾರಿಡಾರ್‌ನಲ್ಲಿ ದಿನನಿತ್ಯದ ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ದೆಹಲಿಯಿಂದ ಅಲ್ವಾರ್ ಕಡೆಗೆ ಹೋಗುತ್ತಿದ್ದ ಪಿಕಪ್ ವ್ಯಾನ್ ನಿಯಂತ್ರಣ ತಪ್ಪಿ ಕಾರ್ಮಿಕರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇತರ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ನಂತರ, ಪಿಕಪ್ ಟ್ರಕ್‌ನ ಚಾಲಕ ಸ್ಥಳದಲ್ಲಿ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಮೃತ ಕಾರ್ಮಿಕರಲ್ಲಿ ಐವರು ಖೇರಿ ಕಲಾನ್ ಗ್ರಾಮದವರು ಮತ್ತು ಒಬ್ಬರು ಜಿಮ್ರಾವತ್ ಗ್ರಾಮದವರು. 

ಇದನ್ನೂ ಓದಿ:ಖಾಸಗಿ ಅಂಗ ಪರೀಕ್ಷಿಸಿ 20 ಹಿಂದೂಗಳ ಮೇಲೆ ಗುಂಡು: ಕಾಶ್ಮೀರ ತನಿಖಾಧಿಕಾರಿಗಳ ಶಾಕಿಂಗ್​ ಮಾಹಿತಿ!

ಘಟನೆಗೆ ಸಂಬಂಧಿಸಿದಂತೆ ಫಿರೋಜ್‌ಪುರ ಝಿರ್ಕಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (SHO) ಅಮನ್ ಸಿಂಗ್ ಮಾತನಾಡಿ, ನಾವು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ. ಅಪಘಾತವು ಅತ್ಯಂತ ಹಿಂಸಾತ್ಮಕವಾಗಿತ್ತು. ನಾವು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದೇವೆ ಮತ್ತು ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಅಜೈಬ್ ಸಿಂಗ್ ಹೇಳಿದರು. ಅಪಘಾತದಲ್ಲಿ ಆರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ಅವರು ದೃಢಪಡಿಸಿದ್ದಾರೆ ಆದರೆ ಗಾಯಗೊಂಡ ಐದು ಕಾರ್ಮಿಕರಲ್ಲಿ ಒಬ್ಬರು ಪುರುಷರಾಗಿದ್ದಾರೆ. ಗಾಯಗೊಂಡ ಕಾರ್ಮಿಕರನ್ನು ಮಂಡಿ ಖೇರಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: 3 ದಿನದಲ್ಲಿ 6 ಉಗ್ರರ ಮನೆ ಪುಡಿ: ಬೆಂಬಲಿಗರಿಗೂ ಶಾಕ್‌: ಮನೆ ಮನೆ ಹುಡುಕಾಟ ತೀವ್ರ